– ಅಸಮಾಧಾನ ಶಮನಗೊಳಿಸ್ತಾರಾ ವಿಜಯೇಂದ್ರ?
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಹತ್ತಿರವಾಗುತ್ತಿದ್ದಂತೆ ಬಿಜೆಪಿಯ (BJP) 10 ಕ್ಷೇತ್ರಗಳಲ್ಲಿ ಆಂತರಿಕ ಸಂಘರ್ಷ ಜೋರಾಗಿದೆ. ನಾಯಕ-ನಾಯಕರ ಮಧ್ಯೆ, ಆಕಾಂಕ್ಷಿ-ಆಕಾಂಕ್ಷಿಗಳ ಮಧ್ಯೆ, ಸಂಸದ-ಶಾಸಕರ ಮಧ್ಯೆ, ಸಂಸದ-ಕಾರ್ಯಕರ್ತರ ನಡುವೆ ಸಂಘರ್ಷ ಜೋರಾಗುತ್ತಿದೆ.
Advertisement
ಹತ್ತು ಕ್ಷೇತ್ರಗಳಲ್ಲಿ ಸಂಘರ್ಷಕ್ಕೆ ತೆರೆ ಎಳೆಯುವಲ್ಲಿ ರಾಜ್ಯ ನಾಯಕರು ಫೇಲ್ ಆದರಾ ಎಂಬ ಚರ್ಚೆ ಎದ್ದಿದೆ. ಆ 10 ಜಿಲ್ಲೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಭೇಟಿ ನೀಡಿ ಸಂಧಾನ ಸಭೆ ನಡೆಸಿದರೂ ನಾಯಕರ ಕಿತ್ತಾಟಕ್ಕೆ ಬ್ರೇಕ್ ಬಿದ್ದಿಲ್ಲ.
Advertisement
ಈ ನಡುವೆ ಬಿಜೆಪಿಯ ಬಣ ಕಚ್ಚಾಟದ ಲಾಭ ಪಡೆಯಲು ಕಾಂಗ್ರೆಸ್ (Congress) ಹವಣಿಸುತ್ತಿದೆ. ಹೀಗಾಗಿ ಬಿಜೆಪಿ ಕಚ್ಚಾಟ ಶಮನಕ್ಕೆ ವಿಜಯೇಂದ್ರ ಹೈಕಮಾಂಡ್ ಮೊರೆ ಹೋಗಿದ್ದಾರೆ. ಮುಂದಿನ ವಾರ ಲೋಕ ಕ್ಷೇತ್ರಗಳ ಕ್ಲಸ್ಟರ್ ಸಭೆ ನಡೆಯಲಿದೆ. ಈ ವೇಳೆ ಕಿತ್ತಾಡಿಕೊಳ್ತಿರುವ ಮುಖಂಡರಿಗೆ ಖಡಕ್ ವಾರ್ನಿಂಗ್ ರವಾನಿಸಲು ಹೈಕಮಾಂಡ್ ಮುಂದಾಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಮೊದಲ ಬಾರಿಗೆ ಶಾಸಕರಾಗಿ ಗುಜರಾತ್ ವಿಧಾನಸಭೆಗೆ ಕಾಲಿಟ್ಟು 22 ವರ್ಷ
Advertisement
Advertisement
10 ಕ್ಷೇತ್ರಗಳು ಯಾವುದು?
ಕ್ಷೇತ್ರ – ತುಮಕೂರು
ವಿ.ಸೋಮಣ್ಣ Vs ಮಾಧುಸ್ವಾಮಿ
ಮಾಧುಸ್ವಾಮಿ Vs ಜಿ.ಎಸ್.ಬಸವರಾಜು
ವಿ.ಸೋಮಣ್ಣ Vs ಡಾ.ಪರಮೇಶ್
ಕ್ಷೇತ್ರ – ಬೀದರ್
ಭಗವಂತ ಖೂಬಾ Vs ಬಿಜೆಪಿ ಶಾಸಕರು
ಕ್ಷೇತ್ರ – ಹುಬ್ಬಳ್ಳಿ ಧಾರವಾಡ
ಪ್ರಹ್ಲಾದ್ ಜೋಷಿ Vs ಜಗದೀಶ್ ಶೆಟ್ಟರ್
ಕ್ಷೇತ್ರ – ಬೆಳಗಾವಿ
ರಮೇಶ್ ಜಾರಕಿಹೊಳಿ Vs ಮೂಲ ಬಿಜೆಪಿ ನಾಯಕರು ಇದನ್ನೂ ಓದಿ: ಹಿಂದೂಗಳಿಗೊಂದು ಮುಸ್ಲಿಮರಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ: ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಕ್ಷೇತ್ರ – ಹಾವೇರಿ
ಈಶ್ವರಪ್ಪ Vs ಬಿ.ಸಿ.ಪಾಟೀಲ್
ಬೊಮ್ಮಾಯಿ Vs ನೆಹರೂ ಓಲೆಕಾರ್
ಕ್ಷೇತ್ರ – ಚಿಕ್ಕಬಳ್ಳಾಪುರ
ಡಾ.ಕೆ.ಸುಧಾಕರ್ Vs ಎಂಟಿಬಿ ನಾಗರಾಜ್
ಡಾ.ಕೆ.ಸುಧಾಕರ್ Vs ಎಸ್.ಆರ್.ವಿಶ್ವನಾಥ್
ಕ್ಷೇತ್ರ – ದಾವಣಗೆರೆ
ಜಿ.ಎಂ.ಸಿದ್ದೇಶ್ವರ್ Vs ರೇಣುಕಾಚಾರ್ಯ, ಎಸ್.ಎ ರವೀಂದ್ರನಾಥ್ ಟೀಂ
ಕ್ಷೇತ್ರ – ವಿಜಯಪುರ
ಯತ್ನಾಳ್ Vs ರಮೇಶ್ ಜಿಗಜಿಣಗಿ
ಕ್ಷೇತ್ರ – ಉಡುಪಿ-ಚಿಕ್ಕಮಗಳೂರು
ಶೋಭಾ ಕರಂದ್ಲಾಜೆ Vs ಸಿ.ಟಿ.ರವಿ
ಕ್ಷೇತ್ರ – ಉತ್ತರ ಕನ್ನಡ
ಅನಂತ್ ಕುಮಾರ್ ಹೆಗಡೆ Vs ಹಾಲಿ/ಮಾಜಿ ಶಾಸಕರು