– ಕೇರಳ ಸಿಎಂ ಜೈಲಿಗೆ ಹೋಗಿಲ್ಲ ಯಾಕೆ ಎಂದು ಪ್ರಶ್ನಿಸಿದ್ದ ರಾಹುಲ್
– ರಾಹುಲ್ ವಿರುದ್ಧ ಮುಗಿಬಿದ್ದ ಸಿಪಿಎಂ ನಾಯಕರು
ತಿರುವನಂತಪುರಂ: ವಯನಾಡಿನಿಂದ ಸ್ಪರ್ಧೆ ಮಾಡಿರುವ ರಾಹುಲ್ ಗಾಂಧಿ (Rahul Gandhi) ವಿರುದ್ಧ ಎಡಪಕ್ಷಗಳು ಹರಿಹಾಯುತ್ತಲೇ ಇವೆ. ಈ ಮಧ್ಯೆ ರಾಹುಲ್ ಗಾಂಧಿ ಅವರ ಡಿಎನ್‌ಎ (DNA) ಪ್ರಶ್ನಿಸಿ ಸಿಪಿಎಂ ಬೆಂಬಲಿತ ಪಕ್ಷೇತರ ಶಾಸಕ ಅನ್ವರ್ (Anvar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
ಮಲಪ್ಪುರಂನ ಪಕ್ಷದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅನ್ವರ್, ರಾಹುಲ್ ಅವರಿಗೆ ಗಾಂಧಿ (Gandhi) ಹೆಸರನ್ನು ಬಳಸುವ ಹಕ್ಕು ಇಲ್ಲ. ಅವರು ನಾಲ್ಕನೇ ದರ್ಜೆಯ ನಾಗರಿಕರ ಮಟ್ಟಕ್ಕೆ ಕುಸಿದಿದ್ದಾರೆ. ಅವರು ನೆಹರೂ ಕುಟುಂಬದಲ್ಲಿ ಜನಿಸಿದ್ದಾರಾ ಎಂಬುದರ ಬಗ್ಗೆ ನನಗೆ ಅನುಮಾನವಿದೆ. ಹೀಗಾಗಿ ಅವರ ಡಿಎನ್ಎ ಪರೀಕ್ಷಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪತನ 2014 ರಿಂದ ಅಲ್ಲ1996 ರಿಂದ ಆರಂಭ!
Advertisement
Advertisement
ಈ ಹೇಳಿಕೆಯ ಬಗ್ಗೆ ಗರಂ ಆಗಿರುವ ಕಾಂಗ್ರೆಸ್, ಅನ್ವರ್ ಆಕ್ಷೇಪಾರ್ಹ ಹೇಳಿಕೆ ಹಿಂದೆ ಸಿಎಂ ಪಿಣರಾಯ್ (Pinarayi Vijayan) ಪಾತ್ರವಿದೆ ಎಂದು ಆರೋಪಿಸಿದೆ. ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಕೋರಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Advertisement
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ರಾಹುಲ್ ವ್ಯಂಗ್ಯವಾಡಿದ ಬಗ್ಗೆ ಟೀಕಿಸಿದ ಬಳಿಕ ಈ ಹೇಳಿಕೆ ಪ್ರಕಟವಾಗಿದೆ. ಮಂಗಳವಾರ ವಿಜಯನ್ ಅವರು ಅನ್ವರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಲೋಕ ಅಖಾಡದಲ್ಲಿರುವ ಮಾಜಿ ಸಿಎಂಗಳು- ಯಾರೆಲ್ಲ ಕಣದಲಿದ್ದಾರೆ?, ಯಾವ ಅವಧಿಯಲ್ಲಿ ಸಿಎಂ ಆಗಿದ್ದಾರೆ?
ಪಿಣರಾಯಿ ವಿಜಯನ್ ಮಾತನಾಡಿ, ರಾಹುಲ್ ಗಾಂಧಿ ಮಾತನಾಡುವಾಗ ಜಾಗರೂಕವಾಗಿರಬೇಕು. ರಾಹುಲ್ ಈಗ ಬದಲಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ರಾಷ್ಟ್ರದ ಉದ್ದಗಲಕ್ಕೂ ನಡೆದಾಡಿದ್ದರಿಂದ ರಾಹುಲ್ ಜ್ಞಾನ ಸಂಪಾದಿಸಿರಬಹುದೆಂದು ನಾನು ಭಾವಿಸಿದ್ದೆ. ಆದರೆ ಅವರು ಕೇರಳದಲ್ಲಿ ನೀಡಿದ ಹೇಳಿಕೆ ರಾಜಕೀಯ ನಾಯಕನಿಗೆ ಶೋಭೆ ತರುವುದಿಲ್ಲ. ಈ ರೀತಿಯ ಹೇಳಿಕೆ ನೀಡಿ ಬಿಜೆಪಿಗೆ ಅವರು ಸಹಾಯ ಮಾಡಬಾರದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲು INDIA ಒಕ್ಕೂಟ ರಚಿಸಿರುವ ಕಾಂಗ್ರೆಸ್ ಮತ್ತು ಸಿಪಿಐಂ ಕೇರಳದಲ್ಲಿ (Kerala) ಪರಸ್ಪರ ವಾಗ್ದಾಳಿ ನಡೆಸುತ್ತಿದೆ. ಕಳೆದ ವಾರ ಕೇರಳದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇಬ್ಬರು ಮುಖ್ಯಮಂತ್ರಿಗಳು ಜೈಲಿನಲ್ಲಿದ್ದಾರೆ. ಕೇರಳದ ಮುಖ್ಯಮಂತ್ರಿ ಜೈಲಿಗೆ ಹೋಗಿಲ್ಲ ಅಂದರೆ ಅರ್ಥ ಏನು? ನಾನು ಬಿಜೆಪಿ ಮೇಲೆ 24×7 ದಾಳಿ ಮಾಡುತ್ತಿದ್ದೇನೆ. ಆದರೆ ಕೇರಳದ ಮುಖ್ಯಮಂತ್ರಿ ನನ್ನ ಮೇಲೆ 24×7 ದಾಳಿ ನಡೆಸುತ್ತಿದ್ದಾರೆ. ಇದು ಸ್ವಲ್ಪ ಗೊಂದಲಮಯವಾಗಿದೆ ಎಂದು ಹೇಳಿ ವಾಗ್ದಾಳಿ ನಡೆಸಿದ್ದರು.
ರಾಹುಲ್ ಗಾಂಧಿಯ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಎಲ್‌ಡಿಎಫ್ ಸಮನ್ವಯಕಾರ ಇಪಿ ಜಯರಾಜನ್, ಪಿಣರಾಯಿ ವಿಜಯನ್ ಅವರು ಬೆಳ್ಳಿಯ ಚಮಚದೊಂದಿಗೆ ಹುಟ್ಟಿದ ವ್ಯಕ್ತಿ ಅಥವಾ ವಿದೇಶದಿಂದ ಆಮದು ಮಾಡಿದ ಹಾಲು ಕುಡಿದು ಬೆಳೆದ ವ್ಯಕ್ತಿ ಅಲ್ಲ. ಎಸಿ ಬಸ್ಸಿನಲ್ಲಿ ಪ್ರಯಾಣಿಸಿದರೆ ಜನರ ಸಮಸ್ಯೆ ಅರ್ಥವಾಗುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ರಾಹುಲ್ ಗಾಂಧಿ ಬಂಧನ ಯಾಕೆ ಆಗಲಿಲ್ಲ? ರಾಷ್ಟ್ರೀಯ ನಾಯಕನಾಗಿರುವ ಇವರು ಈ ರೀತಿ ಮಾತನಾಡಿದರೆ ಕಾಂಗ್ರೆಸ್ ಪಕ್ಷ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದರು.