ನವದೆಹಲಿ: ಸಂಸದ ರಾಹುಲ್ ಗಾಂಧಿಗೆ (Rahul Gandhi) ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ಶಾಕ್ ನೀಡಿದ್ದು ವಯನಾಡಿನಲ್ಲಿ (Wayanad) ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ.
ಕೇರಳದಲ್ಲಿ (Kerala) ಲೋಕಸಭೆ ಚುನಾವಣೆಗೆ (Lok Sabha Election) ನಾಲ್ಕು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿಪಿಐ ಸೋಮವಾರ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಮಟ್ಟದಲ್ಲಿ INDIA ಮೈತ್ರಿಕೂಟದ ಭಾಗವಾಗಿರುವ ಸಿಪಿಐ ತಿರುವನಂತಪುರಂನಿಂದ ಪನ್ನಿಯನ್ ರವೀಂದ್ರನ್ ಮತ್ತು ವಯನಾಡಿನಿಂದ ಅನ್ನಿ ರಾಜಾ ಅವರನ್ನು ಕಣಕ್ಕಿಳಿಸಿದೆ. ವಿಎಸ್ ಸುನೀಲ್ ಕುಮಾರ್ ತ್ರಿಶೂರ್ ಮತ್ತು ಅರುಣ್ ಕುಮಾರ್ ಮಾವೇಲಿಕರದಿಂದ ಸ್ಪರ್ಧಿಸಲಿದ್ದಾರೆ.
Advertisement
ಕಾಂಗ್ರೆಸ್‌ನ (Congress) ಶಶಿ ತರೂರ್ ಅವರು ತಿರುವನಂತಪುರಂನ ಹಾಲಿ ಸಂಸದರಾಗಿದ್ದು, ರಾಹುಲ್ ಗಾಂಧಿ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಿದರೆ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ (Annie Raja)ಅವರ ಪತ್ನಿ ಅನ್ನಿ ರಾಜಾ ಅವರನ್ನು ಎದುರಿಸಬೇಕಾಗುತ್ತದೆ. ಇದನ್ನೂ ಓದಿ:ಜಾರ್ಖಂಡ್‌ನ ಮಾಜಿ ಸಿಎಂ ಮಧು ಕೋಡ ಪತ್ನಿ, ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ
Advertisement
Advertisement
2019 ರ ಚುನಾವಣೆಯಲ್ಲಿ ಸಿಪಿಐ 4 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಯಾವುದೇ ಕ್ಷೇತ್ರವನ್ನು ಗೆದ್ದಿರಲಿಲ್ಲ. ಕೇರಳದಲ್ಲಿ ಒಟ್ಟು 20 ಲೋಕಸಭಾ ಸ್ಥಾನಗಳಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಗೆ 2, ಸಿಪಿಐ (ಎಂ), ಕೆಸಿ (ಎಂ), ಮತ್ತು ಆರ್‌ಎಸ್‌ಪಿ ತಲಾ 1 ಸ್ಥಾನಗಳನ್ನು ಗೆದ್ದಿದ್ದವು. ಇದನ್ನೂ ಓದಿ: ಭಾರತಕ್ಕೆ ಬ್ರಿಟನ್ ಲೇಖಕಿ ನಿತಾಶಾ ಕೌಲ್‌ಗೆ ನೋ ಎಂಟ್ರಿ – ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್
Advertisement
ರಾಜ್ಯಸಭಾ ಸಂಸದ ಮತ್ತು ಸಿಪಿಐ (ಎಂ) ಕಾರ್ಯದರ್ಶಿ ಬಿನೋಯ್ ವಿಶ್ವಂ ಅವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇರಳದಿಂದ ಸ್ಪರ್ಧಿಸುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಉತ್ತರ ಭಾರತವನ್ನು ಭಾರತದ ಕೇಂದ್ರವೆಂದು ಪರಿಗಣಿಸಲಾಗಿದೆ. ಆ ಭಾಗದಿಂದ ಗರಿಷ್ಠ ಸಂಖ್ಯೆಯ ಸಂಸದರು ಸಂಸತ್ತಿಗೆ ಬರುತ್ತಾರೆ. ಆ ಭಾಗದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಪ್ರಬಲ ಶಕ್ತಿಯಾಗಿದೆ ಎಂದು ಅವರು ಹೇಳಿದರು.
ಕೇವಲ 20 ಸ್ಥಾನಗಳಿರುವ ಕಾಂಗ್ರೆಸ್ ದಕ್ಷಿಣ ಭಾರತ ಅದರಲ್ಲೂ ಕೇರಳಕ್ಕೆ ಬರುವ ರಾಜಕೀಯ ತರ್ಕ ಏನು? ಕೇರಳದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. 2019ರಲ್ಲಿ ಅಮೇಠಿಯಿಂದ ವಯನಾಡಿಗೆ ರಾಹುಲ್ ಗಾಂಧಿ ಬಂದರು. ರಾಹುಲ್ ಗಾಂಧಿಗೆ ಬಿಜೆಪಿ ಭಯವಿದೆ ಎಂದು ಕಮಲ ನಾಯಕರು ಪ್ರಚಾರ ಆರಂಭಿಸಿದರು. ಇದರ ಪರಿಣಾಮ ಇಡೀ ಉತ್ತರ ಭಾರತದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು ಎಂದರು.