ತಿರುವನಂತಪುರಂ: ವಯನಾಡ್‌ನಲ್ಲಿ (Wayanad) ರಾಹುಲ್ ಗಾಂಧಿಗೆ (Rahul Gandhi) ಬಿಜೆಪಿ ಬಿಗ್ ಶಾಕ್ ನೀಡಿದೆ. ವಯನಾಡ್ ಕಾಂಗ್ರೆಸ್ (Congress) ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿಎಂ ಸುಧಾಕರನ್ (PM Sudhakaran) ಅವರು ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಸುಧಾಕರನ್, ನನಗೆ ರಾಹುಲ್ ಗಾಂಧಿ ಲಭ್ಯವಾಗದೇ ಇರುವಾಗ ಸಾಮಾನ್ಯ ಜನರಿಗೆ ಅವರು ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈಗಾಗಲೇ ಅವರಿಗೆ ಐದು ವರ್ಷಗಳ ಕಾಲಾವಕಾಶ ನೀಡಲಾಯಿತು. ನಾವು ಇನ್ನೊಂದು ಅವಧಿಯನ್ನು ನೀಡಿದರೆ ಅದು ವಯನಾಡಿನ ಅಭಿವೃದ್ಧಿಯ ಭವಿಷ್ಯವನ್ನು ನಾಶಪಡಿಸುತ್ತದೆ ಎಂದು ಹೇಳಿದರು.
Advertisement
Welcome to the @BJP4Keralam family, Shri PM Sudhakaran. He was the General Secretary of Wayanad DCC. Your decision to join us in our journey towards Viksit Bharat under the leadership of PM Shri @narendramodi ji, and dedication to serving the people of Wayanad is truly… pic.twitter.com/nwW3HE7fMy
— K Surendran(മോദിയുടെ കുടുംബം) (@surendranbjp) April 20, 2024
Advertisement
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಭಿವೃದ್ಧಿಯ ದೃಷ್ಟಿಕೋನವನ್ನು ಮೆಚ್ಚಿದ ಸುಧಾಕರನ್, ಕೇರಳದ ಬಿಜೆಪಿ ಮುಖ್ಯಸ್ಥರು ವಯನಾಡ್ ಲೋಕಸಭಾ ಕ್ಷೇತ್ರದಿಂದ ಜಯಗಳಿಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಅಂಜುಮನ್ ಕಾಲೇಜು ಕೊಠಡಿಗೆ ನೇಹಾ ಹೆಸರು; ಧಾರವಾಡದಲ್ಲಿ ಸೋಮವಾರ ಅರ್ಧದಿನ ವ್ಯಾಪಾರ ಬಂದ್
Advertisement
VIDEO | Here’s what BJP leader Agnimitra Paul said on PM Modi’s remark on Congress MP Rahul Gandhi.
“He ran away from Amethi in fear, now he will have to leave from Wayanad as well. He is only good at making empty talks, or he has no political relevance.”#LSPolls2024WithPTI… pic.twitter.com/agbYu6bfCP
— Press Trust of India (@PTI_News) April 21, 2024
Advertisement
ಬಿಜೆಪಿ ಇಂದಿನ ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿರುವ ಪಕ್ಷವಾಗಿದೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಯೋಜನೆಗಳು ಜಾರಿಯಾಗಬೇಕಾದರೆ ಕೆ ಸುರೇಂದ್ರನ್ ಅವರನ್ನು ವಯನಾಡ್ ಸಂಸದರನ್ನಾಗಿ ಆಯ್ಕೆ ಮಾಡಬೇಕು ಮತ್ತು ಆ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇನೆ. ಬಿಜೆಪಿಯ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಆಯ್ಕೆ ಮಾಡಿದರೆ ವಯನಾಡಿನ ಜನರು ಅದರ ಲಾಭ ಪಡೆಯಲಿದ್ದಾರೆ ಸುಧಾಕರನ್ ಹೇಳಿದರು.
ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಕೇರಳದ ಎಲ್ಲಾ 20 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಸಿಪಿಐನ ಅನ್ನಿ ರಾಜಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ವಿರುದ್ಧ ರಾಹುಲ್ ಗಾಂಧಿ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: Madhya Pradesh : ಮಹಿಳೆ ಮೇಲೆ 1 ತಿಂಗಳ ಕಾಲ ರೇಪ್ – ಜೆಸಿಬಿಯಿಂದ ಆರೋಪಿಯ ಮನೆ ಧ್ವಂಸ
2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡ್‌ನಿಂದ 4.31 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.