– ವಿಶೇಷ ಬಸ್ ಮೂಲಕ ಊರಿನತ್ತ ಕಾರ್ಮಿಕರು
ಯಾದಗಿರಿ: ಕೊರೊನಾ ಗ್ರೀನ್ ಝೋನ್‍ನಲ್ಲಿರುವ ಯಾದಗಿರಿಗೆ ಲಾಕ್‍ಡೌನ್‍ನಿಂದ ಮತ್ತಷ್ಟು ಸಡಿಲಿಕೆ ಲಭಿಸಿದ್ದು, ನಗರದಲ್ಲಿ ವ್ಯಾಪಾರ-ವಹಿವಾಟು ಜೋರಾಗಿದೆ.
ಜಿಲ್ಲೆ ಗ್ರೀನ್ ಝೋನ್‍ನಲ್ಲಿರುವ ಕಾರಣ ಲಾಕ್‍ಡೌನ್ ಸಂಪೂರ್ಣ ಸಡಲಿಕೆ ಎಂಬಂತೆ ಯಾದಗಿರಿ ನಗರದಲ್ಲಿ ಬಾಸವಾಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆ ಅಂಗಡಿಗಳ ಜೊತೆಗೆ ಮೊಬೈಲ್ ಶಾಪ್, ಎಲೆಕ್ಟ್ರಿಕ್ ಮತ್ತು ಬುಕ್ ಸ್ಟಾಲ್, ಸಿಮೆಂಟ್, ಕಾರ್ ರಿಪೇರಿ ಗ್ಯಾರೇಜ್ ಸಹ ತೆರೆಯಲಾಗಿದೆ. ನಗರದಲ್ಲಿ ಬೃಹತ್ ವಾಹನಗಳ ಸಂಚಾರ ಸಹ ಆರಂಭವಾಗಿದೆ. ಕಲಬುರಗಿ ಜಿಲ್ಲೆಯ ವಾಡಿಯಲ್ಲಿರುವ ಸಿಮೆಂಟ್ ತಯಾರಿಕಾ ಘಟಕಗಳಿಗೆ ಬೇಕಾಗುವ ಕಚ್ಚಾವಸ್ತುಗಳು ಸಾಗಾಟ ಮತ್ತೆ ಆರಂಭವಾಗಿದೆ.
Advertisement
Advertisement
ಲಾಕ್‍ಡೌನ್ ಸಡಿಲಿಕೆ ಆಗಿರುವ ಹಿನ್ನೆಲೆಯಲ್ಲಿ ಊರಿಗೆ ತೆರಳಲಾಗದೆ ಆಶ್ರಯ ಕೇಂದ್ರಗಳಲ್ಲಿದ್ದ ದೂರದೂರಿನ ಕಾರ್ಮಿಕರು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಜಿಲ್ಲಾಡಳಿತದ ಕೂಲಿ ಕಾರ್ಮಿಕರು ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಕೆಎಸ್ಆರ್‌ಟಿಸಿ ಸಂಸ್ಥೆಯ ಸಹಾಯದಿಂದ ವಿಶೇಷ ಬಸ್ ಮೂಲಕ ಕಾರ್ಮಿಕರನ್ನು ಅವರ ಊರಿಗೆ ಕರೆದುಕೊಂಡು ಹೋಗಲಾಗುತ್ತಿದೆ.
Advertisement
ರಾಜ್ಯದ ವಿವಿಧ ಜಿಲ್ಲೆಯ ಕಾರ್ಮಿಕರು ಸೇರಿದಂತೆ ಅಂತರ್ ರಾಜ್ಯದ ಒಟ್ಟು 500 ಕಾರ್ಮಿಕರಿಗೆ ಜಿಲ್ಲಾಡಳಿತ ಜಿಲ್ಲೆಯ ಯಾದಗಿರಿ, ಸುರಪುರ, ಶಹಪುರದ ಸರ್ಕಾರದ ವಿವಿಧ ಹಾಸ್ಟೆಲ್‍ಗಳಲ್ಲಿ, ತಾತ್ಕಾಲಿಕ ವಸತಿ ಮತ್ತು ಊಟಸ ವ್ಯವಸ್ಥೆ ಕಲ್ಪಿಸಿತ್ತು. ಲಾಕ್ ಡೌನ್ ಘೋಷಣೆ ಮಾಡಿದ ದಿನದಿಂದಲ್ಲೂ ಕಾರ್ಮಿಕರು ಇಲ್ಲೇ ಕಾಲ ಕಳೆಯುತ್ತಿದ್ದರು. ಸರ್ಕಾರ ಲಾಕ್‍ಡೌನ್ ಸಡಿಲ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅವರ ಊರಿಗಳಿಗೆ ತೆರಳು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ.