ಕಾರವಾರ: ಸಂವಿಧಾನ (Constitution) ತಿದ್ದುಪಡಿ ಹೇಳಿಕೆ ವಿಚಾರ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದ್ದಂತೆ ಸಂಸದ ಅನಂತ ಕುಮಾರ ಹೆಗಡೆ (Ananth Kumar Hegde) ಅವರು ಆನೆ ನಡೆದಿದ್ದೇ ಹಾದಿ ಎಂದು ಹೇಳಿ ಮಾಧ್ಯಮಗಳ (Media) ಮೇಲೆ ಹರಿಹಾಯ್ದಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಿಲ್ಲೂರಿನಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಹೆಗಡೆ , ಆನೆ ಹೋಗಿದ್ದೆ ದಾರಿ ಎಂಬಂತೆ ನಾವು ಇರಬೇಕು. ಮಾಧ್ಯಮಗಳು ಏನೂ ಬೇಕಾದರೂ ಬರೆದುಕೊಳ್ಳಲಿ, ಏನೂ ಬೇಕಾದರೂ ವದರಾಡಲಿ ಎಂದು ಹೇಳಿದರು. ಇದನ್ನೂ ಓದಿ: ವೃದ್ಧಮಾವನಿಗೆ ಮನಸೋ ಇಚ್ಛೆ ಥಳಿಸಿದ KEB ಅಧಿಕಾರಿ ಸೊಸೆ
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ (Social Media) ಬೇಕಾದ್ದ ಚರ್ಚೆಯಾಗಲಿ. ಕಾರ್ಯಕರ್ತರಾದ ನೀವು ಯಾವುದೋ ಸಾಮಾನ್ಯ ಪಕ್ಷದ ಕಾಯರ್ತರಲ್ಲ. ದೇಶ ಆಡಳಿತ ಮಾಡುತ್ತಿರುವ ಪಕ್ಷದ ಕಾರ್ಯಕರ್ತರು. ಬೇರೆ ಯಾರೋ ಪತ್ರಿಕೆಯಲ್ಲಿ ವಾಟ್ಸಪ್‌ನಲ್ಲಿ ಏನೇನೋ ಹೇಳಿದರು ಎಂದು ವಿಚಲಿತರಾಗಬಾರದು ಎಂದು ಅನಂತ ಕುಮಾರ ಹೆಗಡೆ ಕಿವಿಮಾತು ಹೇಳಿದರು.
Advertisement
ಆನೆ ನಡೆದಿದ್ದೇ ದಾರಿ ಎಂಬಂತೆ ನಾವು ನಡಿಯಬೇಕು ಕಣ್ರೀ. ಆನೆ ನಡೆಯುತ್ತಾ ಇದ್ದರೆ ನಾಯಿಗಳು ಬೊಗಳುತ್ತಿರುತ್ತವೆ. ಆನೆ ನಡೆಯುತ್ತಾ ಇದ್ದರೆ ನಾಯಿ ಕಡೆ ಗಮನ ಕೊಡುತ್ತಾ? ನಾವು ಎಷ್ಟೇ ಬೊಗಳಿದರೂ ಆನೆಯನ್ನು ಏನು ಮಾಡಲು ಆಗುವುದಿಲ್ಲ ಅಂತ ನಾಯಿಗಳಿಗೂ ಗೊತ್ತಿದೆ. ನಾಯಿಗಳು ಬೊಗಳದೇ ಇದ್ದರೆ ಆನೆ ಗಾಂಭೀರ್ಯಕ್ಕೆ ಬೆಲೆ ಇರಲ್ಲ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
Advertisement