ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಜೊತೆ ಸಂವಾದ ನಡೆಸಲು ಬಿಜೆಪಿ ಯುವ ಮೋರ್ಚಾ ಘಟಕದ ರಾಷ್ಟ್ರೀಯ ಅಪಾಧ್ಯಕ್ಷ ಅಭಿನವ್ ಪ್ರಕಾಶ್ (Abhinav Prakash) ಹೆಸರನ್ನು ಸೂಚಿಸಿದೆ.
ಈ ಸಂಬಂಧ ಭಾರತೀಯ ಜನತಾ ಯುವ ಮೋರ್ಚಾ (BJYM) ಅಧ್ಯಕ್ಷ ತೇಜಸ್ವಿ ಸೂರ್ಯ ಅವರು, ಪ್ರೀತಿಯ ರಾಹುಲ್ ಗಾಂಧಿ ಅವರೇ ಬಿಜೆವೈಎಂ ನಿಮ್ಮ ಜೊತೆ ಚರ್ಚಿಸಲು ಅಭಿನಾ ಪ್ರಕಾಶ್ ಅವರನ್ನು ನೇಮಕ ಮಾಡಿದೆ. ಇವರು ರಾಯ್‌ಬರೇಲಿಯಲ್ಲಿ ಸುಮಾರು 30% ರಷ್ಟಿರುವ ಪಾಸಿ ಸಮುದಾಯದ ಯುವ ಮತ್ತು ವಿದ್ಯಾವಂತ ನಾಯಕರಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 400 ಸ್ಥಾನಗಳನ್ನು ಗೆಲ್ಲುವ ಗುರಿ ಕೇವಲ ಘೋಷಣೆಯಲ್ಲ, ವಾಸ್ತವದಲ್ಲೂ ಅದು ನಿಜವಾಗುತ್ತೆ: ಮೋದಿ
Advertisement
Dear Rahul Gandhi Ji,
BJYM has deputed Sri @Abhina_Prakash, our VP, to debate with you.
He is a young and educated leader from the Pasi (SC) community, who are around 30%, in Rae Baraeli.
It will be an enriching debate between a political scion and a common youngster who… pic.twitter.com/8FarSmqrQe
— Tejasvi Surya (ಮೋದಿಯ ಪರಿವಾರ) (@Tejasvi_Surya) May 13, 2024
Advertisement
ಇದು ರಾಜಕೀಯ ಕುಡಿ ಮತ್ತು ಕಠಿಣ ಹಾದಿಯಲ್ಲಿ ಬಂದ ಸಾಮಾನ್ಯ ಯುವಕನ ನಡುವಿನ ಉತ್ಕೃಷ್ಟ ಚರ್ಚೆಯಾಗಲಿದೆ ಎಂದು ತೇಜಸ್ವಿ ಸೂರ್ಯ (Tejasvi Surya) ಅಭಿಪ್ರಾಯಪಟ್ಟಿದ್ದಾರೆ.
Advertisement
ನಿವೃತ್ತ ನ್ಯಾಯಧೀಶರು ಮೋದಿ-ರಾಹುಲ್ ಗಾಂಧಿ ನಡುವೆ ಬಹಿರಂಗ ರಾಜಕೀಯ ಸಂವಾದಕ್ಕೆ ಬರುವಂತೆ ಪತ್ರದ ಮೂಲಕ ಆಹ್ವಾನ ನೀಡಿದ್ದರು. ಈ ಆಹ್ವಾನಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ನೀಡಿದ ಬೆನ್ನಲ್ಲೇ ತೇಜಸ್ವಿ ಸೂರ್ಯ ಅಭಿನವ ಪ್ರಕಾಶ್ ಅವರನ್ನು ಬಿಜೆಪಿ ಪ್ರತಿನಿಧಿಯಾಗಿ ಕಳುಹಿಸುತ್ತೇವೆ ಎಂದು ಹೇಳುವ ಮೂಲಕ ಠಕ್ಕರ್ ನೀಡಿದ್ದಾರೆ.
Advertisement
ಸಾಮಾಜಿಕ ಜಾಲತಾಣದಲ್ಲಿ(Social Media) ಮೋದಿ ರಾಹುಲ್ ಸಂವಾದ ವಿಚಾರದ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದೆ. ಪ್ರಧಾನಿ ಮೋದಿ ಆಹ್ವಾನ ಸ್ವೀಕರಿಸಿಲ್ಲ. ರಾಹುಲ್ ಕಂಡರೆ ಭಯ ಎಂದು ಕಾಂಗ್ರೆಸ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಇತ್ತ ಮೋದಿ ಅಭಿಮಾನಿಗಳು INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು? ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? ಪ್ರಧಾನಿ ಅಭ್ಯರ್ಥಿಯೇ ಘೋಷಣೆ ಆಗದೇ ಇರುವಾಗ ರಾಹುಲ್ ಜೊತೆ ಸಂವಾದಕ್ಕೆ ಹೋಗುವುದರಲ್ಲಿ ಅರ್ಥ ಏನಿದೆ ಎಂದು ಪ್ರಶ್ನಿಸುತ್ತಿದ್ದಾರೆ.