ನವದೆಹಲಿ: ಬಿಜೆಪಿಯ ‘ಅಬ್ಕಿ ಬಾರ್, ಚಾರ್ ಸೌ ಪಾರ್’ ಕನಸು ನನಸಾಗುತ್ತದೆ ಎಂದು ಟುಡೇಸ್ ಚಾಣಕ್ಯ (Today’s Chanakya) ಹೇಳಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ (Exit Poll) ಎನ್ಡಿಎ (NDA) ಈ ಬಾರಿ 400ರ ಗಡಿಯನ್ನು ದಾಟುತ್ತದೆ ಎಂದು ಭವಿಷ್ಯ ನುಡಿದಿದೆ. Exit Poll 2024 | ದ್ರಾವಿಡರ ನಾಡಿನಲ್ಲಿ ಕಮಲೋತ್ಪತ್ತಿ – ಬಿಜೆಪಿಯಿಂದ ಐತಿಹಾಸಿಕ ಸಾಧನೆ!
ಯಾವುದಕ್ಕೆ ಎಷ್ಟು?
ಬಿಜೆಪಿ 335 ± 15
ಎನ್ಡಿಎ 400 ± 15
ಕಾಂಗ್ರೆಸ್ 50 ± 11
INDIA 107 ± 11
ಇತರರು 36 ± 9 ಇದನ್ನೂ ಓದಿ: ಎನ್ಡಿಎ ಸರ್ಕಾರವನ್ನು ಮತ್ತೆ ಆಯ್ಕೆ ಮಾಡಲು ಜನ ದಾಖಲೆ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ: ಮೋದಿ
Advertisement
ಇಂಡಿಯಾ ಟುಡೆ ಸಮೀಕ್ಷೆ ಈ ಬಾರಿಗೆ ಎನ್ಡಿಎಗೆ 361-401, ಇಂಡಿಯಾ ಒಕ್ಕೂಟಕ್ಕೆ 131-166, ಇತರರಿಗೆ 8-20 ಸ್ಥಾನಗಳನ್ನು ನೀಡಿದೆ.
Advertisement
2009, 2014, 2019 ಲೋಕಸಭಾ ಚುನಾವಣೆಯ (Lok Sabha Election) ಸಂದರ್ಭದಲ್ಲಿ ಟುಡೇಸ್ ಚಾಣಕ್ಯ ಬಹುತೇಕ ನಿಖರ ಭವಿಷ್ಯ ನುಡಿದಿತ್ತು. 2014ರ ಚುನಾವಣೆಯಲ್ಲಿ ಎನ್ಡಿಎ 340 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. ಫಲಿತಾಂಶ ಬಂದಾಗ ಬಿಜೆಪಿ 282, ಎನ್ಡಿಎ 336 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದನ್ನೂ ಓದಿ: Exit Polls | ಕೇರಳದಲ್ಲೂ ಖಾತೆ ತೆರೆಯಲಿದೆ ಬಿಜೆಪಿ
Advertisement
2019 ರ ಚುನಾವಣೆಯಲ್ಲಿ ಎನ್ಡಿಎಗೆ 340 ಸ್ಥಾನ ಸಿಗಬಹುದು ಎಂದು ಟುಡೇಸ್ ಚಾಣಕ್ಯ ಭವಿಷ್ಯ ನುಡಿದಿತ್ತು. ಅಂತಿಮ ಫಲಿತಾಂಶ ಬಂದಾಗ ಬಿಜೆಪಿ 303, ಎನ್ಡಿಎ 352 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.