– ಅಲ್ಪಸಂಖ್ಯಾತರನ್ನ ಓಲೈಸಲು ಜಮೀರ್ ಅಹ್ಮದ್ ಮೊರೆಹೋದ ಗೌಡ್ರು
ತುಮಕೂರು: ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ನನ್ನ ಬದಲಾಗಿ ಆಹಾರ ಹಾಗೂ ನಾಗರಿಗ ಪೂರೈಕೆ ಸಚಿವ ಜಮೀರ್ ಅಹ್ಮದ್ ಮಾತಾಡುತ್ತಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಅಲ್ಪಸಂಖ್ಯಾತರನ್ನ ಓಲೈಸಲು ಸಚಿವರ ಮೊರೆಹೋದರು.
ನಗರದ ಗ್ರಂಥಾಲಯದ ಆವರಣದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ, ಶಿವಸೇನೆ, ಅಕಾಲಿದಳ ಬಿಟ್ಟರೆ ಎಲ್ಲರೂ ಮಹಾಘಟಬಂಧನ್ ಸೇರಿದ್ದಾರೆ. ಜೆಡಿಎಸ್‍ಗೆ ಕಡಿಮೆ ಶಕ್ತಿ ಹಾಗೂ ಕಾಂಗ್ರೆಸ್‍ಗೆ ಹೆಚ್ಚು ಶಕ್ತಿ ಇರಬಹದು. ಎರಡೂ ಶಕ್ತಿಯನ್ನು ಒಟ್ಟುಗೂಡಿಸಿ ಬಿಜೆಪಿಯನ್ನು ಕುಗ್ಗಿಸಬಹುದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡಂಕಿ ತಲುಪಲು ಬಿಜೆಪಿಗೆ ಅವಕಾಶ ಕೊಡಬಾರದು. ಈ ಸಾಧನೆಗೆ ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು.
Advertisement
Advertisement
ಕಡಿಮೆ ಅವಧಿಯಲ್ಲಿ ಭಾಷಣ ಮುಗಿಸಿದ ಎಚ್.ಡಿ.ದೇವೇಗೌಡ ಅವರು, ನನ್ನ ಬದಲಾಗಿ ಜಮೀರ್ ಅಹ್ಮದ್ ಮಾತನಾಡುತ್ತಾರೆ ಎಂದು ತಿಳಿಸಿದರು. ಈ ಮೂಲಕ ಮಾಜಿ ಶಿಷ್ಯ ಜಮೀರ್ ಅಹ್ಮದ್ ಅವರ ಮೂಲಕ ಅಲ್ಪಸಂಖ್ಯಾತರನ್ನ ಓಲೈಸಲು ಯತ್ನಿಸಿದರು.
Advertisement
ಇದಕ್ಕೂ ಮುನ್ನ ಎಚ್.ಡಿ.ದೇವೇಗೌಡ ಅವರು ಭಾಷಣ ಆರಂಭಿಸಿದ ಐದು ನಿಮಿಷದಲ್ಲೇ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದ ಧ್ವನಿ ಧ್ವನಿವರ್ಧಕದ ಮೂಲಕ ಕೇಳಿಸಿತು. ಇದರಿಂದಾಗಿ ಸ್ವಲ್ಪ ಸಮಯ ಭಾಷಣವನ್ನು ನಿಲ್ಲಿಸಿದರು. ಪಾರ್ಥನೆ ಮುಗಿದ ಬಳಿಕ ಪುನಃ ಭಾಷಣ ಆರಂಭಿಸಿ, ಕಡಿಮೆ ಸಮಯದಲ್ಲಿ ಮಾತು ನಿಲ್ಲಿಸಿ ಸಚಿವ ಜಮೀರ್ ಅಹ್ಮದ್ ಅವರಿಗೆ ಅವಕಾಶ ನೀಡಿದರು.