ಲಕ್ನೋ : ಸಹೋದರಿ ಪ್ರಿಯಾಂಕಾ (Priyanka Gandhi) ಅವರು ವಾರಣಾಸಿಯಿಂದ (Varanasi) ಲೋಕಸಭೆಗೆ ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎರಡರಿಂದ ಮೂರು ಲಕ್ಷ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ರಾಯ್‌ಬರೇಲಿ (Raebareli) ನಡೆದ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ವಾರಣಾಸಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮೋದಿ ಅವರ ಅವರ ರಾಜಕೀಯವನ್ನು ಜನರು ತಿರಸ್ಕರಿಸುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅತಿಯಾದ ಆತ್ಮವಿಶ್ವಾಸ, ಜನರ ಮಾತು ಕೇಳದ್ದಕ್ಕೆ ಬಿಜೆಪಿಗೆ ಹಿನ್ನಡೆ – ಆರ್‌ಎಸ್‌ಎಸ್ ಚಾಟಿ
Advertisement
Advertisement
प्रधानमंत्री मोदी वाराणसी में जैसे-तैसे जीते हैं।
अगर मेरी बहन वहां से लड़ गई होती तो आज प्रधानमंत्री 2-3 लाख वोटों से वाराणसी का चुनाव हार जाते।
: @RahulGandhi जी pic.twitter.com/hlHH5Tfj3J
— Congress (@INCIndia) June 11, 2024
Advertisement
ಹಿಂಸಾಚಾರ ಮತ್ತು ದ್ವೇಷದ ರಾಜಕಾರಣದಲ್ಲಿ ಬಹಿರಂಗವಾಗಿ ತೊಡಗಿರುವ ಪ್ರಧಾನಿಗೆ ಉತ್ತರ ಪ್ರದೇಶದ ಜನರು ಉತ್ತರ ನೀಡಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಕಾಂಗ್ರೆಸ್ ಪಕ್ಷವು ರಾಯ್‌ಬರೇಲಿ, ಅಮೇಥಿ ಸೇರಿದಂತೆ ಉತ್ತರ ಪ್ರದೇಶ ಮತ್ತು ಭಾರತದಾದ್ಯಂತ ಒಗ್ಗಟ್ಟಿನಿಂದ ಹೋರಾಡಿದೆ, ಉತ್ತರ ಪ್ರದೇಶದಲ್ಲಿ (Uttar Pradesh) ಸಮಾಜವಾದಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚುನಾವಣೆಯನ್ನು ಎದುರಿಸಿದ್ದರಿಂದ ಈ ಗೆಲುವು ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: 30 ಲಕ್ಷಕ್ಕೆ ಡೀಲ್ – ಕೊಲೆ ಮಾಡಿ ದರ್ಶನ್ ಟೀಂ ಸಿಕ್ಕಿಬಿದ್ದಿದ್ದೇ ರೋಚಕ!
Advertisement
ತಮಿಳುನಾಡು, ಉತ್ತರ ಪ್ರದೇಶ, ಮಣಿಪುರ, ರಾಜಸ್ಥಾನ, ಕರ್ನಾಟಕ, ತೆಲಂಗಾಣ ಸೇರಿದಂತೆ ಈ ಚುನಾವಣೆಯಲ್ಲಿ ದೇಶದ ಪ್ರತಿಯೊಂದು ರಾಜ್ಯವೂ ಒಗ್ಗೂಡಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಭಾರತದ ಅಡಿಪಾಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ದೇಶಕ್ಕೆ ಗೊತ್ತಾಗಿದೆ ಎಂದರು.