ಸುಣ್ಣ ಬಣ್ಣ ಬಳಿದು ಮನೆ ಸ್ವಚ್ಛ – ಈ ಬಾರಿಯೂ ಅಮೇಠಿಯಿಂದ ರಾಹುಲ್‌ ಸ್ಪರ್ಧೆ?

Public TV
1 Min Read
Rahul Gandhi priyanka vadra

ಲಕ್ನೋ: ರಾಹುಲ್‌ ಗಾಂಧಿ (Rahul Gandhi) ಬಾರಿಯೂ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ (Amethi Lok Sabha constituency) ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ರಾಹುಲ್‌ ಗಾಂಧಿಯ ಚುನಾವಣಾ ರಾಜಕಾರಣಕ್ಕೆ ಜನ್ಮ ನೀಡಿದ್ದ ಉತ್ತರ ಪ್ರದೇಶ ಅಮೇಠಿ ಕ್ಷೇತ್ರದಲ್ಲಿ ಅವರ ಮನೆಯನ್ನು ನವೀಕರಣ (House Renovation) ಮಾಡುತ್ತಿರುವುದರಿಂದ ಈಗ ಈ ಪ್ರಶ್ನೆ ಎದ್ದಿದೆ.

ಅಮೇಠಿ ನಗರದ ಗೌರಿಗಂಜ್‌ ನಗರದಲ್ಲಿರುವ ರಾಹುಲ್‌ ಅವರ ನಿವಾಸವನ್ನು ಸುಣ್ಣಬಣ್ಣ ಬಳಿದು ಸ್ವಚ್ಛಗೊಳಿಸಿ ಉದ್ಯಾನವನ್ನು ಅಂದಗೊಳಿಸುವ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲದೇ ಚುನಾವಾಣಾ ಪ್ರಚಾರದ ಭಿತ್ತಿಪತ್ರಗಳನ್ನೂ ತಂದಿರಿಸಲಾಗಿದೆ. ಈ ಕೆಲಸಗಳನ್ನು ನೋಡಿ ಮತ್ತೆ ರಾಹುಲ್‌ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಎನ್ನಲಾಗುತ್ತಿದೆ. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

rahul gandhi nomination wayanad

ಕಳೆದ ವಾರ ಗಾಜಿಯಾಬಾದ್‌ನಲ್ಲಿ ಪತ್ರಕರ್ತರೊಬ್ಬರು ನೀವು ಅಮೇಠಿಯಿಂದ ಸ್ಪರ್ಧೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ರಾಹುಲ್‌ ಗಾಂಧಿ, ಇದು ಬಿಜೆಪಿಯ ಪ್ರಶ್ನೆ. ತುಂಬಾ ಒಳ್ಳೆಯದು. ನಮ್ಮ ಪಕ್ಷದಲ್ಲಿ ಎಲ್ಲಾ ಅಭ್ಯರ್ಥಿಗಳ ಆಯ್ಕೆ ನಿರ್ಧಾರಗಳನ್ನು ಕಾಂಗ್ರೆಸ್ ಚುನಾವಣಾ ಸಮಿತಿಯು ತೆಗೆದುಕೊಳ್ಳುತ್ತದೆ. ನಾನು ಪಕ್ಷದ ಸೈನಿಕನಾಗಿದ್ದು ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್‌ ಕುಸಿದರೂ ಗೆದ್ದ ಇಂದಿರಾ

ರಾಹುಲ್‌ ಈಗಾಗಲೇ ಕೇರಳದ ವಯನಾಡಿನಿಂದ (Wayanad) ನಾಮಪತ್ರ ಸಲ್ಲಿಸಿದ್ದಾರೆ. ಏ.26 ರಂದು ಚುನಾವಣೆ ನಡೆಯಲಿದೆ.

2004ರ ಬಳಿಕ ರಾಹುಲ್ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದರು. 2019 ಲೋಕಸಭಾ ಚುನಾವಣೆಯಲ್ಲಿ ರಾಹುಲ್ 55 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು. ಬಿಜೆಪಿಯ ಸ್ಮೃತಿ ಇರಾನಿ (Smriti Irani) 4,68,514 ಮತಗಳನ್ನು ಪಡೆದಿದ್ದರೆ ರಾಹುಲ್‌ 4,13,394 ಮತಗಳನ್ನು ಪಡೆದಿದ್ದರು. ರಾಹುಲ್‍ರ ಈ ಸೋಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ ಉಂಟು ಮಾಡಿತ್ತು.

2024ರ ಚುನಾವಣೆಯಲ್ಲೂ ಬಿಜೆಪಿಯಿಂದ ಸ್ಮೃತಿ ಇರಾನಿ ಕಣಕ್ಕೆ ಇಳಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಜೊತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ.

Share This Article