ಬೆಂಗಳೂರು: ಕಾಂಗ್ರೆಸ್ ಪಕ್ಷ (Karnataka Congress) ಕರ್ನಾಟಕದ ಎರಡನೇ ಲೋಕಸಭಾ (Lok Sabha) ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಸರ್ಕಸ್ ಮಾಡುತ್ತಿದೆ. ಮೊದಲ ಪಟ್ಟಿಯಲ್ಲಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಕಾಂಗ್ರೆಸ್, ಉಳಿದ 21 ಕ್ಷೇತ್ರಗಳಿಗೆ ಉಮೇದುವಾರರನ್ನು ಶಿಫಾರಸು ಮಾಡಲು ರಾಜ್ಯ ಕಾಂಗ್ರೆಸ್ ಸರಣಿ ಸಭೆ ನಡೆಸಿದೆ.
ಬೆಂಗಳೂರು ಉತ್ತರದಿಂದ ಶಾಸಕ ಪ್ರಿಯಾಕೃಷ್ಣ ಹೆಸರನ್ನು ಕೆಪಿಸಿಸಿ ಶಿಫಾರಸು ಮಾಡಿದೆ. ಆದರೆ ಪ್ರಿಯಾಕೃಷ್ಣ ತಂದೆ ಕೃಷ್ಣಪ್ಪ ಒಪ್ಪಿಗೆ ಸೂಚಿಸಿಲ್ಲ. ಇದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಚಾಮರಾಜನಗರ, ಕೋಲಾರದಲ್ಲಿ ಸಚಿವರನ್ನು ಕಣಕ್ಕಿಳಿಸಲು ಹೈಕಮಾಂಡ್ (Congress High Command) ಬಯಸಿದೆ. ಆದರೆ ಮಹದೇವಪ್ಪ ಒಪ್ಪುತ್ತಿಲ್ಲ. ಮುನಿಯಪ್ಪ ಗೊಂದಲದಲ್ಲಿದ್ದಾರೆ. ಹೀಗಾಗಿ ಈ ಎರಡು ಕ್ಷೇತ್ರಗಳ ಅಂತಿಮ ನಿರ್ಣಯವನ್ನು ಹೈಕಮಾಂಡ್‌ಗೆ ಬಿಡಲಾಗಿದೆ. ಇದನ್ನೂ ಓದಿ: Lok Sabha 2024: ‘ಕೈ’, ಕಮಲ ಪಾಳಯದಲ್ಲಿ ಟಿಕೆಟ್ ಫೈಟ್ – ಈ ಸಲ ಯಾರ ಪಾಲಾಗುತ್ತೆ ಚಿಕ್ಕಬಳ್ಳಾಪುರ?
ಬೆಳಗಾವಿಯಿಂದ ಸಚಿವೆ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ಗೆ ಟಿಕೆಟ್ ಖಚಿತ ಎನ್ನಲಾಗಿದೆ. ಚಿಕ್ಕೋಡಿಯಿಂದ ಸತೀಶ್ ಜಾಕಿಹೊಳಿ ಪುತ್ರಿ ಪ್ರಿಯಾಂಕಾ ಹೆಸರನ್ನು ಕೆಪಿಸಿಸಿ ಶಿಫಾರಸು ಮಾಡಲು ಮುಂದಾಗಿದೆ. ಆದರೆ ಇದಕ್ಕೆ ಸಚಿವ ಜಾರಕಿಹೊಳಿ ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ದೇಶದ್ರೋಹಿಗಳಿಗೆ ಪಾಸ್ ಕೊಟ್ಟವರಿಗೆ ಟಿಕೆಟ್ ಕೊಟ್ಟರೆ ಹೇಗೆ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಟಾಂಗ್
ಈ ಮಧ್ಯೆ ತಮಗೆ ಚಿತ್ರದುರ್ಗ ಟಿಕೆಟ್ ತಪ್ಪಿಸಲು ಯತ್ನಿಸುತ್ತಿರುವ ಸಚಿವ ಆರ್‌ಬಿ ತಿಮ್ಮಾಪುರ ವಿರುದ್ಧ ಮಾಜಿ ಸಂಸದ ಚಂದ್ರಪ್ಪ ಆಕ್ರೋಶ ಹೊರಹಾಕಿದ್ದಾರೆ. ಸುರ್ಜೆವಾಲಾ ಭೇಟಿ ಮಾಡಿ ಲಾಬಿ ನಡೆಸಿದ್ದಾರೆ. ಈ ಮಧ್ಯೆ ಉಡುಪಿ-ಚಿಕ್ಕಮಗಳೂರು ಟಿಕೆಟ್ ಖಚಿತವಾದ ಹಿನ್ನೆಲೆಯಲ್ಲಿ ಇಂದು ಸಂಜೆ ಜಯಪ್ರಕಾಶ್ ಹೆಗಡೆ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ.