ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ನಾಯಕರ ಅಟ್ಟಹಾಸ-ಅಹಂಕಾರವನ್ನು ಮಟ್ಟ ಹಾಕಬೇಕು ಎಂದು ಲೋಕಸಭಾ ಚುನಾವಣೆಗೆ (Lok Sabha Election) ಮಾಡಿಕೊಂಡಿರುವ ಜೆಡಿಎಸ್ (JDS) ನಾಯಕರು, ಬಿಜೆಪಿ (BJP) ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ-ಜೆಡಿಎಸ್ ಮಧ್ಯೆ ಸೀಟು ಹಂಚಿಕೆ ಫೈನಲ್ ಆಗದೇ ಇದ್ದರೂ ಹಾಸನ, ಮಂಡ್ಯ, ಕೋಲಾರದಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ ಎಂದು ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಘೋಷಿಸಿ ಬಿಟ್ಟಿದ್ದಾರೆ. ಇದನ್ನೂ ಓದಿ: ಮಂಡ್ಯ, ಹಾಸನ, ಕೋಲಾರದಲ್ಲಿ ಜೆಡಿಎಸ್ ಸ್ಪರ್ಧೆ : ಹೆಚ್‌ಡಿಕೆ ಘೋಷಣೆ
Advertisement
Advertisement
ಜೆಡಿಎಸ್ ಕೋರ್ ಕಮಿಟಿ ಸಭೆ ಬಳಿಕ ಮಾತಾಡಿ, ನಾವೇನು 7-8 ಸೀಟು ಕೇಳಿಲ್ಲ. 2 ಸೀಟು ಪಡೆಯೋಕೆ ಮೈತ್ರಿ ಬೇಕಿತ್ತಾ? ಹಾಸನ, ಮಂಡ್ಯದಲ್ಲಿ ಏಕಾಂಗಿಯಾಗಿ ನಿಂತರೆ ನಾವೇ ಗೆಲ್ಲುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಮೈತ್ರಿಯಿಂದ ಯಾವುದೇ ಕಾರಣಕ್ಕೂ ಹಿಂದೆ ಬರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಟ್ರೋಫಿ ಗೆದ್ದು ಕೋಟಿ ಕೋಟಿ ದೋಚಿದ ಹೆಣ್ಮಕ್ಕಳು – ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?
Advertisement
ಕೋರ್ ಕಮಿಟಿ ಸಭೆಯಲ್ಲಿ ಮೈತ್ರಿಯಿಂದ ನಮಗೆ ಲಾಭ ಇಲ್ಲ. ಜೆಡಿಎಸ್ ಮತ 3%-4% ಸ್ವಿಂಗ್ ಆದರೆ 18 ಕ್ಷೇತ್ರ ಬಿಜೆಪಿ ಗೆಲ್ಲುತ್ತದೆ. ಆದರೆ ಬಿಜೆಪಿಗರು ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಜೆಡಿಎಸ್ ನಾಯಕರು ದೂರಿದ್ದಾರೆ.
Advertisement
ಜಿಟಿ ದೇವೇಗೌಡ ಮಾತಾಡಿ, ಚಿಕ್ಕಬಳ್ಳಾಪುರವನ್ನು ಕೇಳಿಲ್ಲ. ನಾವು 3-4 ಕ್ಷೇತ್ರ ಕೇಳಿದ್ದೇವೆ. ನಮ್ಮ ಕ್ಷೇತ್ರಗಳಲ್ಲಿ ಬಿಜೆಪಿಗರು ನಮಗೆ ವೋಟ್ ಹಾಕ್ತಾರೆ. ಬಿಜೆಪಿ ಕ್ಷೇತ್ರಗಳಲ್ಲಿ ನಾವು ವೋಟ್ ಮಾಡಲು ಸೂಚಿಸಿದ್ದೇವೆ ಎಂದು ಹೇಳಿದರು.
ಬಿಜೆಪಿ ನಾಯಕರ ವರ್ತನೆ ಬಗ್ಗೆ ಜೆಡಿಎಸ್ ನಾಯಕರ ದೂರು ಬೆನ್ನಲ್ಲೇ ಯಡಿಯೂರಪ್ಪ ಅವರಿಗೆ (Yediyurappa) ದೇವೇಗೌಡರು (HD Devegowda) ಕರೆ ಮಾಡಿ ಮಾತಾಡಿದ್ದಾರೆ. ಯಾವುದೇ ಗೊಂದಲ ಆಗದಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸುವಂತೆ ಹೇಳಿದ್ದಾರೆ.
ಜೆಡಿಎಸ್‌ನ ಅಸಮಾಧಾನಕ್ಕೆ ಕಾರಣ ಏನು?
ಯಡಿಯೂರಪ್ಪ, ವಿಜಯೇಂದ್ರ ಜೆಡಿಎಸ್ ನಾಯಕರನ್ನು ಪರಿಗಣಿಸುತ್ತಿಲ್ಲ. ಜೆಡಿಎಸ್ ಗಮನಕ್ಕೆ ತರದೇ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಬಳ್ಳಾರಿ, ಹಾವೇರಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರನ್ನೇ ಬಿಜೆಪಿಗೆ ಸೇರಿಸಿಕೊಳ್ಳುತ್ತಿಲ್ಲ.
ಕೋಲಾರ ಕ್ಷೇತ್ರದ ಬಗ್ಗೆ ಬಿಜೆಪಿ ಇನ್ನು ಏನೂ ಹೇಳಿಲ್ಲ. ಜಿಲ್ಲಾ ಮಟ್ಟದಲ್ಲಿ ಇನ್ನೂ ಬಿಜೆಪಿ-ಜೆಡಿಎಸ್ ಸಭೆಗಳನ್ನು ಮಾಡಿಲ್ಲ. ಅಷ್ಟೇ ಅಲ್ಲದೇ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚನೆ ಆಗದ್ದಕ್ಕೆ ದಳ ನಾಯಕರು ಬಿಜೆಪಿ ವಿರುದ್ಧ ಅಸಮಾಧಾನ ಹೊಂದಿದ್ದಾರೆ.