ಶಿವಮೊಗ್ಗ: ಬಿಜೆಪಿಯಲ್ಲಿ ಕೆಎಸ್ ಈಶ್ವರಪ್ಪ (KS Eshwarappa) ಬಂಡಾಯ ಬಾವುಟ ಹಾರಿಸಿದ್ದು ಶಿವಮೊಗ್ಗದಿಂದ (Shivamogga) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ನಿಲ್ಲುವುದಾಗಿ ಸವಾಲ್ ಎಸೆದಿದ್ದಾರೆ.
ಕಾರ್ಯಕರ್ತರ ಜೊತೆ ಸಭೆ ನಡೆಸಿ ಮಾತನಾಡಿದ ಅವರು ನಾನು ಚುನಾವಣೆಯಲ್ಲಿ (Lok Sabha Election) ಗೆಲ್ಲುತ್ತೇನೆ. ಗೆದ್ದ ಎರಡು ತಿಂಗಳಿನಲ್ಲಿ ನಾನು ಬಿಜೆಪಿ (BJP) ಸೇರುತ್ತೇನೆ ಎಂದು ಹೇಳಿದರು.
Advertisement
ಯಡಿಯೂರಪ್ಪನವರು (Yediyurappa) ತಮಗೆ ಬೇಕಾದವರಿಗೆ ಟಿಕೆಟ್ ನೀಡಿದ್ದಾರೆ. ಅವರಿಗೆ ಬೇಕಾದವರು ಸೋತರೆ ಅದಕ್ಕೆ ಯಡಿಯೂರಪ್ಪನವರೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಬೊಮ್ಮಾಯಿ ಅವರು ನನಗೆ ಆರೋಗ್ಯ ಸರಿ ಇಲ್ಲ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಕೆಲವರು ಬೊಮ್ಮಾಯಿ ಅವರನ್ನು ನಂಬಬೇಡಿ ಎಂದು ಹೇಳಿದರು. ಕೇಂದ್ರ ಸಮಿತಿಗೆ ಬೊಮ್ಮಾಯಿ, ಕಾಂತೇಶ್, ಶೆಟ್ಟರ್ ಹೆಸರು ಹೋಯ್ತು. ಬೊಮ್ಮಾಯಿ ಅವರೇ ಬೇಡ ಅಂದ ಮೇಲೆ ಅವರ ಹೆಸರು ಹೇಗೆ ಹೋಯ್ತು ಎಂದು ಪ್ರಶ್ನಿಸಿದರು.
Advertisement
ಸಿ.ಟಿ.ರವಿ ಎಲ್ಲಾ ಕಡೆ ಓಡಾಡಿದ್ದಾರೆ. ಪಕ್ಷ ಸಂಘಟನೆ ಮಾಡಿದ್ದಾರೆ. ನಾನು ಸಿ.ಟಿ.ರವಿ ಜೊತೆ ನಿನಗೆ ಸ್ಪರ್ಧೆ ಮಾಡುವ ಆಸಕ್ತಿ ಇದೆಯಾ ಎಂದು ಕೇಳಿದ್ದೆ. ಶೋಭ ಕರಂದ್ಲಾಜೆ ನಿಲ್ಲದಿದ್ದರೆ ನಿಲ್ಲುತ್ತೇನೆ ಎಂದಿದ್ದರು. ಶೋಭ ಅವರಿಗೆ ಸಿಗಲಿಲ್ಲ ಆದರೆ ಬೇರೆಯವರಿಗೆ ಕೊಟ್ಟರು. ಹಿಂದುತ್ವದ ಪರ ಮಾತನಾಡುವ ಪ್ರತಾಪ್ ಸಿಂಹ, ಸಿ.ಟಿ.ರವಿ, ಸದಾನಂದಗೌಡ ಅವರಿಗೆ ಟಿಕೆಟ್ ತಪ್ಪಿಸಿದರು. ಹಠ ಹಿಡಿದು ತನಗೆ ಏನುಬೇಕೋ ಅದೇ ಮಾಡುವಾಗ ಹಿರಿಯರು ಒಪ್ಪಿಗೆ ಕೊಟ್ಟರು. ಯಡಿಯೂರಪ್ಪ ಹಿರಿಯ ನಾಯಕ ಎಂದು ಕೇಂದ್ರದ ನಾಯಕರು ಅವರ ಮಾತು ಕೇಳಿದರು ಎಂದು ಸಿಟ್ಟು ಹೊರ ಹಾಕಿದರು.