ನವದೆಹಲಿ: ಐದನೇ ಹಂತದ ಲೋಕಸಭೆ ಚುನಾವಣೆಗೆ (Lok Sabha Election) ನಾಮಪತ್ರ ಸಲ್ಲಿಸಲು ಶುಕ್ರವಾರ ಮಾತ್ರ ಅವಕಾಶವಿದೆ. ಆದರೂ ರಾಯ್‌ಬರೇಲಿ (Raebareli) ಮತ್ತು ಅಮೇಥಿ (Amethi) ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ (Congress) ಇನ್ನೂ ಅಂತಿಮಗೊಳಿಸಿಲ್ಲ.
ರಾಹುಲ್ ಗಾಂಧಿ (Rahul Gandhi) ಅಮೇಠಿ, ರಾಯ್‌ಬರೇಲಿ ಪೈಕಿ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಅಥವಾ ಕಣಕ್ಕೆ ಇಳಿಯಲ್ವೋ ಎಂದು ಕುತೂಹಲ ಮನೆ ಮಾಡಿದೆ. ಅದೇ ರೀತಿ ಪ್ರಿಯಾಂಕಾ ವಾದ್ರಾ (Priyanka Vadra) ಸ್ಪರ್ಧೆ ಮಾಡ್ತಾರೋ ಇಲ್ವೋ ಎಂಬ ವಿಚಾರ ಕೂಡ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಪ್ರಜ್ವಲ್ ಕೇಸ್ – ಜಡ್ಜ್ ಮುಂದೆ ಸಂತ್ರಸ್ತೆಯಿಂದ ಹೇಳಿಕೆ: ಏನಿದು ಸಿಆರ್ಪಿಸಿ ಸೆಕ್ಷನ್ 164? ಹೇಳಿಕೆಗೆ ಯಾಕಿಷ್ಟು ಮಹತ್ವ?
ಸದ್ಯದ ಮಾಹಿತಿ ಪ್ರಕಾರ ರಾಹುಲ್ ರಾಯ್‌ಬರೇಲಿಯಿಂದ ರಾಬರ್ಟ್ ವಾದ್ರಾ (Robert Vadra) ಅಮೇಠಿಯಿಂದ ಕಣಕ್ಕೆ ಇಳಿಯುವ ಇಳಿಯುವ ಲೆಕ್ಕಾಚಾರಗಳು ಕೇಳಿಬರುತ್ತಿದೆ. ರಾಹುಲ್ ಅಮೇಠಿಯಿಂದ ಸ್ಪರ್ಧೆ ಮಾಡಲಿ, ನಮ್ಮ ಬೆಂಬಲವಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ ಎನ್ನಲಾಗಿದೆ.
ಮೋದಿ ಬಂದಲ್ಲಿ ಹೋದಲ್ಲಿ ಕಾಂಗ್ರೆಸ್ ಪರಿವಾರವಾದಿ ಪಕ್ಷ ಎಂದು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾರನ್ನು ಕಣಕ್ಕೆ ಇಳಿಸಲು ರಾಹುಲ್ ಗಾಂಧಿ ಹಿಂದೇಟು ಹಾಕ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.