ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ (KPCC President) ಬದಲಾವಣೆ ವಿಚಾರ ಹೈಕಮಾಂಡ್ (High Command) ನಿರ್ಧಾರ ಮಾಡಲಿದೆ. ನಾನು ಅಧ್ಯಕ್ಷ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ ಎಂದು ಸಚಿವ ಎಂಬಿ ಪಾಟೀಲ್ (MB Patil) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇನು ಲಾಬಿ ಮಾಡಿಲ್ಲ. ಲಾಬಿ ಮಾಡುವ ಸಂದರ್ಭ ಕೂಡ ಇದಲ್ಲ. ಲೋಕಸಭಾ ಚುನಾವಣೆ (Lok Sabha Election) ನಂತರ ಎಲ್ಲಾ ಚರ್ಚೆಗೆ ಬರುತ್ತದೆ. ಪಕ್ಷದಲ್ಲಿ ಸಾಕಷ್ಟು ಮಂದಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಇದ್ದಾರೆ. ಸಚಿವ ರಾಜಣ್ಣ ಕೂಡ ಹೇಳಿದ್ದಾರೆ. ಹೈಕಮಾಂಡ್ ಬಯಸಿದರೆ ಸಂಪುಟ ಪುನಾರಚನೆ ಕೂಡ ಆಗುತ್ತದೆ. ಸಿಎಂ ಬದಲಾವಣೆ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ ಅಗತ್ಯ ಇಲ್ಲ: ಮಹದೇವಪ್ಪ
- Advertisement
ವಿಧಾನ ಪರಿಷತ್ (Vidhan Parishad) ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಿರಿಯರನ್ನ ಕಡೆಗಣಿಸಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲವೂ 4 ಗೋಡೆಗಳ ನಡುವೆ ಚರ್ಚೆ ಆಗುತ್ತದೆ. ಹಿಂದೆ 9 ಜನರ ಸಮಿತು ಇತ್ತು. ಸಮ್ಮಿಶ್ರ ಸರ್ಕಾರದಲ್ಲೂ ಸಮನ್ವಯ ಸಮಿತಿ ಇತ್ತು. ಈ ವಿಚಾರದಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ದೇಶಪಾಂಡೆ ಎಲ್ಲಾ ಕುಳಿತು 4 ಗೋಡೆಗಳ ನಡುವೆ ಮಾತನಾಡಿ ಬಗೆಹರಿಸುತ್ತೇವೆ ಎಂದರು. ಇದನ್ನೂ ಓದಿ: ದೇಶದಲ್ಲೇ ಮೊದಲು- ಬಾಕ್ಸ್ ಪುಶಿಂಗ್ ತಂತ್ರಜ್ಞಾನ ಬಳಸಿ ಸುರಂಗ ನಿರ್ಮಿಸಿದ ಬಿಎಂಆರ್‌ಸಿಎಲ್