ಬೆಂಗಳೂರು: ಇವಿಎಂ (EVM) ಯಂತ್ರಗಳು ಏನು ಆಗದೇ ಹೋದರೆ ಸರಿ. ಜನ ನಮ್ಮ ಪರವಾಗಿದ್ದಾರೆ. ಒಳ್ಳೆಯ ಶುಭ ಸೂಚನೆ ಬರುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಕೆಪಿಸಿಸಿ ಭಾರತ್ ಜೋಡೋ ಭವನದಲ್ಲಿ ನಡೆದ ನೆಹರು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮೆಲ್ಲರಿಂದ ಕರ್ನಾಟಕದಲ್ಲಿ (Karnataka) ಭದ್ರ ಬುನಾದಿಯ ಸರ್ಕಾರ ಬಂದಿದೆ. ಕರ್ನಾಟಕದಿಂದಲೇ ಇಂಡಿಯಾ (INDIA) ಮೈತ್ರಿಕೂಟದ ರಚನೆಯಾಗಿದೆ ಎಂದು ತಿಳಿಸಿದರು.
ನಮ್ಮನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕರೆದುಕೊಂಡು ಬಂದಿರುವವರನ್ನು ನಾವು ಮಾತನಾಡಿಸುತ್ತಿಲ್ಲ. ಸೂಟು ಬೂಟು ಹಾಕಿದವರನ್ನು ಮಾತಾಡಿಸುವ ವ್ಯವಸ್ಥೆ ನಿರ್ಮಾಣ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕ್ಯಾಬಿನೆಟ್ ಸಚಿವರಿಗೆ ಡಿಕೆಶಿ ಓಪನ್ ವಾರ್ನಿಂಗ್
ನಮ್ಮ ಚೇಂಬರ್‌ನಲ್ಲಿ ಸೂಟು ಬೂಟು ಹಾಕಿದವರನ್ನು ಕೂರಿಸಲಾಗುತ್ತದೆ. ನಮ್ಮ ಪಿಎ, ಗನ್ ಮ್ಯಾನ್ ಇದನ್ನು ಮಾಡುತ್ತಾರೆ. ನನಗೆಲ್ಲಾ ಗೊತ್ತಿದೆ. ನನ್ನ ಅನುಭವದಿಂದಲೇ ಹೇಳುತ್ತಿದ್ದೇನೆ ಎಂದರು.
ಮಾತಿನ ಮಧ್ಯೆ ಮಾತನಾಡಲು ಮುಂದಾದ ಕಾರ್ಯಕರ್ತೆಯೊಬ್ಬರನ್ನು ಗದರಿಸಿದ ಡಿಸಿಎಂ, ವಿಧಾನಸೌಧಕ್ಕೆ ಹೊತ್ತಿಕೊಂಡು ಬಂದವರನ್ನು ನಾವು ಮರೆಯುವಂತಾಗಿದೆ. ಇದು ಆಗಬಾರದು ಎಂದು ತಮ್ಮನ್ನೇ ಪ್ರಸ್ತಾಪಿಸಿಕೊಂಡು ಸಚಿವರಿಗೆ ಖಡಕ್ ಸಂದೇಶ ಕೊಟ್ಟರು.