ನವದೆಹಲಿ: ಕಾಂಗ್ರೆಸ್ ಜೊತೆ ಉತ್ತರ ಪ್ರದೇಶದಲ್ಲಿ (Uttar Pradesh) ಮೈತ್ರಿಗೆ ಸಮಾಜವಾದಿ ಪಕ್ಷ (Samajwadi Party) ಷರತ್ತು ವಿಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಒಟ್ಟು 80 ಲೋಕಸಭಾ (Lok Sabha) ಕ್ಷೇತ್ರಗಳ ಪೈಕಿ 15ರಲ್ಲಿ ಮಾತ್ರ ಕಾಂಗ್ರೆಸ್‌ಗೆ (Congress) ಬಿಟ್ಟು ಕೊಡಲು ಮುಂದಾಗಿದೆ. ಇದನ್ನೂ ಓದಿ: ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ ನಿಧನ- ದೇಹದಾನಕ್ಕೆ ಮುಂದಾದ ಕುಟುಂಬ
ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ನೀಡಿರುವ ಆಫರನ್ನು ಕಾಂಗ್ರೆಸ್ ಒಪ್ಪಿಕೊಂಡರೆ ಮಾತ್ರ INDIA ಒಕ್ಕೂಟದಲ್ಲಿ ಸಮಾಜವಾದಿ ಪಕ್ಷ ಇರಲಿದೆ. ಈ ಆಫರ್ ಒಪ್ಪದೇ ಇದ್ದರೆ ಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ.
ಆರಂಭದಲ್ಲಿ ನಿಗದಿಯಾದ ಕಾರ್ಯಕ್ರಮದ ಪ್ರಕಾರ ರಾಹುಲ್ ಗಾಂಧಿ (Rahul Gandhi) ಅವರ ಉತ್ತರ ಪ್ರದೇಶ ಯಾತ್ರೆಯಲ್ಲಿ ಅಖಿಲೇಶ್ ಯಾದವ್ ಭಾಗಿಯಾಗಬೇಕಿತ್ತು. ಆದರೆ ಇನ್ನೂ ಸೀಟ್ ಹಂಚಿಕೆಯಾಗದ ಕಾರಣ ಅಖಿಲೇಶ್ ಯಾದವ್ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ವಸತಿ ಶಾಲೆಯ ಘೋಷವಾಕ್ಯ ಯಥಾಸ್ಥಿತಿ
2019ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 62, ಬಿಎಸ್‌ಪಿ 10, ಎಸ್‌ಪಿ 5, ಎಡಿಎಸ್ 2, ಕಾಂಗ್ರೆಸ್ 1 ಸ್ಥಾನವನ್ನು ಗೆದ್ದುಕೊಂಡಿತ್ತು. ಸೋನಿಯಾ ಗಾಂಧಿ ಅವರು ರಾಯ್‌ಬರೇಲಿ ಮತ್ತು ರಾಹುಲ್ ಗಾಂಧಿ ಸ್ಪರ್ಧಿಸಿದ್ದ ಅಮೇಠಿಯಲ್ಲಿ ಎಸ್‌ಪಿ ಯಾವುದೇ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಆದರೆ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದೆ.