ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election) ರಾಜ್ಯದಿಂದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸ್ಪರ್ಧೆ ಮಾಡುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.
ಹೌದು, ದೆಹಲಿ ಅಂಗಳದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆಯ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಸೋನಿಯಾ ಗಾಂಧಿ (Sonia Gandhi) ಸ್ಪರ್ಧೆ ಮಾಡದ ಕಾರಣ ಹಿರಿಯರೊಬ್ಬರು ಸ್ಪರ್ಧಿಸಬೇಕೆಂದು ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಖರ್ಗೆ ಸ್ಪರ್ಧೆ ವಿಚಾರ ಈಗ ಮುನ್ನೆಲೆಗೆ ಬಂದಿದೆ.
Advertisement
Advertisement
ಮಲ್ಲಿಕಾರ್ಜುನ ಖರ್ಗೆ ಅವರರು ಅನುಭವಿ ಅಲ್ಲದೇ ಸಂಸತ್ತಿನ ಹಿರಿಯ ನಾಯಕರಾಗಿದ್ದಾರೆ. ಅಷ್ಟೇ ಅಲ್ಲದೇ ಎಐಸಿಸಿ ಅಧ್ಯಕ್ಷ ಹಾಗೂ ದಲಿತ ನಾಯಕರಾಗಿದ್ದಾರೆ. ಈ ಕಾರಣಕ್ಕೆ ಖರ್ಗೆ ಸ್ಪರ್ಧೆ ಮಾಡಲಿ ಎಂದು ಕಾಂಗ್ರೆಸ್ (Congress) ಚುನಾವಣಾ ಸಮಿತಿ ಯ ನಾಯಕರು ಒತ್ತಡ ಹೇರುತ್ತಿದ್ದಾರೆ. ಇದನ್ನೂ ಓದಿ: NDA 358, INDIA 110 ಸ್ಥಾನ – ಟೈಮ್ಸ್ ನೌ ಸಮೀಕ್ಷೆ
Advertisement
ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಖರ್ಗೆ ಅವರು ಇಲ್ಲಿಯವರೆಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಶುಕ್ರವಾರ ಬಿಡುಗಡೆಯಾದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕಲಬರಗಿ (Kalaburagi) ಕ್ಷೇತ್ರದ ಹೆಸರಿಲ್ಲ. ಹೀಗಾಗಿ ಈ ಬಾರಿ ಕಲಬುರಗಿಯಿಂದ ಸ್ಪರ್ಧಿಸುವ ನಾಯಕ ಯಾರು ಎಂಬ ಕುತೂಹಲ ಹೆಚ್ಚಾಗಿದೆ.
Advertisement