ನವದೆಹಲಿ: ದೇಶವನ್ನು ಅತ್ಯಧಿಕ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ (Congres) ಪಕ್ಷ ಇಂದು ಸಂಕಷ್ಟದಲ್ಲಿದೆ. ಮೋದಿ (Narendra Modi) ಅವಧಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಚೇತರಿಸಿಕೊಳ್ಳಲು ಸಾಧ್ಯವಾಗದೇ ಮತ್ತಷ್ಟು ಕ್ಷೀಣವಾಗುತ್ತಾ ಸಾಗಿದೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದೆ.
ಕೇವಲ 326 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿರುವ ಕಾಂಗ್ರೆಸ್ ಈವರೆಗೂ 281 ಅಭ್ಯರ್ಥಿಗಳನ್ನಷ್ಟೇ ಪ್ರಕಟಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಬಲವಾಗಿರುವ ಎನ್‌ಡಿಎ (NDA) ಒಕ್ಕೂಟವನ್ನು ಏಕಾಂಗಿಯಾಗಿ ಎದುರಿಸಿ ಗೆಲ್ಲುವುದು ಕಷ್ಟ ಸಾಧ್ಯ ಎಂದು ಅರಿತಿರುವ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದೆ.
Advertisement
Advertisement
ಕರ್ನಾಟಕ, ತೆಲಂಗಾಣ, ಪಂಜಾಬ್, ಛತ್ತೀಸ್‌ಗಡ, ಉತ್ತರಾಖಂಡ್, ಹಿಮಾಚಲಪ್ರದೇಶ, ಗೋವಾ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಇದನ್ನೂ ಓದಿ: ಮಹಿ ಚಚ್ಚಿದ ಆ 3 ಸಿಕ್ಸರ್ ಪಾಂಡ್ಯಗೆ ಸಂಕಷ್ಟ ತಂದೊಡ್ಡಿತಾ?
Advertisement
ಉಳಿದ ರಾಜ್ಯಗಳಲ್ಲಿ ಮಿತ್ರಪಕ್ಷಗಳ ಜೊತೆ ಸೀಟು ಹಂಚಿಕೊಂಡಿದೆ. ಉತ್ತರಪ್ರದೇಶ(80), ಮಹಾರಾಷ್ಟ್ರ (48), ಬಿಹಾರ(40) ಮತ್ತು ತಮಿಳುನಾಡು(39) ಒಟ್ಟು 207 ಸ್ಥಾನಗಳಿದ್ದು, ಈ ಪೈಕಿ ಕೇವಲ 52ರಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ ಮಾಡಿದೆ. ಅಂದರೆ 25.12%ರಷ್ಟು ಕಡೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.
Advertisement
ಒಡಿಶಾ, ಆಂಧ್ರ, ಬಂಗಾಳದಲ್ಲಿ ಕಾಂಗ್ರೆಸ್ ಪ್ರಭಾವ ಎಲ್ಲಿದೆ ಎಂದು ಹುಡುಕಬೇಕಿದೆ. 326ರಲ್ಲಿ ಸ್ಪರ್ಧೆ ಮಾಡಿದರೂ ಕೂಡ ಕಾಂಗ್ರೆಸ್ ಪ್ರಭಾವ ಕೆಲವೇ ರಾಜ್ಯಗಳಿಗೆ ಸೀಮಿತವಾಗಿದೆ. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!
ಯಾವ ವರ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ?
1996ರಲ್ಲಿ 529 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 140 ರಲ್ಲಿ ಜಯಗಳಿಸಿತ್ತು.1999 ರಲ್ಲಿ 453 ರಲ್ಲಿ ಸ್ಪರ್ಧಿಸಿದರೆ 2004 ರಲ್ಲಿ 417 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. 2009ರ ಚುನಾವಣೆಯಲ್ಲಿ 440 ಕ್ಷೇತ್ರಗಳ ಪೈಕಿ 206 ಅಭ್ಯರ್ಥಿಗಳು ಜಯಗಳಿಸಿದ್ದರು.
2014ರಲ್ಲಿ 464 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿದಿದ್ದರೂ ಮೋದಿ ಅಲೆಗೆ ಕೇವಲ 44 ಮಂದಿ ಮಾತ್ರ ಜಯಗಳಿಸಿದ್ದರು. 2019ರಲ್ಲಿ 421 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಮೋದಿ ಸುನಾಮಿಗೆ 52 ಮಂದಿ ಮಾತ್ರ ಗೆದ್ದಿದ್ದರು. 2024ರ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಿ ಕೇಂದ್ರದಲ್ಲಿ ಅಧಿಕಾರವನ್ನು ಹಿಡಿಯಲೇಬೇಕೆಂದು ಕಾಂಗ್ರೆಸ್ INDIA ಒಕ್ಕೂಟಕ್ಕೆ ತನ್ನ ಹಲವು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದು ಕೇವಲ 326 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.