ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ವಿಜಯ ಶಕೆ ಆರಂಭವಾಗಿದೆ. ಬಿಜೆಪಿಯ ಯುವ ಅಧ್ಯಕ್ಷ ವಿಜಯೇಂದ್ರ (BY Vijayendra) ಮುಂದೆ ಸಾಲು ಸಾಲು ಸವಾಲುಗಳಿವೆ. ಲೋಕಸಭೆ ಚುನಾವಣಾ (Lok Sabha Election) ಟಾಸ್ಕ್ ರೀಚ್ ಆಗಲು ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯ ತಂತ್ರಗಳನ್ನು ಹೆಣೆದಿದ್ದಾರೆ..
ವಿಜಯೇಂದ್ರ ಎದುರು ಮುಳ್ಳಿನ ಹಾದಿ ಇದ್ದು ಸದ್ಯ ಈಗ ಬಿಜೆಪಿ (BJP) ಮನೆ ಸಮಸ್ಯೆಗಳ ಗೂಡಾಗಿದೆ. ಪಕ್ಷದ ಹೀನಾಯ ಸೋಲು, ಬಣ ಸಂಘರ್ಷ, ಒಗ್ಗಟ್ಟಿಲ್ಲ, ನಾಯಕತ್ವದ ಕೊರತೆ, ಸೊರಗಿದ ಪಕ್ಷ ಸಂಘಟನೆ ಇಂಥಹ ಸಂದರ್ಭದಲ್ಲಿ ಪಕ್ಷಕ್ಕೆ ನೂತನ ಸಾರಥಿಯಾಗಿ ವಿಜಯೇಂದ್ರ ಎಂಟ್ರಿಯಾಗಿದ್ದಾರೆ.
Advertisement
Advertisement
ಸಾಲು ಸಾಲು ಸವಾಲು, ಅಡಿಗಡಿಗೆ ಇರುವ ಅಡ್ಡಿ-ಆತಂಕಗಳಿಂದಲೇ ವಿಜಯೇಂದ್ರಗೆ ಸ್ವಾಗತ ಕೋರಲಾಗಿದ್ದು ತಂದೆಯವರ ಬಲ, ಕಾರ್ಯಕರ್ತರ ವಿಶ್ವಾಸ, ಸ್ವ ಸಾಮರ್ಥ್ಯ, ಸಂಘಟನಾ ಚಾತುರ್ಯ ನಂಬಿ ಇಂದಿನಿಂದ ವಿಜಯೇಂದ್ರ ಅಖಾಡಕ್ಕೆ ಇಳಿಯಲಿದ್ದಾರೆ.
Advertisement
ಮುಂಬರುವ ಲೋಕಸಭೆ ಚುನಾವಣೆಯಲ್ಲಿ 25ಸ್ಥಾನ ಗೆಲ್ಲುವ ಟಾಸ್ಕ್ ವಿಜಯೇಂದ್ರ ಮುಂದಿದೆ. ಈ ನಿಟ್ಟಿನಲ್ಲಿ ಹಂತಹಂತವಾಗಿ ರಣತಂತ್ರಗಳನ್ನು ಹೆಣೆಯಲು ವಿಜಯೇಂದ್ರ ಪ್ಲಾನ್ ಮಾಡಿದ್ದಾರೆ.
Advertisement
ಸವಾಲುಗಳೇನು?
– ಹೈಕಮಾಂಡ್ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುವುದು. ವರಿಷ್ಠರು, ದೆಹಲಿ ಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು
– ಕಿರಿಯ, ಹಿರಿಯ ನಾಯಕರ ವಿಶ್ವಾಸ ಪಡೆದು ಒಟ್ಟಿಗೆ ಕರೆದೊಯ್ಯುವುದು. ಹಿರಿಯರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಹಕಾರ ಕೋರುವುದು
– ಪಕ್ಷದಲ್ಲಿ ಬಣ ಸಂಘರ್ಷಕ್ಕೆ ತೆರೆ ಎಳೆಯುವುದು. ಸೋಲಿನಿಂದ ಕಂಗೆಟ್ಟ ಪಕ್ಷಕ್ಕೆ ಚೇತರಿಕೆ, ಟಾನಿಕ್ ಕೊಡುವುದು
– ಕಾರ್ಯಕರ್ತರಲ್ಲಿ ನವ ಚೈತನ್ಯ, ರಣೋತ್ಸಾಹ ಹುಟ್ಟಿಸುವುದು. ಪಕ್ಷ ಸಂಘಟನೆಗೆ ಚುರುಕು ಕೊಡುವುದು. ಜಿಲ್ಲಾ ಪ್ರವಾಸ, ಸಮರ್ಥ ಪದಾಧಿಕಾರಿಗಳ ನೇಮಕ
ಟಾಸ್ಕ್ ರೀಚ್ ಆಗಲು ತಂತ್ರಗಳೇನು?
– ಸಮರ್ಥ ಪಕ್ಷ ಸಂಘಟನೆ ಮೂಲಕ ಲೋಕಸಮರಕ್ಕೆ ತಯಾರಿ. ಸಮುದಾಯವಾರು 2ನೇ ಹಂತದ ಮುಖಂಡರೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳುವುದು. ಆಪರೇಷನ್ ಹಸ್ತಕ್ಕೆ ಬ್ರೇಕ್ ಹಾಕುವುದು.
– ಪಕ್ಷ ತೊರೆದು ಹೋಗಲು ಮುಂದಾಗಿರುವವರನ್ನು ಮನವೊಲಿಸುವುದು. ಪಕ್ಷ ತೊರೆದು ಹೋದವರನ್ನೂ ವಾಪಸ್ ಕರೆತರುವುದು.
– ದೋಸ್ತಿಯಾಗಿರುವ ಜೆಡಿಎಸ್ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು.