– ಪ್ರಚಾರದ ರಿಲಾಕ್ಸ್ ಮೂಡ್‍ನಲ್ಲಿ ನಾಟಕದ ಡೈಲಾಗ್ ಹೇಳಿದ ಕಾಂಗ್ರೆಸ್ ಮುಖಂಡರು
ಬೆಂಗಳೂರು: ಜಾತಿ ಇರುವುದು ಮದುವೆ, ಸಂಪ್ರದಾಯ ಪಾಲನೆಗೆ ಅಷ್ಟೇ. ರಾಜಕಾರಣದಲ್ಲಿ ಬೆರಳಣಿಕೆಯಷ್ಟು ಮಂದಿ ಜಾತಿ ರಾಜಕೀಯ ಮಾಡುತ್ತಾರೆ ಎಂದು ಸಚಿವ ಎಂಟಿಬಿ ನಾಗರಾಜ್, ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ವೀರಪ್ಪ ಮೊಯ್ಲಿ ಪರ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಮಂಡ್ಯದಲ್ಲಿ ಜಾತಿಯ ರಾಜಕೀಯ ಮಾಡಿದ್ದಕ್ಕೆ ಅಸಮಾಧಾನ ಹೊರ ಹಾಕಿದರು. ಈ ಮೂಲಕ ಪರೋಕ್ಷವಾಗಿ ಸುಮಲತಾ ಅಂಬರೀಶ್ ಪರ ಬ್ಯಾಟಿಂಗ್ ಬೀಸಿದ್ದಾರೆ.
Advertisement
Advertisement
ಸಿಎಂ ಕುಮಾರಸ್ವಾಮಿ ಅವರದ್ದು ಗೌಡರ ಜಾತಿ ಅಲ್ವಾ? ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಬೇಕಲ್ವಾ? ಹೀಗಾಗಿ ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿರಲು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷವು ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು. ಬಚ್ಚೇಗೌಡ ಒಬ್ಬರೇ ಗೌಡರಲ್ಲ, ಕುಮಾರಸ್ವಾಮಿ ಅವರು ಕೂಡ ಗೌಡರೇ. ಚುನಾವಣೆಯಲ್ಲಿ ಜಾತಿ ಕೆಲಸ ಮಾಡಲ್ಲ. ಯಾರದರೂ ಶಾಸಕರು ಅಥವಾ ಸಂಸದರು ಜಾತಿ ಆಧಾರವಾಗಿ ಗೆದ್ದಿದ್ದಾರಾ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.
Advertisement
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರದ ವೇಳೆಯ ರಿಲಾಕ್ಸ್ ಮೂಡಿನಲ್ಲಿ ವಸತಿ ಸಚಿವ ಎಂ.ಟಿ.ಬಿ ನಾಗರಾಜ್, ಅಭ್ಯರ್ಥಿ ವೀರಪ್ಪ ಮೊಯ್ಲಿ ಹಾಗೂ ನೆಲಮಂಗಲ ಸ್ಥಳೀಯ ಶಾಸಕ ಡಾ.ಕೆ.ಶ್ರೀನಿವಾಸ್ ಮೂರ್ತಿ ನಾಟಕದ ಡೈಲಾಗ್ ಹೇಳಿ ರಂಜಿಸಿದರು.
Advertisement
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅಗಳಕುಪ್ಪೆಯಲ್ಲಿ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಕುರುಕ್ಷೇತ್ರ ನಾಟಕದ ಕರ್ಣನ ಕಂದ ಪದ್ಯ ಹಾಡಿ ರಂಜಿಸಿದ್ದಾರೆ. ದುರ್ಯೋಧನನ ಪಾತ್ರದ ಜೊತೆಗೆ ಕರ್ಣ ಹೇಳುವ ಹಾಡನ್ನು ನೆಲಮಂಗಲ ಶಾಸಕ ಹಾಡಿದರು. ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ಒತ್ತಾಯದ ಮೇರೆಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಸಿಲಿನ ನಡುವೆ ಗಾನಬಜಾನ ಮಾಡಿದ್ದಾರೆ.
ಈ ವೇಳೆ ಕಾರ್ಯಕರ್ತರು ಹಾಗೂ ಹಲವಾರು ನಾಯಕರು ಹಾಡಗಳನ್ನು ಹಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಶಾಸಕರ ಧ್ವನಿಗೆ ಧ್ವನಿಗೂಢಿಸಿದ ವೀರಪ್ಪ ಮೊಯ್ಲಿ ನಮ್ಮ ಭಾಗದಲ್ಲಿ ಯಕ್ಷಗಾನ ಬಲು ಜೋರಾಗಿರುತ್ತದೆ ಎಂದು ಮಾತಿನ ಚಟಾಕಿ ಹಾರಿಸಿದರು.