ವಿಜಯಪುರ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಲು-ಗೆಲುವಿಗಿಂತ ಹೆಚ್ಚಾಗಿ ಟಿಕೆಟ್ ಫೈಟ್ ಜೋರಾಗಿದೆ. ನಗರದಲ್ಲಿ ಒಂದೇ ಕುಟುಂಬದ ಅತ್ತಿಗೆ-ಮೈದುನನ ನಡುವೆಯೇ ಟಿಕೆಟ್‍ಗಾಗಿ ಯುದ್ಧ ಶುರುವಾಗಿದೆ.
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಎಲ್ಲಾ ಪಕ್ಷಗಳಲ್ಲಿ ಟಿಕೆಟ್‍ಗಾಗಿ ಲಾಬಿ ಜೋರಾಗಿದೆ. ಅದೇ ರೀತಿ ಜೆಡಿಎಸ್ ಪಾಲಾಗಿರುವ ವಿಜಯಪುರದಲ್ಲಿ ಟಿಕೆಟ್‍ಗಾಗಿ ಅತ್ತಿಗೆ-ಮೈದುನನ ನಡುವೆ ಕಾದಾಟ ಶುರುವಾಗಿದೆ. ನಾಗಠಾಣಾ ಶಾಸಕ ದೇವಾನಂದ್ ಚವ್ಹಾಣ್‍ರ ಪತ್ನಿ ಸುನಿತಾ ಚವ್ಹಾಣ್ ಮತ್ತು ತಮ್ಮ ರವಿಕುಮಾರ್ ಜೆಡಿಎಸ್ ಟಿಕೆಟ್‍ಗಾಗಿ ಪಟ್ಟು ಹಿಡಿದಿದ್ದಾರೆ.
Advertisement
Advertisement
ಈ ಹಿಂದೆ ದೇವಾನಂದ್ ಚವ್ಹಾಣ್ ಶಾಸಕರಾಗುವಲ್ಲಿ ತಮ್ಮ ರವಿಕುಮಾರ್ ಪಾತ್ರ ಮಹತ್ವದ್ದಾಗಿತ್ತು. ಹೀಗಾಗಿ ನನಗೆ ಟಿಕೆಟ್ ಕೊಡಿ ಎಂದು ರವಿಕುಮಾರ್ ಕೇಳುತ್ತಿದ್ದಾರೆ. ಆದರೆ ವಿಜಯಪುರದಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡದೆ ಅದೆಷ್ಟೋ ವರ್ಷಗಳು ಉರುಳಿವೆ. ಹೀಗಾಗಿ ಈ ಬಾರಿಯಾದರೂ ನನಗೆ ಟಿಕೆಟ್ ಕೊಡಿ ಎಂದು ಸುನಿತಾ ಪಟ್ಟು ಹಿಡಿದಿದ್ದಾರೆ.
Advertisement
ಒಟ್ಟಿನಲ್ಲಿ ಅತ್ತಿಗೆ- ಮೈದುನ ನಡುವಿನ ಟಿಕೆಟ್ ಯುದ್ಧದಿಂದ ಜೆಡಿಎಸ್ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ. ಟಿಕೆಟ್ ಕೊಡೋದು ಬಿಡೋದು ಜೆಡಿಎಸ್ ವರಿಷ್ಠ ದೇವೇಗೌಡ್ರ ಕೈಯಲ್ಲಿದ್ದು, ಅವರು ಏನ್ ಮಾಡ್ತಾರೆ..? ಹೇಗೆ ಸಮಸ್ಯೆ ಬಗೆಹರಿಸ್ತಾರೆ ಎಂಬುದನ್ನು ಕಾದು ನೋಡಬೇಕಿದೆ.