ಅಜ್ಜಿ ಗೆದ್ದಿದ್ದ ತೆಲಂಗಾಣದ ಮೇದಕ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಲೋಕಸಭೆಗೆ ಸ್ಪರ್ಧೆ?

Public TV
1 Min Read
Priyanka Gandhi 1

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಮೊದಲ ಬಾರಿ ತೆಲಂಗಾಣದಿಂದ (Telangana) ಕಣಕ್ಕೆ ಇಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸಕ್ರಿಯ ರಾಜಕಾರಣಕ್ಕೆ ಇಳಿದು ಪ್ರಿಯಾಂಕಾ ಗಾಂಧಿ ಹಲವು ವರ್ಷಗಳೇ ಕಳೆದಿವೆ. ಆದರೂ ಅವರು ಇಲ್ಲಿಯವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರಲಿಲ್ಲ. ಇದೀಗ ಅವರನ್ನು ಲೋಕಸಭೆಯಿಂದ ಕಣಕ್ಕೆ ಇಳಿಸುವ ಆಲೋಚನೆಯನ್ನು ಪಕ್ಷದ ಹೈಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂಬುದು ತಿಳಿದುಬಂದಿದೆ.

PRIYANKA gandhi

ಅಜ್ಜಿ ಇಂದಿರಾ ಹಾದಿಯಲ್ಲಿ ಪ್ರಿಯಾಂಕಾ:
1980ರಲ್ಲಿ ಇಂದಿರಾ ಗಾಂಧಿ ಮೇದಕ್ (Medak) ಲೋಕಸಭಾ ಕ್ಷೆತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಇದೀಗ ಪ್ರಿಯಾಂಕಾ ಗಾಂಧಿಯೂ ಅಜ್ಜಿ ನಡೆದಿದ್ದ ಹಾದಿಯಲ್ಲಿಯೇ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ತೆಲಂಗಾಣದ ಭಾಗವಾಗಿರುವ ಮೇದಕ್ ಅಥವಾ ಮೆಹಬೂಬ್ ನಗರದಿಂದ ಪ್ರಿಯಾಂಕಾರನ್ನು ಕಣಕ್ಕೆ ಇಳಿಸುವ ಗಂಭೀರ ಯೋಚನೆಯನ್ನು ಪಕ್ಷ ನಡೆಸಿದೆ.

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಬಳಿಕ 1978ರಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿ ರಾಜಕೀಯದಲ್ಲಿ ಮರುಜನ್ಮ ಪಡೆದಿದ್ದರು. ನಂತರ 1980ರಲ್ಲಿ ಚುನಾವಣೆಗೆ ತೆಲಂಗಾಣದ ಮೇದಕ್ ಲೋಕಸಭಾ ಕ್ಷೆತ್ರವನ್ನು ಆಯ್ಕೆಮಾಡಿಕೊಂಡಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಬಿಜೆಪಿ ಲೆಕ್ಕಾಚಾರ ಏನು?

ಇದೀಗ ಪ್ರಿಯಾಂಕಾ ಗಾಂಧಿಯೂ ಮೇದಕ್ ಅಥವಾ ಮೆಹಬೂಬ್ ನಗರದಿಂದ ಸ್ಪರ್ಧೆಗೆ ಇಳಿಯುವ ಸಾಧ್ಯತೆಯಿದ್ದು, ಕರ್ನಾಟಕ ಚುನಾವಣೆ ಮುಗಿದ ಬಳಿಕ ತೆಲಂಗಾಣದಲ್ಲಿ ಭರ್ಜರಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿಯನ್ನು ನೋಡಿ ದೇವರನ್ನೇ ನೋಡಿದಷ್ಟು ಖುಷಿ ಆಯ್ತು ಅಂದ ಬೆಂಗ್ಳೂರು ಮಹಿಳೆ

Share This Article