ಕೋಲಾರ: ವಿಚಾರಣೆಗೆಂದು ಕರೆತಂದು ಪೊಲೀಸರ ಸುಪರ್ದಿಯಲ್ಲಿದ್ದ ಕಳವು ಪ್ರಕರಣದ ಶಂಕಿತ ಅರೋಪಿ ಲಾಕಪ್ ಡೆತ್ (Lockup Death) ಆದ ಹಿನ್ನೆಲೆ ಪಿಎಸ್‌ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕೋಲಾರ (Kolara) ಜಿಲ್ಲೆಯ ಮುಳಬಾಗಿಲು ನಂಗಲಿ ಪೊಲೀಸ್ ಠಾಣೆ ಪಿಎಸ್‌ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳ ವಿರುದ್ದ ಎಫ್‌ಐಅರ್ ದಾಖಲಾಗಿದೆ. ಕಳವು ಪ್ರಕರಣದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಮುನಿರಾಜು ಹಾಗೂ ಬಾಲಾಜಿ ಎಂಬವವರನ್ನ ವಿಚಾರಣೆಗೆಂದು ಕರೆ ತಂದಿದ್ದ ವೇಳೆ ಮುನಿರಾಜು ಮೃತಪಟ್ಟಿದ್ದ. ಇದನ್ನೂ ಓದಿ: ಬೆಂಗ್ಳೂರಿನಲ್ಲೂ ಆತಂಕ ಹುಟ್ಟಿಸಿದ ಚೀನಾದ ಹೊಸ ವೈರಸ್ – BBMP ಫುಲ್ ಅಲರ್ಟ್!
Advertisement
Advertisement
ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಅರೋಪಿಗಳನ್ನ ವಿಚಾರಣೆ ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆಂದು ಮುಳಬಾಗಿಲು ಡಿವೈಎಪ್‌ಪಿ ನಂದ ಕುಮಾರ್ ವರದಿ ಆಧರಿಸಿ, ಪಿಎಸ್‌ಐ ಪ್ರದೀಪ್ ಸಿಂಗ್, ಪೊಲೀಸ್ ಪೇದೆಗಳಾದ ಮಂಜುನಾಥ್, ಮಹಾಂತೇಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement
Advertisement
ಸೆಪ್ಟೆಂಬರ್ 17 ರಂದು ಮುನಿರಾಜು ಹಾಗೂ ಬಾಲಾಜಿ ಎಂಬ ಇಬ್ಬರನ್ನು ಕರೆತಂದಿದ್ದರು. ಅಕ್ಟೋಬರ್ 1 ರಂದು ಮುನಿರಾಜು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ, 15 ದಿನಗಳ ಕಾಲ ಪೊಲೀಸ್ ಠಾಣೆ, ಬೇರೆ ಬೇರೆ ಸ್ಥಳಗಳಲ್ಲಿರಿಸಿ ವಿಚಾರಣೆ ವೇಳೆ ಮುನಿರಾಜು ಮೃತಪಟ್ಟಿದ್ದ. ಪರಿಣಾಮ ಪಿಎಸ್‌ಐ ಸೇರಿ ಇಬ್ಬರು ಪೊಲೀಸ್ ಪೇದೆಗಳ ವಿರುದ್ಧ ಪ್ರಕರಣ ದಾಖಲಾದ ಕಾರಣ ಇವರನ್ನು ಕೋಲಾರ ಎಸ್ಪಿ ನಾರಾಯಣ ಅಮಾನತು ಮಾಡಿದ್ದಾರೆ. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ