ತುಮಕೂರು: ಬಿಜೆಪಿ (BJP) ಅಭ್ಯರ್ಥಿಯಾಗಿ ತುಮಕೂರಿನಿಂದ (Tumakuru) ಸ್ಪರ್ಧಿಸುತ್ತಿರುವ ಸೋಮಣ್ಣ (Somanna) ಅವರು ಪತ್ನಿ ಶೈಲಜಾ ಆಸ್ತಿ ಸೇರಿ ಒಟ್ಟು 60.78 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದ್ದಾರೆ.
ಇಂದು ಸೋಮಣ್ಣ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮೊದಲ ಸೆಟ್ ನಾಮಪತ್ರ (Nomination) ಸಲ್ಲಿಕೆ ಮಾಡಿದರು. ಇಂದು ಮೊದಲ ಸೆಟ್ ನಾಮಪತ್ರ ಸಲ್ಲಿಸಿದ ಸೋಮಣ್ಣ ಏ.3 ರಂದು ಮೆರವಣಿಗೆ ಮೂಲಕ ಬಂದು ಇನ್ನೊಂದು ಸೆಟ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಸುರೇಶ್ ಗೌಡ ಸೋಮಣ್ಣಗೆ ಸಾಥ್ ನೀಡಿದರು.
Advertisement
ಸೋಮಣ್ಣ ಮತ್ತು ಪತ್ನಿ ಶೈಲಜಾ ಅವರು ಬಾಡಿಗೆ ಆದಾಯ, ಠೇವಣಿಗೆ ಬಡ್ಡಿ, ಆಸ್ತಿ ಮಾರಾಟ, ಕೃಷಿ ಆದಾಯ ತನ್ನ ಆದಾಯದ ಮೂಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಕೇಂದ್ರದಿಂದ ಬಿಗ್ ರಿಲೀಫ್ – ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ
Advertisement
ಸೋಮಣ್ಣ ಆಸ್ತಿ ಎಷ್ಟಿದೆ?
ಕೈಯಲ್ಲಿರುವ ನಗದು – 8,12,563 ರೂ.
ಚರಾಸ್ತಿ – 5,18,23,590 ರೂ.
ಸ್ಥಿರಾಸ್ತಿ – 12,56,00,000 ರೂ.
ಸಾಲ – 6,44,52,206 ರೂ.
ಚಿನ್ನ, ಬೆಳ್ಳಿ ಆಭರಣ – 10,35,000 ರೂ. ಇದನ್ನೂ ಓದಿ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ಸಂಸದ ದಿಲೀಪ್ ಘೋಷ್, ಕಾಂಗ್ರೆಸ್‌ನ ಸುಪ್ರಿಯಾಗೆ ಚುನಾವಣಾ ಆಯೋಗ ಛೀಮಾರಿ
Advertisement
Advertisement
ಸೋಮಣ್ಣ ಪತ್ನಿ ಶೈಲಜಾ ಆಸ್ತಿ ಎಷ್ಟಿದೆ?
ಚರಾಸ್ತಿ – 4,38,81,625 ರೂ.
ಸ್ಥಿರಾಸ್ಥಿ – 38,65,00,000 ರೂ.
ಸಾಲ – 16,18,48,255 ರೂ.
ಚಿನ್ನ, ಬೆಳ್ಳಿ, ಆಭರಣ – 1,05,64,689 ರೂ.