ನವದೆಹಲಿ: ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ( Govind Karjol) ಅವರಿಗೆ ಚಿತ್ರದುರ್ಗ (Chitradurga) ಲೋಕಸಭಾ ಕ್ಷೇತ್ರದ ಟಿಕೆಟ್ ಬಿಜೆಪಿ (BJP) ಹೈಕಮಾಂಡ್ ನೀಡಿದೆ.
ಹಾಲಿ ಕೇಂದ್ರ ಸಚಿವ ನಾರಾಯಣಸ್ವಾಮಿ (Narayana Swamy) ಟಿಕೆಟ್ ಕೈ ತಪ್ಪಿದೆ. ಚಿತ್ರದುರ್ಗಕ್ಕೆ ಮತ್ತೆ ಬಿಜೆಪಿ ಹೊಸ ಮುಖವನ್ನೇ ಪರಿಚಯಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಬಂಡಾಯ – ಮುನಿಯಪ್ಪ ಕೋಲಾರ ಎಂಟ್ರಿಗೆ ಶಾಸಕರ ವಿರೋಧ ಯಾಕೆ?
Advertisement
Advertisement
ಕಾಂಗ್ರೆಸ್ ಚಂದ್ರಪ್ಪ (Chandrappa) ಅವರನ್ನು ಕಣಕ್ಕೆ ಇಳಿಸಿದೆ. ಬಿಜೆಪಿ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಪ್ರಕಟಿಸುವ ಮೂಲಕ ಕರ್ನಾಟಕದ ತನ್ನ ಎಲ್ಲಾ 25 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ. ಹಾಸನ, ಮಂಡ್ಯ, ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಿದೆ.
Advertisement
ಟಿಕೆಟ್ ನೀಡಿದ್ದು ಯಾಕೆ?
ಎಡಗೈ ಮತ್ತು ಭೋವಿ ದಲಿತ ಸಮುದಾಯಗಳ ಮಧ್ಯೆ ಭಾರೀ ಪೈಪೋಟಿ ಇತ್ತು. ಕೊನೆಗೆ ಗೆಲ್ಲುವ ಮಾನದಂಡ ಅಡಿ ಎಡಗೈ ದಲಿತ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಹಾಲಿ ಸಂಸದ ಎ ನಾರಾಯಣ ಸ್ವಾಮಿಗೆ ವಿರೋಧಿ ಅಲೆ ವ್ಯಕ್ತವಾಗಿತ್ತು. ಹೀಗಾಗಿ ಅದೇ ಸಮುದಾಯದ ಗೋವಿಂದ ಕಾರಜೋಳಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಮಾಜಿ ಸಂಸದ ಜೆ ಜನಾರ್ದನ ಸ್ವಾಮಿ ಪರ ಸಂಘ ಪರಿವಾರ ಬ್ಯಾಟಿಂಗ್ ನಡೆಸಿತ್ತು.