ಬೆಂಗಳೂರು: ರಾಜ್ಯದ ಹಲವೆಡೆ ಮಧ್ಯಾಹ್ನದ ವೇಳೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯುವ ಸಾಧ್ಯತೆಯಿದೆ.
ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಕೋಲಾರದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾರೀ ಮಳೆಯಾದರೆ ಮತದಾನ ಪ್ರಕ್ರಿಯೆಗೆ ಸಮಸ್ಯೆಯಾಗಲಿದೆ. ಹೀಗಾಗಿ ಅದಷ್ಟು ಬೇಗ ಮತದಾನ ಮಾಡಿದರೆ ಉತ್ತಮ.
Advertisement
Advertisement
ಗುರುವಾರದಿಂದ ಶುಕ್ರವಾರದವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿನ್ನೆ ಮುನ್ಸೂಚನೆ ನೀಡಿತ್ತು. ನಿನ್ನೆ ಬೆಂಗಳೂರಿನಲ್ಲಿ ಸಂಜೆ ಸುರಿದ ಭಾರೀ ಮಳೆಯಿಂದ ಹಲವು ಪ್ರದೇಶಗಳಿಗೆ ನೀರು ನುಗ್ಗಿತ್ತು. ರಸ್ತೆಯಲ್ಲೇ ನೀರು ನಿಂತ ಪರಿಣಾಮ ಸಂಚಾರ ಸಮಸ್ಯೆಯಾಗಿತ್ತು.
Advertisement
ಬೆಳಗ್ಗೆ 11 ಗಂಟೆಯ ವೇಳೆಗೆ ಕರ್ನಾಟಕದಲ್ಲಿ ಒಟ್ಟು 19.27% ಮತದಾನ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಪ್ರಮಾಣದ 32.10% ಮತದಾನ ನಡೆದಿದ್ದರೆ ಬೆಂಗಳೂರು ಗ್ರಾಮೀಣದಲ್ಲಿ ಅತಿ ಕಡಿಮೆ 13.52% ಮತದಾನ ನಡೆದಿದೆ.
Advertisement
ಎಲ್ಲಿ ಎಷ್ಟು ಮತದಾನವಾಗಿದೆ?
ಉಡುಪಿ ಚಿಕ್ಕಮಗಳೂರು – 28.96%
ಹಾಸನ – 23.31%
ದಕ್ಷಿಣ ಕನ್ನಡ – 32.10%
ಚಿತ್ರದುರ್ಗ – 16.75%
ತುಮಕೂರು – 22.52%
ಮಂಡ್ಯ – 17.00%
ಮೈಸೂರು – 19.97%
ಚಾಮರಾಜನಗರ – 19.21%
ಬೆಂಗಳೂರು ಗ್ರಾಮಾಂತರ – 13.52%
ಬೆಂಗಳೂರು ಉತ್ತರ – 13.62%
ಬೆಂಗಳೂರು ಕೇಂದ್ರ – 15.47%
ಬೆಂಗಳೂರು ದಕ್ಷಿಣ – 18.55%
ಚಿಕ್ಕಬಳ್ಳಾಪುರ – 17.57%
ಕೋಲಾರ – 20.22%