ಬಳ್ಳಾರಿ: ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ (Nasser Hussain) ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ (Pakistan Zindbad) ಎಂದು ಹೇಳಿಯೇ ಇಲ್ಲ. ನೂರಕ್ಕೆ ನೂರು ಪರ್ಸೆಂಟ್ ಪಾಕಿಸ್ತಾನ್ ಜಿಂದಾಬಾದ್ ಅಂದಿಲ್ಲ. ನೂರಕ್ಕೆ ಸಾವಿರ ಪರ್ಸೆಂಟ್ ಅಂದಿಲ್ಲ ಎಂದು ಬಳ್ಳಾರಿ (Ballari) ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ (Nagendra) ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಕೇಸ್… ಆರೋಪಿಗಳ ಪತ್ತೆಗೆ ಭಾರೀ ಕಸರತ್ತು – 15 ಜನರ ಧ್ವನಿ ಪರೀಕ್ಷೆ ನಡೆಸಿದ್ದ ಎಫ್‌ಎಸ್‌ಎಲ್ – ಕೊನೆಗೆ ಅರೆಸ್ಟ್
ಕಳೆದ ಮೂರು ದಿನಗಳ ಹಿಂದೆ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್‌ಗೆ ಬಳ್ಳಾರಿಯಲ್ಲಿ ಅದ್ದೂರಿ ಮೆರವಣಿಗೆ ಮಾಡಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ನಾಗೇಂದ್ರ ಅವರು, ಯಾರು ಪಾಕಿಸ್ತಾನ್ ಜಿಂದಾಬಾದ್ ಅಂದಿಲ್ಲ. ವಿಡಿಯೋವನ್ನು ಕೆಲವರು ಎಡಿಟ್ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜ್ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್
Advertisement
Advertisement
ವಿಧಿವಿಜ್ಞಾನ ಪ್ರಯೋಗಾಲಯದ ವರದಿ (FSL) ಇನ್ನೂ ಬಂದೇ ಇಲ್ಲ ಎಂದು ಮಾಧ್ಯಮದವರ ಜೊತೆ ವಾದ ಮಾಡಿದ ಅವರು, ಸಾಮಾನ್ಯವಾಗಿ ಅಂತಹ ಪ್ರಕರಣವಾದಾಗ ನಡೆದಾಗ ಬಂಧನ ಮಾಡುವುದು ಒಂದು ಅಭ್ಯಾಸ. ಮಗ್ದರನ್ನು ತೆಗೆದುಕೊಂಡು ಹೋಗಿ ಒಳಗೆ ಹಾಕಿ ಆಮೇಲೆ ಜಾಮೀನು ಕೊಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಾವಿನಹಣ್ಣು, ಸಿಹಿತಿಂಡಿ ಸೇವಿಸಿ ಕೇಜ್ರಿವಾಲ್ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ತಿದ್ದಾರೆ- ಇಡಿ ಆರೋಪ
Advertisement
ನಮ್ಮ ಭಾರತದಲ್ಲಿ ಯಾವನಾದರೂ ಪಾಕಿಸ್ತಾನ್ ಜಿಂದಾಬಾದ್ ಅಂದಿದ್ದರೆ ಅವನನ್ನ ಗಲ್ಲಿಗೇರಿಸಿದರಲ್ಲಿ ತಪ್ಪಿಲ್ಲ. ಅವರು ಹೇಳಿದ್ದು ನಾಸಿರ್ ಸಾಬ್ ಅಂದಿದ್ದಾರೆ. ಫಾಸ್ಟ್ ಆಗಿ ತೋರಿಸಿದಾಗ ಹಾಗೆ ಕೇಳುತ್ತದೆ. ಇದು ನಾನು ನೋಡಿರುವ ಸತ್ಯ. ಎಫ್‌ಎಸ್‌ಎಲ್ ವರದಿಯಲ್ಲಿ ಸತ್ಯ ಬರತ್ತದೆ. ನಮ್ಮ ಕರ್ನಾಟಕದಲ್ಲಿ ಯಾರು ಹಂಗೆ ಮಾಡಲ್ಲ, ಮಾಡಿದ್ರೆ ಅವನನ್ನ ಗಲ್ಲಿಗೇರಿಸಿದ್ರು ತಪ್ಪಿಲ್ಲ ಎಂದಿದ್ದಾರೆ.
Advertisement