ಜೈಪುರ: ಕಾಂಗ್ರೆಸ್ (Congress) ಅಧಿಕಾರದಲ್ಲಿದ್ದಾಗ ಮುಸ್ಲಿಮರಿಗೆ (Muslims) ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂಬುದಾಗಿ ಹೇಳಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಗಂಭೀರ ಆರೋಪ ಮಾಡಿದ್ದಾರೆ.
Congress earlier said that the first right on country's resources is of muslims. Now Congress manifesto says that they will do wealth census, take your savings & redistribute it to thoes who are producing more children and the illegal infiltrators- PM Modi roars 🔥 pic.twitter.com/Wet8debh5v
— Megh Updates 🚨™ (@MeghUpdates) April 21, 2024
Advertisement
ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಸಮಾವೇಶವನ್ನು (Lok Sabha Election) ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಒಳನುಗ್ಗುವವರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಬಹುದು ಎಂದು ಹೇಳಿ ಕಿಡಿಕಾರಿದರು. ಇದನ್ನೂ ಓದಿ: ವಿವಾಹಿತ ಮಹಿಳೆಯ ಖಾಸಗಿ ಫೋಟೋ ವೈರಲ್ ಬೆದರಿಕೆ ಹಾಕಿ ಮತಾಂತರಕ್ಕೆ ಯತ್ನ – ಲವ್ ಜಿಹಾದ್ ಆರೋಪ, ಇಬ್ಬರು ಅರೆಸ್ಟ್
Advertisement
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅವರು ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಹೇಳಿದ್ದರು. ಇದರರ್ಥ ಅವರು ಈ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ, ಒಳನುಗ್ಗುವವರಿಗೆ ಹಂಚುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಬೇಕೇ? ನುಸುಳುಕೋರರಿಗೆ ಹಣವನ್ನು ನೀಡಬಹುದೇ ಎಂದು ಮೋದಿ ಪ್ರಶ್ನಿಸಿ ತರಾಟೆಗೆ ತೆಗದುಕೊಂಡರು.
Advertisement
#WATCH | PM Modi in Rajasthan's Banswara, says, "Congress is trapped in the clutches of the Leftists and urban naxals. What Congress has said in its manifesto is serious and worrying. They have said that if they form a government then a survey of property belonging to every… pic.twitter.com/jqRys2y7QU
— ANI (@ANI) April 21, 2024
Advertisement
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವ್ಯಕ್ತಿಗಳ ಆಸ್ತಿಗಳ ಸಮಗ್ರ ಸಮೀಕ್ಷೆ ನಡೆಸುವುದಾಗಿ ಘೋಷಿಸಿದೆ. ಈ ಸಮೀಕ್ಷೆಯು ಮಹಿಳೆಯರ ಒಡೆತನದ ಚಿನ್ನದ ಪ್ರಮಾಣ ಮತ್ತು ಸರ್ಕಾರಿ ನೌಕರರ ಆರ್ಥಿಕ ಆಸ್ತಿಯನ್ನು ನಿರ್ಣಯಿಸುತ್ತದೆ. ಹೆಚ್ಚುವರಿಯಾಗಿ ಅವರು ಚಿನ್ನವನ್ನು ಮರುಹಂಚಿಕೆ ಮಾಡಲು ಪ್ರಸ್ತಾಪಿಸಿದ್ದಾರೆ. ಅವರಲ್ಲಿ ಸಮಾನವಾಗಿ ಮಹಿಳೆಯರು ಒಡೆತನ ಹೊಂದಿದ್ದಾರೆ ಎಂದರು.
ಜನರ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ. ನಮ್ಮ ತಾಯಂದಿರು ಮತ್ತು ಸಹೋದರಿಯರ ಒಡೆತನದ ಮಂಗಳಸೂತ್ರ ಮತ್ತು ಚಿನ್ನದ ಮೌಲ್ಯವು ಅಮೂಲ್ಯವಾಗಿದೆ. ಕಾಂಗ್ರೆಸ್ ಈ ಸಂಪತ್ತನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಮರುಹಂಚಿಕೆ ಮಾಡುವ ಭರವಸೆಯನ್ನು ಹೇಗೆ ನೀಡುತ್ತದೆ ಎಂದು ಅವರು ಪ್ರಶ್ನಿಸಿದರು.
"We will have to devise innovative plans to ensure that minorities, particularly the Muslim minority, are empowered to share equitably in the fruits of development. They must have the first claim on resources."
– Dr Manmohan Singh, 9th Dec, 2006
The Congress doesn’t trust their… https://t.co/MWAf8uP23N pic.twitter.com/EDAKfasXT8
— BJP (@BJP4India) April 21, 2024
ಕಾಂಗ್ರೆಸ್ ಹೇಳಿತ್ತಾ?
2006 ರಲ್ಲಿ ನಡೆದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು, “ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ಸಂಪನ್ನತ್ತು ಸಮಾನವಾಗಿ ಹಂಚಿಕೊಳ್ಳಲು ಅಧಿಕಾರವನ್ನು ಖಚಿತಪಡಿಸಿಕೊಳ್ಳಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕು. ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕನ್ನು ಅವರು ಹೊಂದಿರಬೇಕು ಎಂದು ಹೇಳಿದ್ದರು. ಇದನ್ನೂ ಓದಿ: IPL 2024: ಹೆಚ್ಚುವರಿ 20 ರನ್ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್ ಬಾಯ್ಸ್ ಎಡವಿದ್ದೆಲ್ಲಿ?
PM मोदी ने आज फिर झूठ बोला।
वे देश को हिंदू-मुसलमान के नाम पर झूठ परोसकर बांट रहे हैं।
मेरी PM मोदी को चुनौती है कि कांग्रेस के घोषणा पत्र में कहीं भी 'हिंदू-मुसलमान' शब्द लिखा हो तो दिखा दें।
यह चुनौती स्वीकार करें, या झूठ बोलना बंद कर दें। pic.twitter.com/sOpBCsJgaU
— Congress (@INCIndia) April 21, 2024
ಪ್ರಧಾನಿ ಮೋದಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಮೋದಿ ಭಾಷಣದ ಬಳಿಕ ಬಿಜೆಪಿ ಬೆಂಬಲಿಗರು ಮನಮೋಹನ್ ಸಿಂಗ್ ಅವರ ಭಾಷಣದ ವಿಡಿಯೋವನ್ನು ಅಪ್ಲೋಡ್ ಮಾಡಿ ಮೋದಿ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಮನಮೋಹನ್ ಸಿಂಗ್ ಹೇಳಿಕೆಯನ್ನೇ ತಿಳಿಸಿದ್ದಾರೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ದುಬೈ ಕಾಡಿದ ಮಳೆ; ಕೃತಕ ಮಳೆಯೋ, ಹವಾಮಾನ ಬದಲಾವಣೆ ಪರಿಣಾಮವೋ?
ಕಾಂಗ್ರೆಸ್ ಕಿಡಿ: ಪ್ರಧಾನಿ ಮೋದಿ ಇಂದು ಮತ್ತೆ ಸುಳ್ಳು ಹೇಳಿದ್ದಾರೆ. ಹಿಂದೂ-ಮುಸ್ಲಿಂ ಹೆಸರಿನಲ್ಲಿ ಸುಳ್ಳು ಹೇಳಿ ದೇಶವನ್ನು ಒಡೆಯುತ್ತಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲಿಯಾದರೂ ‘ಹಿಂದೂ-ಮುಸ್ಲಿಂ’ ಎಂದು ಬರೆದಿದ್ದರೆ ತೋರಿಸಲಿ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಸವಾಲು ಎಸೆದ್ದಾರೆ.