ಬೆಂಗಳೂರು: ನಟಿ ಅಮೂಲ್ಯ ಮಾವ, ಬಿಬಿಎಂಪಿ (BBMP) ಮಾಜಿ ಕಾರ್ಪೋರೇಟರ್ ರಾಮಚಂದ್ರ (Ramachandra) ಅವರ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದಾರೆ.
10 ವಾಹನಗಳಲ್ಲಿ ಬಂದ 30ಕ್ಕೂ ಹೆಚ್ಚು ಅಧಿಕಾರಿಗಳು ಆರ್‌ಆರ್ ನಗರದಲ್ಲಿರುವ (RR Nagara) ನಿವಾಸದ ಮನೆ ರಾತ್ರಿ 10 ಗಂಟೆಯ ವೇಳೆ ದಾಳಿ ಮಾಡಿ 31 ಲೀಟರ್ ಮದ್ಯವನ್ನು (Liquor) ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಉದ್ಯಮಿ ಮನೆ ಮೇಲೆ ಐಟಿ ದಾಳಿ; ಸೀಕ್ರೆಟ್ ರೂಮಿನಲ್ಲಿದ್ದ 22 ಕೆಜಿ ಚಿನ್ನ, 6.50 ಕೋಟಿ ಹಣ ಜಪ್ತಿ!
- Advertisement
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಮಚಂದ್ರ, ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಮನೆ ಮೇಲೆ ದಾಳಿ ಮಾಡಿಸಿದ್ದಾರೆ. ಕಾಂಗ್ರೆಸ್ (Congress) ಈ ಭಾಗದಲ್ಲಿ ಹಣವನ್ನು ಹಂಚಿಕೆ ಮಾಡುತ್ತಿತ್ತು. ಅದಕ್ಕೆ ನಾವು ಅಡ್ಡಿ ಪಡಿಸುತ್ತೇವೆ ಎಂದು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ
- Advertisement
ದಾಳಿ ವೇಳೆ ಆರ್‌ಓಗೆ ಪದೇ ಪದೇ ಪೋನ್ ಬರುತಿತ್ತು. ಅವರನ್ನು ಎರಡು ದಿನನ ಒಳಗಡೆ ಹಾಕಿಸಿ ಎಂದು ಫೋನಿನಲ್ಲಿ ಇದ್ದ ವ್ಯಕ್ತಿ ಹೇಳುತ್ತಿದ್ದರು. ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ಮದ್ಯ ತರಿಸಿದ್ದೆ. ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಆಚರಿಸಬಾರದು ಎಂದು ಸುಮ್ಮನೆ ಆಗಿದ್ದೆವು. ಈ ಭಾಗದಲ್ಲಿ ಬಿಜೆಪಿಗೆ (BJP) 18 ಸಾವಿರ ಮುನ್ನಡೆ ಬರುತ್ತದೆ. ಇದನ್ನು ಸಹಿಸಲಾಗದೇ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ರಾಮಚಂದ್ರ ಆರೋಪಿಸಿದ್ದಾರೆ.