ದೇವೇಗೌಡರು ನಾಯಕರನ್ನು ಬೆಳೆಸಿದ್ದಾರೆಯೇ ಹೊರತು ತುಳಿದು ಗೊತ್ತಿಲ್ಲ: ವೆಂಕಟೇಶ್‌ಗೆ ಪ್ರತಾಪ್‌ ಸಿಂಹ ತಿರುಗೇಟು

Public TV
1 Min Read
Pratap Simha

ಮೈಸೂರು: ದೇವೇಗೌಡರು ನಾಯಕರನ್ನು ಬೆಳೆಸಿದ್ದಾರೆಯೇ ಹೊರತು ತುಳಿದು ಗೊತ್ತಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಸಚಿವ ವೆಂಕಟೇಶ್‌ಗೆ (Venkatesh) ತಿರುಗೇಟು ನೀಡಿದ್ದಾರೆ.

ದೇವೇಗೌಡರೇ (Devegowda) ಪ್ರತಾಪ್ ಸಿಂಹಗೆ ಬಿಜೆಪಿ (BJP) ಟಿಕೆಟ್ ತಪ್ಪಿಸಿದ್ದಾರೆ ಎಂಬ ಸಚಿವ ಕೆ ವೆಂಕಟೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ. ನನಗೆ ಟಿಕೆಟ್ ಕೊಡಿಸಬೇಕು ಎಂದು ಅಮಿತ್ ಶಾ ಅವರ ಜೊತೆ ಫೋನಿನಲ್ಲಿ ದೇವೇಗೌಡರು ಮಾತನಾಡಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

ನನಗೆ ಟಿಕೆಟ್ ಕೊಡಿ ಎಂದು ಅಮಿತ್ ಶಾ ಅವರಲ್ಲಿ ಕೇಳಿದವರಲ್ಲಿ ದೇವೇಗೌಡರು ಪ್ರಮುಖರು. ಇಂತಹ ವ್ಯಕ್ತಿ ನನಗೆ ಟಿಕೆಟ್ ತಪ್ಪಿಸುತ್ತಾರೆ ಅಂತ ಹೇಳಿದರೆ ಹೇಗೆ ಎಂದು ಪ್ರತಾಪ್‌ ಸಿಂಹ ಪ್ರಶ್ನಿಸಿದರು.

ವೆಂಕಟೇಶ್ ಅವರು ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಈ ಹೇಳಿಕೆ ನೋಡಿ ವೆಂಕಟೇಶ್ ಅವರ ಮೇಲೆ ಇದ್ದ ಎಲ್ಲಾ ಗೌರವವು ಮರೆಯಾಗಿದೆ. ನಿಮ್ಮನ್ನು ರಾಜಕೀಯವಾಗಿ ಬೆಳೆಸಿ ಶಕ್ತಿ ತುಂಬಿದ್ದು ದೇವೇಗೌಡರು ಎಂಬುದನ್ನು ಮರೆಯಬೇಡಿ. ಇದನ್ನೂ ಓದಿ: ಯಾರೇ ಹೇಳಲಿ, ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ: ಎಸ್‌ಆರ್‌ ವಿಶ್ವನಾಥ್‌

Share This Article