ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election) ಕೇವಲ ತಿಂಗಳು ಬಾಕಿ ಇರುವಾಗಲೇ ಫೆಬ್ರವರಿ ಕೊನೆಯಲ್ಲಿ ರಾಜ್ಯದ ಬಿಜೆಪಿ (BJP) ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.
14- 16 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಈ ಪಟ್ಟಿಯಲ್ಲಿ ಬಹುತೇಕ ಹಾಲಿಗಳಿಗೆ ಟಿಕೆಟ್ ಸಿಗಲಿದೆ. ಬಿಜೆಪಿ ಲೋಕಸಭೆ ತಯಾರಿ ಮಧ್ಯೆ ಮೊದಲ ಪಟ್ಟಿ ಪ್ರಕಟಿಸುವ ಬಗ್ಗೆ ಗೃಹ ಸಚಿವ ಅಮಿತ್ ಶಾ (Amit Shah) ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಕುಮಾರಣ್ಣ ರಾಜ್ಯಕ್ಕೆ ಬೇಕೆಂದು ನಮ್ಮ ಶಾಸಕರು, ಮುಖಂಡರ ಕೂಗಾಗಿದೆ: ನಿಖಿಲ್
Advertisement
Advertisement
ಗೆಲುವು ಸ್ಪಷ್ಟ ಇರುವ ಕ್ಷೇತ್ರಗಳ ಅಮಿತ್ ಶಾ ವರದಿ ಪಡೆದಿದ್ದು ಮೊದಲ ಪಟ್ಟಿಯಲ್ಲಿ ಬಹುತೇಕ ಗೆಲ್ಲುವ ಹಾಲಿ ಸಂಸದರಿಗೆ ಟಿಕೆಟ್ ಸಿಗಲಿದೆ. ಹೊಸ ಮುಖ, ಅಚ್ಚರಿ ಅಭ್ಯರ್ಥಿ ಹೆಸರು ಎರಡು ಮತ್ತು ಮೂರನೇ ಪಟ್ಟಿಯಲ್ಲಿ ಪ್ರಕಟವಾಗಲಿದೆ. ಇದನ್ನೂ ಓದಿ: ಸದನದಲ್ಲಿ ಜೈಶ್ರೀರಾಮ್, ಜೈಭೀಮ್ ಸದ್ದು- ಕೈ ಶಾಸಕನಿಗೆ ಕೇಸರಿ ಶಾಲು ಹಾಕಿದ್ರು ಮುನಿರತ್ನ
Advertisement
ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Vidhan Sabha Election) ಸಮಯದಲ್ಲಿ ಕೊನೆ ಗಳಿಗೆಯಲ್ಲಿ ಕೆಲ ಕ್ಷೇತ್ರಗಳಿಗೆ ಟಿಕೆಟ್ ಪ್ರಕಟಿಸಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಿತ್ತು. ಸೋಲಿನ ಬಳಿಕ ನಡೆದ ಆತ್ಮಾವಲೋಕನ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿತ್ತು. ಈ ಕಾರಣಕ್ಕೆ ಈ ಬಾರಿ ಬಹಳ ಬೇಗ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬೇಗ ಬಿಡುಗಡೆಯಾಗಲಿದೆ.