ಕರ್ನಾಟಕದ ಕಾಂಗ್ರೆಸ್‌ ಸರ್ಕಾರದಲ್ಲಿ ದುಡ್ಡಿಲ್ಲ, ಯೋಜನೆ ಹಣ ಕಡಿತವಾಗಿದೆ: ಮೋದಿ

Public TV
2 Min Read
narendra modi 2

– ಕೈ ಶಾಸಕರೇ ದುಡ್ಡಿಲ್ಲ ಎನ್ನುತ್ತಿದ್ದಾರೆ
– 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಿದ್ದು ಮೋದಿ ಗ್ಯಾರಂಟಿ

ಕಲಬುರಗಿ: ಕರ್ನಾಟಕ ಕಾಂಗ್ರೆಸ್‌ (Karnataka Congress) ಸರ್ಕಾರದಲ್ಲಿ ದುಡ್ಡಿಲ್ಲ. ಯೋಜನೆಗಳ ಹಣವವನ್ನು ಕಡಿತ ಮಾಡಿದೆ. ಕಾಂಗ್ರೆಸ್ ಚುನಾವಣೆ ಘೋಷಣೆ ‌ಮಾಡಿದ ಯೋಜನೆ ಜಾರಿ ಬಿಡಿ. ಬೇರೆ ಯೋಜನೆ ಮಾಡಲು ಅವರ ಬಳಿ ದುಡ್ಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ (Kalaburagi) ಬಿಜೆಪಿ (BJP) ಸಮಾವೇಶದಲ್ಲಿ ಮಾತನಾಡಿದ ಅವರು, ಗೃಹಜ್ಯೋತಿ ಎಂದು ಹೇಳಿ ವಿದ್ಯುತ್‌ ನೀಡುತ್ತಿಲ್ಲ. ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್‌ ಕೊಡುತ್ತಿಲ್ಲ. ನಾವು ಪಿಎಂ‌ ಕಿಸಾನ್ ಯೋಜನೆಯಡಿ ನಮ್ಮ ರಾಜ್ಯ ಸರ್ಕಾರ 4 ಸಾವಿರ ರೂ. ಸೇರಿಸಿ ರೈತರಿಗೆ ಹಣ ನೀಡುತ್ತಿತ್ತು. ಆದರೆ‌ ಕಾಂಗ್ರೆಸ್ ಅಧಿಕಾರಕ್ಕೆ ಬಂದ‌ಮೇಲೆ ಪಿಎಂ‌ಕಿಸಾನ್ ಅಡಿ ರಾಜ್ಯ ಸರ್ಕಾರ ನೀಡುತ್ತಿದ ಹಣಕ್ಕೆ ಕತ್ತರಿ ಹಾಕಿದೆ ಎಂದು ದೂರಿದರು.  ಇದನ್ನೂ ಓದಿ: ಲೋಕಸಭಾ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ನಿರ್ಧಾರವೇ ಅಂತಿಮ: ಬಿವೈ ವಿಜಯೇಂದ್ರ

 

ಕಾಂಗ್ರೆಸ್‌ ಶಾಸಕರೇ ನಮ್ಮ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಸರ್ಕಾರ ನಡೆಯಬೇಕಾ? ನಿಮ್ಮ‌ಕನಸು ಈಡೇರುತ್ತಾ ಎಂದು ಮೋದಿ ಪ್ರಶ್ನಿಸಿದರು. ಇದನ್ನೂ ಓದಿ: Lok Sabha Election 2024: ಯಾವ ರಾಜ್ಯಗಳಿಗೆ ಎಷ್ಟು ಹಂತಗಳಲ್ಲಿ ಮತದಾನ?

ಸರ್ಕಾರ ಯುವಜನತೆಗೆ ಹಣ ನೀಡುತ್ತಿದೆ ಎಂದು ಹೇಳುತ್ತಿದೆ. ಆದರೆ ಸ್ಕಾಲರ್‌ಶಿಪ್‌ ಹಣಕ್ಕೆ ಕತ್ತರಿ ಹಾಕಿದೆ. ನಾವು ಇನ್ನೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್‌ ಸರ್ಕಾರಕ್ಕೆ ತಿಳಿದಿದೆ. ಹೀಗಾಗಿ ಈಗ ಲೂಟಿಗೆ ಇಳಿದಿದ್ದು, ಈ ಲೂಟಿ ಮಾಡಲು ನೀವು ಬಿಡುತ್ತಿರಾ? ಲೂಟಿಕೋರರನ್ನು ಬದಲಾಯಿಸಲು ಸಿದ್ಧವಾಗಿ ಎಂದು ಕರೆ ನೀಡಿದರು.

ಮಕ್ಕಳಿಗೆ ಹೇಳಿದ್ರೆ ಸಮಸ್ಯೆ ಆಗುತ್ತದೆ ಎಂದು ಪೋಷಕರು ಆರ್ಥಿಕ ಸಂಕಷ್ಟದಿಂದ ತಮ್ಮ ಕಾಯಿಲೆಯನ್ನು ಮುಚ್ಚಿಡುತ್ತಿದ್ದರು. ಹೀಗಾಗಿ ಆಯುಷ್ಮಾನ್‌ ಯೋಜನೆ ಜಾರಿಗೆ ತಂದು ಎಲ್ಲ ತಂದೆ ತಾಯಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. 5 ಲಕ್ಷ ರೂ.ವರೆಗೆ ಚಿಕಿತ್ಸೆ ಪರಿಹಾರ ಕೊಡುತ್ತಿದ್ದೇವೆ. 80 ಲಕ್ಷದಷ್ಟು ಜನ ಇದರ ಲಾಭ ಪಡೆದು ಮೋದಿಗೆ ಆಶಿರ್ವಾದ ಹೇಳುತ್ತಿದ್ದಾರೆ. ಇಂದು ಉಚಿತ ಚಿಕಿತ್ಸೆ ಮೋದಿ ಗ್ಯಾರಂಟಿ ಆಗಿದೆ. ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿನೀರಿಗಾಗಿ ದೂರ ದೂರ ಹೋಗುತ್ತಿದ್ದರು. ನಾವು ಜಲಜೀವನ ಮಿಷನ್‌ ಮೂಲಕ ಪ್ರತಿ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕೊಟ್ಟಿದ್ದೇವೆ. 40 ಲಕ್ಷಕ್ಕೂ ಅಧಿಕ ಎಲ್‌ಪಿಜಿ ಸಿಲಿಂಡರ್‌ ನೀಡಿ ಹೆಣ್ಣುಮಕ್ಕಳನ್ನು ಹೊಗೆಯಿಂದ ಮುಕ್ತ ಮಾಡಿದ್ದು ಸಹ ಮೋದಿ ಗ್ಯಾರಂಟಿ ಎಂದು ಹೇಳಿದರು.

ಪ್ರಧಾನಿ ಮೋದಿ ಕಳೆದ ಬಾರಿಯೂ ಕಲಬುರಗಿಯಿಂದಲೇ ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದರು. ಈ ಬಾರಿಯೂ ಕಲಬುರಗಿಯಿಂದಲೇ ಪ್ರಚಾರ ಆರಂಭಿಸಿದ್ದಾರೆ.

Share This Article