ಪ್ರತಿ ಚುನಾವಣೆಯಲ್ಲಿ (Election) ರಾಜಕೀಯ ಪಕ್ಷಗಳು ಬಹಳಷ್ಟು ಭರವಸೆಗಳನ್ನು ನೀಡುತ್ತದೆ. ಈ ಪೈಕಿ ಎಲ್ಲಾ ಭರವಸೆಗಳನ್ನು ಯಾವುದೇ ಪಕ್ಷ ಈಡೇರಿಸುವುದಿಲ್ಲ. ಈ ಭರವಸೆ ಈಡೇರಿಸಲು ಕ್ರಮ ಕೈಗೊಳ್ಳುತ್ತದೆ. ಹೀಗಾಗಿ ಇಲ್ಲಿ ಮೋದಿ ಸರ್ಕಾರ (Modi Government) ಈ ಹಿಂದೆ ನೀಡಿದ ಭರವಸೆಗಳ ಪೈಕಿ ಪ್ರಮುಖವಾಗಿ ಈಡೇರಿದ ಮತ್ತು ಈಡೇರದ ಭರವಸೆಗಳ ಮಾಹಿತಿಯನ್ನು ನೀಡಲಾಗಿದೆ.
ರಾಮ ಮಂದಿರ:
ಬಿಜೆಪಿ ದೇಶವ್ಯಾಪಿ ಬೇರೂರಲು ಕಾರಣವಾಗಿದ್ದೇ ರಾಮ ಮಂದಿರ (Ram Mandir) ಆಂದೋಲನ. ಪ್ರತಿ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಾ ಬಂದಿತ್ತು. ಈ ಬಾರಿ ಈ ಭರವಸೆಯನ್ನು ಈಡೇರಿಸಿದ್ದು ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರವನ್ನು ಲೋಕಾರ್ಪಣೆ ಮಾಡಿದ್ದಾರೆ.
Advertisement
Advertisement
ಮಹಿಳೆಯರಿಗೆ ಮೀಸಲಾತಿ:
ಕೇಂದ್ರ ಸರ್ಕಾರ ಹೊಸ ಸಂಸತ್ ಕಟ್ಟಡದ ಮೊದಲ ವಿಶೇಷ ಅಧಿವೇಶನ ಸಮಯದಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (Women Reservation) ನೀಡುವ ಮಸೂದೆಯನ್ನು ಪಾಸ್ ಮಾಡಿದೆ. 1989 ರಿಂದ ಈ ವಿಚಾರ ಸಂಸತ್ತಿನಲ್ಲಿ ಚರ್ಚೆ ಆಗುತ್ತಲೇ ಇತ್ತು. ಆದರೆ 2023ರ ಸೆಪ್ಟೆಂಬರ್‌ನಲ್ಲಿ ಮಸೂದೆಯನ್ನು ಪಾಸ್ ಮಾಡಲಾಗಿದೆ. ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿಗೆ 55% ತೆರಿಗೆ – ಅಮೆರಿಕ ಉದಾಹರಿಸಿ ಸಂಪತ್ತಿನ ಮರು ಹಂಚಿಕೆಯನ್ನು ಸಮರ್ಥಿಸಿಕೊಂಡ ಸ್ಯಾಮ್ ಪಿತ್ರೋಡಾ
Advertisement
ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದು:
ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ (Jammu Kashmir Special Status) ರದ್ದಾದರೆ ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಗಳು ಬಂದ್ ಆಗುತ್ತವೆ ಎಂದು ಬಿಜೆಪಿ ಹೇಳುತ್ತಲೇ ಬಂದಿತ್ತು. 2019ರ ಆಗಸ್ಟ್ 5 ರಂದು ಸರ್ಕಾರ ಮಸೂದೆ ಮಂಡಿಸಿ ಕಾಶ್ಮೀರ ರಾಜ್ಯಕ್ಕೆ ವಿಶೇಷ ಹಕ್ಕುಗಳನ್ನು ನೀಡುವ ಎರಡು ಆರ್ಟಿಕಲ್ 370 ಮತ್ತು ಆರ್ಟಿಕಲ್ 35 ರದ್ದು ಮಾಡಿತ್ತು. ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬೆಂಬಲ ಇಲ್ಲದೇ ಇದ್ದರೂ ಹಲವು ಪಕ್ಷಗಳು ಬೆಂಬಲಿಸಿದ್ದರಿಂದ ವಿಶೇಷ ಸ್ಥಾನಮಾನ ರದ್ದಾಗಿದೆ.
Advertisement
ಭಯೋತ್ಪಾದಕ ಚಟುವಟಿಕೆಗಳಿಗೆ ಶೂನ್ಯ ಸಹಿಷ್ಣುತೆ:
ಮೋದಿ ಸರ್ಕಾರ ಬರುವ ಮೊದಲು ದೇಶದ ಹಲವೆಡೆ ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು. ಆದರೆ ಈಗ ಎನ್‌ಐಎ (NIA) ಹಲವು ಕಡೆ ದಾಳಿ ಮಾಡುತ್ತಿರುವುದರಿಂದ ಉಗ್ರ ಕೃತ್ಯಗಳಿಗೆ ಬಹಳಷ್ಟು ಕಡಿವಾಣ ಹಾಕಲಾಗಿದೆ. ಹಿಂದೆ ಜನರು ಉಗ್ರರ ದಾಳಿಗೆ ತುತ್ತಾಗುತ್ತಿದ್ದರು. ಆದರೆ ಈಗ ಸೈನಿಕರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ.
ಏಕರೂಪ ನಾಗರಿಕ ಸಂಹಿತೆ:
ಸಂವಿಧಾನದ ಮುಂದೆ ದೇಶದ ಎಲ್ಲಾ ಪ್ರಜೆಗಳು ಸಮಾನ ಎಂದು ಸಾರಲು ಏಕರೂಪದ ನಾಗರಿಕ ಸಂಹಿತೆ (Uniform Civil Code) ಜಾರಿಗೆ ತರಲಾಗುವುದಾಗಿ ಬಿಜೆಪಿ ಹೇಳಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ಜಾರಿಗೆ ತಂದಿಲ್ಲ. ಉತ್ತರಾಖಂಡ ಬಿಜೆಪಿ ಸರ್ಕಾರ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆಯನ್ನು ಅಂಗಿಕರಿಸಿದೆ. ಇದನ್ನೂ ಓದಿ: ಸುಣ್ಣ ಬಣ್ಣ ಬಳಿದು ಮನೆ ಸ್ವಚ್ಛ – ಈ ಬಾರಿಯೂ ಅಮೇಠಿಯಿಂದ ರಾಹುಲ್ ಸ್ಪರ್ಧೆ?
ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ:
ಪೌರತ್ವ ತಿದ್ದುಪಡಿ ಮಸೂದೆಯನ್ನು (CAA) 2019ರ ಡಿಸೆಂಬರ್ 11 ರಂದು ಅಂಗೀಕರಿಸಲಾಗಿದ್ದರೂ ಈ ವರ್ಷದ ಮಾರ್ಚ್‌ನಲ್ಲಿ ಗೃಹ ಸಚಿವಾಲಯ ನೋಟಿಫಿಕೇಶನ್ ಹೊರಡಿಸಿದೆ. ಈ ಕಾಯ್ದೆಯ ಪ್ರಕಾರ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ 2014ರ ಡಿಸೆಂಬರ್ 31ರ ಒಳಗಡೆ ಭಾರತಕ್ಕೆ ಆಗಮಿಸಿದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ, ಕ್ರೈಸ್ತರಿಗೆ ಪೌರತ್ವ ನೀಡಲಾಗುತ್ತದೆ.
ಚುನಾವಣೆ ಸಮಯದಲ್ಲಿ ಹಲವು ಭರವಸೆಗಳನ್ನು ಬಿಜೆಪಿ ನೀಡಿತ್ತು. ಈ ಪೈಕಿ ಜನರ ಬಾಯಲ್ಲಿ ಹೆಚ್ಚು ಚರ್ಚೆಯಾಗಿ ಈಡೇರದ ಕೆಲ ಭರವಸೆಗಳನ್ನು ಇಲ್ಲಿ ನೀಡಲಾಗಿದೆ. ಭರವಸೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಮತ್ತು ಅದು ಎಲ್ಲಿಯವರೆಗೆ ಬಂದಿದೆ ಎಂಬುದರ ಬಗ್ಗೆ ವಿವರಣೆ ನೀಡಲಾಗಿದೆ.
2 ಕೋಟಿ ಉದ್ಯೋಗ:
ಪ್ರತಿ ವರ್ಷ 2 ಕೋಟಿ ಉದ್ಯೋಗವನ್ನು (Job) ನಾವು ನೀಡುತ್ತೇವೆ ಎಂದು ಬಿಜೆಪಿ ಹೇಳಿತ್ತು. ಆದರೆ ಈ ಭರವಸೆ ಈಡೇರಿಸಿಲ್ಲ ಎಂದು ಹೇಳಿ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಆದರೆ ಸರ್ಕಾರ ಬೇರೆಯೇ ವಿಚಾರವನ್ನು ಮುಂದಿಟ್ಟಿದೆ. ವಿದೇಶಿ ಹೂಡಿಕೆಗಳು ಭಾರತಕ್ಕೆ ಬಂದಿವೆ. ಹೂಡಿಕೆಯಿಂದಾಗಿ ಉದ್ಯೋಗ ಸೃಷ್ಟಿಯಾಗಿದೆ ಮತ್ತು ಮುಂದೆ ಆಗಲಿದೆ. ವರ್ಷಕ್ಕೆ ಇಷ್ಟು ಪ್ರಮಾಣದ ಉದ್ಯೋಗ ನೀಡಿದೆ ಎಂದು ಪತ್ತೆ ಹಚ್ಚುವುದು ಕಷ್ಟ. ಕೆಲವು ಕಂಪನಿಗೆ ಸೇರಿದರೆ ಕೆಲವರು ಸಂತ ಉದ್ಯಮ ಮಾಡುತ್ತಿದ್ದಾರೆ. ನೌಕರರ ಭವಿಷ್ಯ ನಿಧಿಯಲ್ಲಿ (EPF) 2023-24ರ ಹಣಕಾಸು ವರ್ಷದಲ್ಲಿ1.65 ಕೋಟಿ ಹೊಸ ಸಬ್‌ಸ್ಕ್ರೈಬರ್ ಆಗಿದ್ದಾರೆ ಎಂಬ ವರದಿ ಪ್ರಕಟವಾಗಿದೆ.
ರೈತರ ಆದಾಯ ದುಪ್ಪಟ್ಟು:
ರೈತರ ಆದಾಯವನ್ನು ದುಪ್ಪಟ್ಟು (Farmers Income Double) ಮಾಡಲಾಗುವುದು ಸರ್ಕಾರ ಹೇಳಿತ್ತು. ಈ ನಿಟ್ಟಿನಲ್ಲಿ ಕೃಷಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಈ ಕಾಯ್ದೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಕಾಯ್ದೆಯನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಮಧ್ಯವರ್ತಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಈ ಕಾಯ್ದೆಯನ್ನು ತರಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು.
100 ಸ್ಮಾರ್ಟ್ ಸಿಟಿ:
ರಾಜ್ಯಗಳಲ್ಲಿರುವ ಪ್ರಮುಖ ನಗರಗಳನ್ನು ಸ್ಮಾರ್ಟ್ ಸಿಟಿ (Smart City) ಯೋಜನೆ ಅಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ ಈ ಯೋಜನೆ ನಡೆಯುತ್ತಲೇ ಇದೆ. ಈ ಯೋಜನೆ ಕೇಂದ್ರದ್ದೆ ಆದರೂ ಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುವ ಯೋಜನೆ ಆಗಿದ್ದು ಎರಡು ಕಡೆಯ ಸಹಕಾರ ಇದ್ದರೆ ಮಾತ್ರ ಮುಂದೆ ಪೂರ್ಣಗೊಳ್ಳಬಹುದು.
ಕಪ್ಪುಹಣ ವಾಪಸ್:
2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು (Black Money) ಭಾರತಕ್ಕೆ ತರಲಾಗುವುದು ಮತ್ತು ಭ್ರಷ್ಟಾಚಾರಿಗಳ ವಿರುದ್ಧ ಸಮರ ಸರಲಾಗುವುದು ಎಂದು ಮೋದಿ ಭರವಸೆ ನೀಡಿದ್ದರು. ಪ್ರತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಈ ವಿಷಯವನ್ನು ಇಟ್ಟುಕೊಂಡು ಪ್ರಶ್ನಿಸುತ್ತಿವೆ.
ಇಲ್ಲಿಯವರೆಗೆ ವಿದೇಶದಿಂದ ಎಷ್ಟು ಕೋಟಿ ಕಪ್ಪುಹಣ ಬಂದಿದೆ ಎಂಬುದಕ್ಕೆ ಸರ್ಕಾರದಿಂದ ಸರಿಯಾದ ಉತ್ತರ ಬಂದಿಲ್ಲ. ಆದರೆ ಪ್ರಧಾನಿ ಮೋದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಯುಪಿಎ ಅವಧಿಯಲ್ಲಿ ಜಾರಿ ನಿರ್ದೇಶನಾಲಯ 35 ಲಕ್ಷ ರೂ. ಕಪ್ಪು ಹಣವನ್ನು ಜಪ್ತಿ ಮಾಡಿದ್ದರೆ 2014ರ ನಂತರ ನಮ್ಮ ಅವಧಿಯಲ್ಲಿ 2,200 ಕೋಟಿ ರೂ. ಹಣವನ್ನು ಜಪ್ತಿ ಮಾಡಿದೆ ಎಂದು ಹೇಳಿದ್ದರು.
ಸ್ವಿಜರ್‌ಲೆಂಡ್‌ನಲ್ಲಿರುವ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಬಂಡವಾಳದ ಪ್ರಮಾಣ 2021ಕ್ಕೆ ಹೋಲಿಸಿದರೆ ಶೇ.11ರಷ್ಟುಕುಸಿತ ಕಂಡಿದ್ದು, ಪ್ರಸ್ತುತ 30 ಸಾವಿರ ಕೋಟಿ ರೂ.ಗೆ ಇಳಿಕೆಯಾಗಿದೆ 2023ರಲ್ಲಿ ಸ್ವಿಸ್ ಬ್ಯಾಂಕ್ ಹೇಳಿತ್ತು.
ಬುಲೆಟ್ ರೈಲು:
ಅಹಮದಾಬಾದ್-ಮುಂಬೈ ಮಧ್ಯೆ 2023ಕ್ಕೆ ಬುಲೆಟ್ ರೈಲು (Bullet Rail) ಭಾರತದಲ್ಲಿ ಸಂಚರಿಸಲಿದೆ ಎಂದು ಮೋದಿ ಹೇಳಿದ್ದರು. ಈಗ ಈ ಯೋಜನೆಯ ಡೆಡ್‌ಲೈನ್ ಮುಂದಕ್ಕೆ ಹೋಗಿದೆ. ಆರಂಭದಲ್ಲಿ ಭೂಸ್ವಾಧೀನ ವಿಳಂಬವಾಗಿತ್ತು. ನಂತರ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರ ಅಸ್ವಿತ್ವಕ್ಕೆ ಬಂದಿತ್ತು. ಬುಲೆಟ್ ರೈಲು ಯೋಜನೆಗೆ ಎನ್‌ಸಿಪಿ ವಿರೋಧ ವ್ಯಕ್ತಪಡಿಸಿತ್ತು. ಕೋವಿಡ್ ಕಾರಣದಿಂದ ಮತ್ತಷ್ಟು ವಿಳಂಬವಾಯಿತು. ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಬಂದ ನಂತರ ಬುಲೆಟ್ ರೈಲು ಯೋಜನೆ ಕೆಲಸ ಚುರುಕು ಪಡೆದಿದೆ.