ಬೆಂಗಳೂರು: ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಟಿಕೆಟ್ ಸಿಗದಿದ್ದರೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ಚುನಾವಣಾ ಉಸ್ತುವಾರಿ ಡಾ.ರಾಧಮೋಹನ್ ದಾಸ್ ಅಗರ್‌ವಾಲ್ (Radha Mohan Das Agarwal) ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ.
Advertisement
I just had a hour long meeting with Dr. RadhaMohan Das Agarwal Sir. I have said it before n saying it again, I am nothing without @narendramodi ji. Hopefully I vl get the ticket else I vl work for the party. Thank you. pic.twitter.com/mtqlC845WT
— Pratap Simha (Modi Ka Parivar) (@mepratap) March 12, 2024
Advertisement
ಸುದೀರ್ಘ ಚರ್ಚೆ ಬಳಿಕ ಪೋಸ್ಟ್ ಮಾಡಿದ ಪ್ರತಾಪ್ ಸಿಂಹ, ಮೋದಿ ಇಲ್ಲದಿದ್ದರೆ ನಾನು ಏನು ಇಲ್ಲ. ಈ ಬಾರಿ ಟಿಕೆಟ್ ಸಿಗುವ ವಿಶ್ವಾಸವಿದೆ. ಟಿಕೆಟ್ ಸಿಗದಿದ್ದರೆ ಪಕ್ಷಕ್ಕಾಗಿ ದುಡಿಯುತ್ತೇನೆ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಪ್ರೀಕ್ವೇಲ್‌ನಲ್ಲಿ ರಿಷಬ್ ಶೆಟ್ಟಿ ಜೊತೆ ಜ್ಯೂ.ಎನ್‌ಟಿಆರ್
Advertisement
ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದ (Mysuru Lok Sabha Election) ಬಿಜೆಪಿ ಟಿಕೆಟ್ ಯದುವೀರ್ ಒಡೆಯರ್ (Yaduveer Wadiyar) ಅವರಿಗೆ ಸಿಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಲೈವ್ ಬಂದ ಪ್ರತಾಪ್ ಸಿಂಹ, ಟಿವಿಗಳಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುತ್ತೋ ಇಲ್ವೋ ಅಂತ ಬರುತ್ತಿದೆ. ನನ್ನ ಟಿಕೆಟ್ ಬಗ್ಗೆ ಚಾಮುಂಡೇಶ್ವರಿ ನಿರ್ಧಾರ ಮಾಡುತ್ತಾಳೆ. ಆ ತಾಯಿಗೆ ಬಿಟ್ಟಿದ್ದೇನೆ. ಟಿಕೆಟ್ ನನಗೆ ಕೊಟ್ಟರೆ ನಾನು 3 ಲಕ್ಷ ಅಂತರದಿಂದ ಗೆಲ್ಲುತ್ತೇನೆ. ಕಾರ್ಯಕರ್ತರು ನನ್ನ ಪರ ನಿಂತಿದ್ದಾರೆ. ಈಶ್ವರಪ್ಪ ಅಭಿಪ್ರಾಯ ಸಂಗ್ರಹಕ್ಕೆ ಬಂದಾಗ ನನ್ನ ಹೆಸರನ್ನೇ ಕಾರ್ಯಕರ್ತರು ಸೂಚಿಸಿದ್ದರು ಎಂದು ಹೇಳಿದ್ದರು.
Advertisement
ಮೈಸೂರಲ್ಲಿ (Mysuru) ರಾಜಕಾರಣ ಮಾಡುವುದು ತುಂಬಾ ಕಷ್ಟ. ರಾಜರ ಊರು ಅಂದಮೇಲೆ ಚಾಡಿಕೋರರು, ಹೊಗಳುಭಟರು ಎಲ್ಲರೂ ಇರುತ್ತಾರೆ. ಸಿದ್ದಾಂತ ಬೇರೂರುವುದು ಬಹಳ ಕಷ್ಟ. 1989ರಿಂದ ಮೈಸೂರಿನಲ್ಲಿ ಸತತವಾಗಿ ಎರಡನೇ ಸಲ ಯಾರನ್ನೂ ಗೆಲ್ಲಿಸಿಲ್ಲ. ಜನ ನನ್ನನ್ನು ಗೆಲ್ಲಿಸಿದ್ದಾರೆ. ಜನರಿಗೆ ಅವರ ಮನೆ ಬಾಗಿಲು ಕಾಯುವವರು ಬೇಕು. ಜನರು ಹೋಗಿ ಬಾಗಿಲು ಕಾಯುವರು ಅವರಿಗೆ ಬೇಡ. ಮೈಸೂರಿನಲ್ಲಿ ಎರಡು ಬಾರಿ ರಾಜವಂಶಸ್ಥರನ್ನು ಸೋಲಿಸಿದ್ದಾರೆ. ಆದರೆ 40 ವರ್ಷಗಳಲ್ಲಿ ನಾನೊಬ್ಬನನ್ನು ಮಾತ್ರ ಸತತ ಎರಡು ಬಾರಿ ಗೆಲ್ಲಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ನಾನೇ ಕರ್ನಾಟಕದ ಮುಂದಿನ ಸಿಎಂ – ಬಾಂಬ್ ಸಿಡಿಸಿದ ಯತ್ನಾಳ್