ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan) ನೀಡಿದ ಹೇಳಿಕೆಯೊಂದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಶ್ಚಿಮ ಬಂಗಾಳ (West Benagl) ಬೆಹರಂಪುರ ರ‍್ಯಾಲಿ ಉದ್ದೇಶಿಸಿ ಮಾತಾಡಿದ ಅಧೀರ್ ರಂಜನ್ ಚೌಧರಿ, ಟಿಎಂಸಿಗೆ (TMC) ಯಾಕೆ ವೋಟ್ ಹಾಕುತ್ತೀರಿ. ಅದಕ್ಕಿಂತ ಬಿಜೆಪಿಗೆ (BJP) ವೋಟ್ ಹಾಕೋದು ಉತ್ತಮ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ ಸೇರಿ ದೇಶದ ಹಲವೆಡೆ ಮೇ ತಿಂಗಳಲ್ಲಿ ಸಾಮಾನ್ಯ ಮಳೆ
Advertisement
#WATCH | Murshidabad, West Bengal: State Congress president Adhir Ranjan Chowdhury says, "This time '400 paar' won't happen…100 seats have already slipped away from the hands of PM Modi…It is necessary to make Congress and CPI(M) win. If Congress and CPI(M) don't win,… pic.twitter.com/kzyywkAZIS
— ANI (@ANI) May 1, 2024
Advertisement
ಈ ವೀಡಿಯೋ ಈಗ ವೈರಲ್ ಆಗಿದ್ದು, ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ. ಅಧೀರ್ ರಂಜನ್ ಮಾತುಗಳನ್ನು ಕೇಳ್ತಿದ್ದೀರಾ ಅಲ್ವಾ? ಅವರು ನಿಜವಾಗಿಯೂ ಕಾಂಗ್ರೆಸ್ಸಿಗರೇ ಎಂದು ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಅಧೀರ್ ರಂಜನ್ ಚೌಧರಿ ಬಿಜೆಪಿ ಪ್ರೀತಿಯನ್ನು ಕಟುವಾಗಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: 10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ: ಕೋವಿಶೀಲ್ಡ್ ಬಗ್ಗೆ ಸ್ಪಷ್ಟನೆ ನೀಡಿದ ICMR ನಿವೃತ್ತ ವಿಜ್ಞಾನಿ
Advertisement
ಟಿಎಂಸಿ ನಾಯಕಿ ಸುಷ್ಮಿತಾ ದೇವ್ ಅಧೀರ್ ರಂಜನ್ ವಿಡಿಯೋ ಹಂಚಿಕೊಂಡು, ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ ಎಂದು ಎಂದು ಲೇವಡಿ ಮಾಡಿದ್ದಾರೆ.
Advertisement