ಬೆಂಗಳೂರು/ಮೈಸೂರು: ತವರು ಜಿಲ್ಲೆ ಮೈಸೂರನ್ನು (Mysuru- Kodagu) ಗೆಲ್ಲಬೇಕು, ಚಾಮರಾಜನಗರ (Chamarajangara) ಮರಳಿ ಪಡೆಯಲು ಸಿಎಂ ಸಿದ್ದರಾಮಯ್ಯ (CM Siddaramaiah) ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಹೌದು. ಈ ಎರಡು ಕ್ಷೇತ್ರಗಳನ್ನು ಗೆಲ್ಲಲು ಸಿದ್ದರಾಮಯ್ಯ ಇಂದಿನಿಂದ 4 ದಿನಗಳ ಮೈಸೂರಿನಲ್ಲೇ (Mysuru) ವಾಸ್ತವ್ಯ ಹೂಡಲಿದ್ದಾರೆ. ಕಡೆಗಳಿಗೆಯಲ್ಲಿ ತಂತ್ರ ಮಾಡಿದರೆ ಲಾಭ ಇಲ್ಲ. ಅದಕ್ಕೆ ಈಗಲೇ ಯುದ್ಧ ತಂತ್ರ ರೂಪಿಸಬೇಕು ಬರುತ್ತೇನೆ ಎಂದು ಆಪ್ತರಿಗೆ ಸಂದೇಶ ಕಳುಹಿಸಿದ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಸರಣಿ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಮರಳಿ ಗೂಡಿಗೆ ಜನಾರ್ದನ ರೆಡ್ಡಿ- ಸೋಮವಾರ ಬಿಜೆಪಿ ಸೇರ್ಪಡೆ
Advertisement
Advertisement
ಮೈಸೂರು ಮಹಾರಾಜ ಯದುವೀರ್ (Yaduveer Wadiyar) ವಿರುದ್ಧ ರಣತಂತ್ರ ಹೂಡುವುದರ ಜೊತೆ ಚಾಮರಾಜನಗರ (Chamarajangara) ಭಿನ್ನಾಭಿಪ್ರಾಯ ಸರಿಪಡಿಸುವ ಹೊಣೆಯೂ ಸಿಎಂ ಹೆಗಲಿಗಿದೆ.
Advertisement
ಜಾತಿ ಸಮೀಕರಣದಲ್ಲಿ ನಾಯಕರನ್ನು ಕರೆದು ಮಾತನಾಡುವುದು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡುವುದು, ಗೊಂದಲ ಅಸಮಧಾನವಿದ್ದರೆ ಆ ನಾಯಕರನ್ನು ಕರೆದು ಮಾತನಾಡುವುದು. ಹೀಗೆ ಮೈಸೂರು ಲೋಕಸಭೆ ಹಾಗೂ ಚಾಮರಾಜನಗರ ಲೋಕಸಭೆ ಎರಡೂ ಕ್ಷೇತ್ರದ ಚುನಾವಣಾ ರಣತಂತ್ರ ಹೆಣೆಯಲು ಸ್ವತ: ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 20 ಬಾಲ್‌ಗೆ ರಸೆಲ್ ಫಿಫ್ಟಿ – ಹೈದರಾಬಾದ್ ವಿರುದ್ಧ ಕೆಕೆಆರ್‌ಗೆ 4 ರನ್‌ಗಳ ರೋಚಕ ಜಯ
Advertisement
ಮೈಸೂರು – ಕೊಡಗು ಲೋಕಸಭಾ ಕ್ಷೇತ್ರ ಸಂಬಂಧವಾಗಿ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದಾರೆ. ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ, ಕೆ. ವೆಂಕಟೇಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು ಭಾಗಿಯಾಗಿದ್ದಾರೆ.
ಯದುವೀರ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಬೇಡಿ. ಬಿಜೆಪಿ ಅಷ್ಟೇ ನಮ್ಮ ಟಾರ್ಗೆಟ್. ಭಾಷಣ ಮಾಡವಾಗ ಎಚ್ಚರ ಇರಲಿ. ಯದುವೀರ್ ವಿರುದ್ಧ ಸಿಕ್ಕ ಸಿಕ್ಕಂತೆ ಹೇಳಿಕೆ ಕೊಡಬೇಡಿ. ಭಾವನಾತ್ಮಕ ವಿಚಾರವನ್ನು ತಿರುಗಿಸುವಲ್ಲಿ ಬಿಜೆಪಿಯವರು ನಿಸ್ಸೀಮರಾಗಿದ್ದಾರೆ. ಬಿಜೆಪಿಯವರಿಗೆ ನಿಮ್ಮ ಹೇಳಿಕೆ ಆಹಾರವಾಗಬಾರದು. ಈ ಕಾರಣದಿಂದ ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಸಭೆಯಲ್ಲಿ ಮುಖಂಡರು ಹಾಗೂ ಶಾಸಕರುಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.