Lok Sabha Election – ಬೊಮ್ಮಾಯಿಗೆ ಅಮಿತ್‌ ಶಾ ಕರೆ

Public TV
1 Min Read
AMIT SHAH AND BOMMAI 1

ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ (Basavaraj Bommai) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕರೆ ಮಾಡಿ ಶುಭ ಕೋರಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದ (Haveri Lok Sabha Constituency) ಬಿಜೆಪಿ ಟಿಕೆಟ್‌ ಸಿಕ್ಕಿದ ಹಿನ್ನೆಲೆಯಲ್ಲಿ ಅಮಿತ್‌ ಶಾ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ನಿಮ್ಮ ಕ್ಷೇತ್ರದ ಗೆಲುವಿನ ಜೊತೆಗೆ ಇತರ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸ್ನೇಹಿತನಂತೆ ಸ್ವಾಗತಿಸಿದ್ದೀರಿ, ಆ ಋಣವನ್ನು ತೀರಿಸಲು ಅವಕಾಶ ಕೊಡಿ: ಯದುವೀರ್‌ ಒಡೆಯರ್‌

 

ಟಿಕೆಟ್‌ ಸಿಕ್ಕಿದ ಬೆನ್ನಲ್ಲೇ ಬಿಗ್‌ ಬುಲೆಟಿನ್‌ನಲ್ಲಿ ಮಾತನಾಡುತ್ತಾ ಬೊಮ್ಮಾಯಿ ಆನಂದಭಾಷ್ಪ ಸುರಿಸಿದರು. ನಮ್ಮ ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ಬೆಲೆ ಕೊಡಲು ಸಾಧ್ಯವಿಲ್ಲ. ವಿಧಾನಸಭೆ ಚುನಾವಣೆಯಲ್ಲೂ ನನ್ನ ಮೇಲೆ ಬಹಳ ಪ್ರೀತಿ ತೋರಿಸಿದ್ದರು.  ಟಿಕೆಟ್‌ ಸಿಗುತ್ತೆ ಅಂತ ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಹೈಕಮಾಂಡ್‌ ನಾಯಕರು ನನ್ನ ಮೇಲೆ ನಿರೀಕ್ಷೆ ಇಟ್ಟು ನೀವೇ ಸ್ಪರ್ಧಿಸಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದರು.

 

ಕಳೆದ ಬಾರಿ ಶಿವಕುಮಾರ ಉದಾಸಿ ಹಾವೇರಿ ಕ್ಷೇತ್ರದ ಟಿಕೆಟ್‌ ಸಿಕ್ಕಿತ್ತು. ಈ ಬಾರಿ ಚುನಾವಣೆಗೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಶಿಗ್ಗಾವಿ ಶಾಸಕರಾಗಿರುವ ಬೊಮ್ಮಾಯಿ ಅವರಿಗೆ ಹೈಕಮಾಂಡ್‌ ಲೋಕಸಭೆಯ ಟಿಕೆಟ್‌ ನೀಡಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ

2019ರ ಚುನಾವಣೆಯಲ್ಲಿ ಉದಾಸಿ 1,40,882 ಮತಗಳ ಅಂತರದಿಂದ ಜಯಗಳಿಸಿದ್ದರು. ಉದಾಸಿಗೆ 6,83,660 ಮತಗಳು ಬಿದ್ದರೆ ಡಿ.ಆರ್.ಪಾಟೀಲ್‌ ಅವರಿಗೆ 5,42,778 ಮತಗಳು ಬಿದ್ದಿದ್ದವು.

Share This Article