ಬೆಂಗಳೂರು/ಶಿವಮೊಗ್ಗ: ದೇಶ-ರಾಜ್ಯದಲ್ಲಿ ಲೋಕಸಮರದ (Lok Sabha Election) ರಾಜಕೀಯ ಕಾವೇರುತ್ತಿದೆ. ಬಿಜೆಪಿ (BJP) ಈವರೆಗೆ 267 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, 63 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ. ಇದರಲ್ಲಿ ರಾಜ್ಯದ ಒಂಬತ್ತು ಸಂಸದರು ಕೂಡ ಸೇರಿದ್ದಾರೆ. ಪಟ್ಟಿ ರಿಲೀಸ್ ಬೆನ್ನಲ್ಲೇ ಟಿಕೆಟ್ ವಂಚಿತರ ಪೈಕಿ ಕೆಲವರು ಅಸಮಾಧಾನ ವ್ಯಕ್ತಪಡಿಸಲು ಶುರು ಮಾಡಿದ್ದಾರೆ.
ಪುತ್ರನಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸಿಡಿದೆದ್ದ ಈಶ್ವರಪ್ಪ(KS Eshwarrappa) ಮನವೊಲಿಸುವ ನೆಪದಲ್ಲಿ ಅವರ ಮನೆಯಲ್ಲಿ ಒಂದಿಷ್ಟು ಅಸಮಧಾನಿತ ನಾಯಕರು ಸಭೆ ನಡೆಸಿದ್ದಾರೆ. ಆದರೆ ಈಶ್ವರಪ್ಪ ಜೊತೆ ಮಾತನಾಡಿ ಎಲ್ಲಾ ಸರಿ ಮಾಡುತ್ತೇನೆ. ಅವರ ಪುತ್ರನಿಗೆ ಎಂಎಲ್‌ಸಿ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಿದೆ ಎಂದು ಯಡಿಯೂರಪ್ಪ (BS Yediyurappa) ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ತುಂಡು ಮಾಡುತ್ತೇನೆ – ಮೋದಿಗೆ ಜೀವ ಬೆದರಿಕೆ ಹಾಕಿದ್ದ ತಮಿಳುನಾಡು ಸಚಿವನ ವಿರುದ್ಧ ಎಫ್‌ಐಆರ್
Advertisement
Advertisement
ಇದನ್ನು ಕೇಳುವ ಸ್ಥಿತಿಯಲ್ಲಿ ಈಶ್ವರಪ್ಪ ಇದ್ದಂತಿಲ್ಲ. ನನ್ನ ಪುತ್ರ ಕಾಂತೇಶ್‌ಗೆ (Kantesh) ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಯಡಿಯೂರಪ್ಪ ಮೋಸ ಮಾಡಿದ್ದಾರೆ ಅಂತ ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.
Advertisement
ಶಿವಮೊಗ್ಗದಿಂದ (Shivamohgga) ಕಣಕ್ಕಿಳಿಯುವಂತೆ ತಮಗೆ ಬೆಂಬಲಿಗರ ಒತ್ತಡ ಇದೆ ಎನ್ನುವ ಮೂಲಕ ಯಡಿಯೂರಪ್ಪ ಪುತ್ರನ ವಿರುದ್ಧ ಕಣಕ್ಕಿಳಿಯುವ ಸುಳಿವನ್ನು ಈಶ್ವರಪ್ಪ ನೀಡಿದ್ದಾರೆ. ಯಡಿಯೂರಪ್ಪರನ್ನು ದೂರುವುದು ಸರಿಯಲ್ಲ. ಇದು ಕೇಂದ್ರದ ನಿರ್ಧಾರ ಎಂದು ಹಾವೇರಿ (Haveri) ಅಭ್ಯರ್ಥಿ ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ಸಮಜಾಯಿಷಿ ನೀಡಿದ್ದಾರೆ. ಶುಕ್ರವಾರ ಈಶ್ವರಪ್ಪ ಬೆಂಬಲಿಗರ ಸಭೆ ಕರೆದಿದ್ದು, ಅವರ ನಡೆ ಕುತೂಹಲ ಕೆರಳಿಸಿದೆ.
Advertisement