ಲಕ್ನೋ: ಚುನಾವಣಾ (Lok Sabha Election) ಪ್ರಚಾರದ ಸಂದರ್ಭದಲ್ಲಿ ನಾವು ಗೆದ್ದರೆ ಮರುದಿನವೇ ನಿಮ್ಮ ಖಾತೆಗೆ ಹಣ ಹಾಕುವುದಾಗಿ ಕಾಂಗ್ರೆಸ್ ನಾಯಕರು (Congress Leaders) ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಇಂದು ಲಕ್ನೋ (Lucknow) ಕಾಂಗ್ರೆಸ್ ಕಚೇರಿಗೆ (Congress Office) ಭಾರೀ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು (Muslim Women) ಆಗಮಿಸಿದ್ದರು.
ಕೈಯಲ್ಲಿ ಗ್ಯಾರಂಟಿ ಕಾರ್ಡ್ (Guarantee Card) ಹಿಡಿದ ಬಂದ ಅವರು ಕಾಂಗ್ರೆಸ್ ಗೆದ್ದರೆ ಹಣ ಹಾಕುವುದಾಗಿ ತಿಳಿಸಿದ್ದರು. ಹೀಗಾಗಿ ಗ್ಯಾರಂಟಿ ಕಾರ್ಡ್ ಹಿಡಿದುಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
Advertisement
Women lined up outside the #Congress office in Lucknow for ‘guarantee cards’ of one lakh rupees as promised.
Rahul Baba should now arrange 1 lakh rupees for every woman, Khata…Khat…Khata…Khat…, to fulfill the promises he made. pic.twitter.com/tNyMqtaspK
— Vishnu Vardhan Reddy (Modi ka Parivar) (@SVishnuReddy) June 5, 2024
Advertisement
ಕೆಲವರು ಈ ಹಿಂದೆಯೇ ನಾವು ಖಾತೆ ವಿವರ ನೀಡಿ ಫಾರಂ ಭರ್ತಿ ಮಾಡಿದ್ದೇವೆ. ಕಾಂಗ್ರೆಸ್ ಕಚೇರಿಯಿಂದ ನಮಗೆ ಸ್ವೀಕೃತಿ ರಸೀದಿ ಸಿಕ್ಕಿದೆ. ಗೆದ್ದ ನಂತರ ಕಚೇರಿಗೆ ಬಂದರೆ ದುಡ್ಡು ನೀಡುವುದಾಗಿ ತಿಳಿಸಿದ್ದರು. ಹೀಗಾಗಿ ನಾವು ಬಂದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು, ಕಾಂಗ್ರೆಸ್ ಸೋಲಿಗೆ ಕಾರಣಗಳೇನು?
Advertisement
ಕರ್ನಾಟಕದಲ್ಲಿ ಹೇಗೆ ಕಾಂಗ್ರೆಸ್ ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ಗಳನ್ನು ಹೇಗೆ ಹಂಚಿಕೆ ಮಾಡಿತ್ತೋ ಅದೇ ರೀತಿಯಾಗಿ ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್, ಎಸ್‌ಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಹಂಚಿಕೆ ಮಾಡಿದ್ದರು. ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ತಿಂಗಳಿಗೆ 8,500 ರೂ. ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು.
Advertisement
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಅವರು ತಮ್ಮ ಭಾಷಣದಲ್ಲಿ ಕಟಾ ಕಟ್ ಕಟಾ ಕಟ್ ಅಂತ ಹೇಳಿ ಮಹಿಳೆಯರ ಖಾತೆಗೆ ವರ್ಷಕ್ಕೆ 1 ಲಕ್ಷ ರೂ. ಹಾಕುವುದಾಗಿ ಹೇಳುತ್ತಿದ್ದರು. ಉತ್ತರ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಈ ಬಾರಿ ಮಹಿಳೆಯರು ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಎಸ್‌ಪಿ ಹೆಚ್ಚಿನ ಸ್ಥಾನ ಗೆಲ್ಲಲು 1 ಲಕ್ಷ ರೂ. ನೀಡುವ ಗ್ಯಾರಂಟಿ ಭಾರೀ ಪರಿಣಾಮ ಬಿದ್ದಿದೆ ಎಂಬ ವಿಶ್ಲೇಷಣೆ ಈಗ ಕೇಳಿ ಬರುತ್ತಿದೆ.
ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ ಎಸ್‌ಪಿ 37, ಬಿಜೆಪಿ 33, ಕಾಂಗ್ರೆಸ್ 6, ಆರ್‌ಎಲ್‌ಡಿ 2 ಸ್ಥಾನಗಳನ್ನು ಗೆದ್ದುಕೊಂಡಿದೆ.