ಐದನೇ ಹಂತದ ಮತದಾನ ಮುಕ್ತಾಯ – ಭಾರೀ ಸಂಖ್ಯೆಯಲ್ಲಿ ಮತದಾನಗೈದ ಕಾಶ್ಮೀರಿ ಪಂಡಿತರು

Public TV
1 Min Read
Election vote 1 2

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election) ಐದನೇ ಹಂತ ಮುಕ್ತಾಯವಾಗಿದೆ. 8 ರಾಜ್ಯಗಳ 49 ಸ್ಥಾನಗಳಲ್ಲಿ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಸುಗಮ ಮತದಾನ ನಡೆದಿದೆ. ರಾಹುಲ್ ಗಾಂಧಿ, ಸ್ಮೃತಿ ಇರಾನಿ ಸೇರಿ 617 ಅಭ್ಯರ್ಥಿಗಳ ಮತ ಭವಿಷ್ಯ ಮತಯಂತ್ರ ಸೇರಿದೆ. ಇದರೊಂದಿಗೆ ಒಟ್ಟು 428 ಕ್ಷೇತ್ರಗಳಲ್ಲಿ ಚುನಾವಣೆ ಮುಕ್ತಾಯಗೊಂಡಿದೆ.

ಸಂಜೆ ಐದು ಗಂಟೆ ಹೊತ್ತಿಗೆ 57.95% ಮತದಾನ ನಡೆದಿದೆ. ಪಶ್ಚಿಮ ಬಂಗಾಳ (West Bengal) ಹೆಚ್ಚು ಅಂದ್ರೆ 73.07% ಮಹಾರಾಷ್ಟದಲ್ಲಿ (Maharashtra) ಕಡಿಮೆ ಅಂದ್ರೆ 50.02% ಮತದಾನ ನಡೆದಿದೆ. ಜಮ್ಮು ಕಾಶ್ಮೀರದಲ್ಲಿ 55.49% ವೋಟಿಂಗ್ ಆದರೆ ಲಡಾಖ್‌ನಲ್ಲಿ 68.47% ಮತದಾನ ನಡೆದಿದೆ.  ಇದನ್ನೂ ಓದಿ: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಗೌರವಾರ್ಥ ಮಂಗಳವಾರ ಭಾರತದಲ್ಲಿ ಶೋಕಾಚರಣೆ


ರಾಹುಲ್ ಗಾಂಧಿ ರಾಯ್‌ಬರೇಲಿಯ ಮತಗಟ್ಟೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್ ಘೋಷಣೆ ಮೊಳಗಿಸಿದ ಘಟನೆಯೂ ನಡೆದಿದೆ. ಮಂಡಿಯಲ್ಲಿ ಕಂಗನಾ ರಣಾವತ್‌ಗೆ ಕಾಂಗ್ರೆಸ್ ಕಾರ್ಯಕರ್ತರು, ಬರಕ್‌ಪುರದಲ್ಲಿ ಬಿಜೆಪಿಯ ಅರ್ಜುನ್‌ಸಿಂಗ್‌ಗೆ ಟಿಎಂಸಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಕಾಶ್ಮೀರದ ಪಂಡಿತರು (Kashmiri Pandits) ಬಾರಮುಲ್ಲಾದಲ್ಲಿ ಮೊದಲ ಬಾರಿ ಭಾರೀ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.

2019ರಲ್ಲಿ ಈ 49 ಕ್ಷೇತ್ರಗಳಲ್ಲಿ 39ನ್ನು ಬಿಜೆಪಿ ಗೆದ್ದಿತ್ತು. ಕೇವಲ 8 ಕ್ಷೇತ್ರಗಳಲ್ಲಿ ಮಾತ್ರ ಐಎನ್‌ಡಿಐಎ (INDIA) ಗೆದ್ದಿತ್ತು. ಇಂದು ಒಡಿಶಾ ವಿಧಾನಸಭೆಗೆ ಮೂರನೇ ಹಂತದ ಚುನಾವಣೆ ನಡೆಯಿತು.

Share This Article