ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಈಗಾಗಲೇ ಹಲವು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ (BJP) ಈಗ ಒಡಿಶಾದಲ್ಲೂ (Odisha) ಬಿಜೆಡಿ (BJD) ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ.
ಎರಡು ಪಕ್ಷದಲ್ಲೂ ಬಿರುಸಿನ ಮಾತುಕತೆ ನಡೆಯುತ್ತಿದ್ದು ಒಂದು ವೇಳೆ ಮೈತ್ರಿ ಮಾಡಿಕೊಂಡರೆ 15 ವರ್ಷದ ಬಳಿಕ ಬಿಜೆಡಿ ಮರಳಿ ಎನ್‌ಡಿಎ (NDA) ಮೈತ್ರಿಕೂಟವನ್ನು ಸೇರಿದಂತಾಗುತ್ತದೆ. ಮೈತ್ರಿಯ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಆದರೆ ಎರಡು ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಮೈತ್ರಿ ಬಗ್ಗೆ ಸುಳಿವು ನೀಡುತ್ತಿದೆ.
Advertisement
Advertisement
ಬಿಜೆಡಿ ನಾಯಕರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ನಿವಾಸದಲ್ಲಿ ಸುದೀರ್ಘ ಸಭೆ ನಡೆಸಿದ್ದರೆ ದೆಹಲಿಯಲ್ಲಿ ಬಿಜೆಪಿ ನಾಯಕರು ಕೂಡ ಚುನಾವಣೆ ಕುರಿತು ಬಿರುಸಿನ ಚರ್ಚಿಸಿದ್ದಾರೆ.
Advertisement
ಎರಡು ಪಕ್ಷಗಳು 1998 ರಿಂದ 2009 ರವರೆಗೆ ಮಿತ್ರಪಕ್ಷಗಳಾಗಿದ್ದವು. ಮುಖ್ಯಮಂತ್ರಿಯಾಗುವ ಮೊದಲು ನವೀನ್ ಪಟ್ನಾಯಕ್ ಅವರು 1990ರ ದಶಕದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee Govt) ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದರು. 2008ರಲ್ಲಿ ನಡೆದ ಕಂಧಮಾಲ್ ಗಲಭೆಯ ನಂತರ ಬಿಜೆಪಿ ಜೊತೆಗಿನ ಮೈತ್ರಿಗೆ ಬಿಜೆಡಿ ಗುಡ್‌ಬೈ ಹೇಳಿತ್ತು. ಇದನ್ನೂ ಓದಿ: ವಿಶ್ವಪ್ರಸಿದ್ಧ ಯಾಣದಲ್ಲಿ ದೇಶದ ಮೊದಲ WiFi-7 ಸೇವೆ
Advertisement
ರಾಜ್ಯಸಭಾ ಚುನಾವಣೆಯಲ್ಲಿ ಕೇಂದ್ರ ರೈಲ್ವೇ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬಿಜೆಡಿ ಬೆಂಬಲ ನೀಡಿತ್ತು. ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದೆ ಇದ್ದರೂ ಮಹತ್ವದ ಮಸೂದೆಗಳು ಮಂಡನೆಯಾದ ಸಂದರ್ಭದಲ್ಲಿ ಬಿಜೆಡಿ ಮೋದಿ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್ – ಬಾಂಬರ್ ಬಳ್ಳಾರಿಯಿಂದ ಭಟ್ಕಳಕ್ಕೆ ತೆರಳಿರುವ ಶಂಕೆ
ಮೂಲಗಳ ಪ್ರಕಾರ ಮೈತ್ರಿ ಮಾತುಕತೆ ನಡೆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರ ಕೇಳಿದರೆ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಡಿ ಹೆಚ್ಚಿನ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಲಿದೆ. ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ 14 ಕ್ಷೇತ್ರಗಳನ್ನು ಬಿಜೆಪಿ ಕೇಳುತ್ತಿದೆ. ಅಂತಿಮವಾಗಿ ಬಿಜೆಪಿಗೆ 11, ಬಿಜೆಡಿಗೆ 9 ಕ್ಷೇತ್ರ ಸಿಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಬಿಜೆಪಿ 8, ಬಿಜೆಡಿ 12, ಕಾಂಗ್ರೆಸ್ 1 ಸ್ಥಾವನ್ನು ಹೊಂದಿದೆ.
2019ರ ವಿಧಾನಸಭಾ ಚುನಾವಣೆಯ ಒಟ್ಟು 147 ಸ್ಥಾನಗಳ ಪೈಕಿ ಬಿಜೆಡಿ 112, ಬಿಜೆಪಿ 23 ಸ್ಥಾನಗಳನ್ನು ಹೊಂದಿದ್ದರೆ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಈ ಚುನಾವಣೆಯಲ್ಲಿ ಬಿಜೆಡಿ 100ಕ್ಕೂ ಅಧಿಕ ಕ್ಷೇತ್ರಗಳನ್ನು ಕೇಳಿದರೆ ಬಿಜೆಪಿ 40 ಕ್ಷೇತ್ರಗಳನ್ನು ಕೇಳಬಹುದು ಎಂದು ಅಂದಾಜಿಸಲಾಗಿದೆ.