ಬೆಂಗಳೂರು: ಬೆಂಗಳೂರು ಗ್ರಾಮಾಂತರ (Bengaluru Rural) ವಿಚಾರದಲ್ಲಿ ರಾಜಕೀಯ ಜೋರಾಗಿದೆ. ಕ್ಷೇತ್ರದಲ್ಲಿ ಭಯದ ವಾತಾವರಣವಿದ್ದರೂ ಜನರಿಗೆ ಅದನ್ನು ಎದುರಿಸುವ ಶಕ್ತಿಯಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಹೇಳಿದ್ದಾರೆ.
ಆದಿಚುಂಚನಗಿರಿ ಶ್ರೀಗಳ ದರ್ಶನ ಮಾಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಭಯದ ವಾತಾವರಣವಿದೆ ಎಂದು ವರದಿಯಾಗುತ್ತಿದೆ. ಎಲ್ಲವನ್ನೂ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಮೊಬೈಲ್ ಡೇಟಾಗೆ 500 ರೂ. ಫ್ರೀ – ಅಖಿಲೇಶ್ ಯಾದವ್ ಘೋಷಣೆ
- Advertisement -
- Advertisement -
ಡಿಕೆ ಸುರೇಶ್ (DK Suresh) ಏನು ಮಾಡಿಲ್ಲ ಬರೀ ಹೆದರಿಸುವ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮಂತ್ರಿ ಅಶ್ವಥ್‌ನಾರಾಯಣ್ ಆರೋಪಿಸಿದರು. ಅಷ್ಟೇ ಅಲ್ಲದೇ ಈ ಬಾರಿ ನೂರಕ್ಕೆ ನೂರು ಡಾಕ್ಟರ್ ಮಂಜುನಾಥ್ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಕಾಂಗ್ರೆಸ್ ಬಿಟ್ಟುಕೊಟ್ಟಿದೆಯಾ?; ದ್ವೀಪ ಎಲ್ಲಿದೆ? – ಭಾರತಕ್ಕೆ ಯಾಕೆ ಮುಖ್ಯ?
- Advertisement -
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಜೆಡಿಎಸ್ ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಅಳಿಯನನ್ನು ಬಿಜೆಪಿ ಸಿಂಬಲ್‌ನಲ್ಲಿ ನಿಲ್ಲಿಸುವ ಸ್ಥಿತಿ ದೇವೇಗೌಡರಿಗೆ ಬರಬಾರದಿತ್ತು ಎಂದು ಲೇವಡಿ ಮಾಡಿದರು.
- Advertisement -
ಗಿಫ್ಟ್ ವೋಚರ್ ಆರೋಪಕ್ಕೂ ತಿರುಗೇಟು ನೀಡಿದ ಅವರು, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ ಗೆದ್ದೇ ಗೆಲ್ಲುತ್ತೇವೆ ನೋಡುತ್ತಿರಿ ಎಂದು ಸವಾಲು ಹಾಕಿದರು.
ಇದಕ್ಕೆ ಕುಮಾರಸ್ವಾಮಿ, ನಾವು ನಾಲ್ಕು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಡಿಕೆಶಿ ಬಾಯಿತಪ್ಪಿ 28 ಎಂದು ಹೇಳುವ ಬದಲು 4 ಅಂತ ಹೇಳಿರಬೇಕು ಎಂದು ವ್ಯಂಗ್ಯವಾಡಿದರು.