ಬೆಂಗಳೂರು: ಲೋಕಸಭಾ ಚುನಾವಣೆ (Lok Sabaha Election) ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ ತಯಾರಿಯೂ ಜೋರಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ (CM Siddaramaiah Cabinet) 6 ಸಚಿವರಿಗೆ ಲೋಕಸಭೆ ಚುನಾವಣೆಗೆ ಪಿಚ್ ಟೆಸ್ಟ್ ಆಫರ್ ಸಿಕ್ಕಿದೆ.
ಇಬ್ಬರನ್ನು ಬಿಟ್ಟು ಉಳಿದವರಿಗೆ ಲೋಕಸಭೆ ಚುನಾವಣೆಗೆ ಒಲವು ಇಲ್ಲ. ಹೀಗಾಗಿ ಬಲವಂತ ಬೇಡ ಎಂಬ ಸಂದೇಶ ರವಾನೆಯಾಗಿದೆ. ಓರ್ವ ಸಚಿವ ಮಗನ ಭವಿಷ್ಯಕ್ಕೆ ದಾರಿ ಮಾಡಿಕೊಡುವ ತಂತ್ರ ಹೆಣೆದಿದ್ದು ಸ್ಪರ್ಧಿಸುವ ಬಗ್ಗೆ ಗೊಂದಲದಲ್ಲಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ಸಿಕ್ಕಿಂನಲ್ಲಿ ಮೇಘಸ್ಫೋಟ – ಹಠಾತ್ ಪ್ರವಾಹದಲ್ಲಿ 23 ಸೈನಿಕರು ನಾಪತ್ತೆ
Advertisement
ಬಿಜೆಪಿ-ಜೆಡಿಎಸ್ (BJP _JDS) ಮೈತ್ರಿಯಿಂದ ಕಾಂಗ್ರೆಸ್ (Congress) ಟಾರ್ಗೆಟ್ 15 ಗೆಲ್ಲುವ ಗೇಮ್ ಪ್ಲಾನ್ ಮಾಡಿಕೊಂಡಿದೆ. ಸಿದ್ದರಾಮಯ್ಯ ಸರ್ಕಾರದ ಕೆಲ ಸಚಿವರನ್ನೇ ಕಣಕ್ಕಿಳಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಖಾಸಗಿ ಸರ್ವೇಯಲ್ಲಿ ಇವರೆಲ್ಲಾ ಪ್ರಬಲ ಅಭ್ಯರ್ಥಿಗಳು ಎಂಬ ವರದಿಯೂ ಬಂದಿದೆ.
Advertisement
ಮೈಸೂರು, ಚಾಮರಾಜನಗರ, ಕೋಲಾರ, ಬೆಳಗಾವಿ, ಧಾರವಾಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳಲ್ಲಿ ಚರ್ಚೆ ನಡೆದಿದೆ. ಇಬ್ಬರು ಸಚಿವರು ಸ್ಪರ್ಧೆಗೆ ಒಪ್ಪಿದರೆ ಒಬ್ಬರು ಸಚಿವರು ಗೊಂದಲಿದ್ದಾರೆ. ಮೂವರು ಸಚಿವರಂತೂ ನಮಗೆ ಲೋಕಸಭೆ ಸಹವಾಸವೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಆಜ್ಞೆಯೇ ಅಂತಿಮ ಎನ್ನುತ್ತಿದ್ದಾರೆ.
Advertisement
Advertisement
Web Stories