ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಏರಿಕೆಯಾಗುತ್ತಿದ್ದರೂ, ಲಾಕ್‍ಡೌನ್ ವಿನಾಯ್ತಿಯಂತಹ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದು ಯಾಕೆ ಅದರಿಂದಿನ ಕಾರಣ ಏನು ಎನ್ನುವುದಕ್ಕೆ ಉತ್ತರವೊಂದು ಸಿಕ್ಕಿದೆ.
ಐಸಿಎಂಆರ್ ನೀಡಿದ ಅಭಯದ ಹಿನ್ನೆಲೆ ಕೇಂದ್ರ ಸರ್ಕಾರ ದೇಶದಲ್ಲಿ ಸೋಂಕಿತರ ಸಂಖ್ಯೆ ನಲವತ್ತು ಸಾವಿರ ಗಡಿ ದಾಟಿದರು ಲಾಕ್‍ಡೌನ್ ವಿನಾಯತಿ ನೀಡಲು ಒಪ್ಪಿಕೊಂಡಿದೆ ಎಂದು ಮೂಲಗಳು ಹೇಳಿವೆ.
ನಲವತ್ತು ದಿನಗಳ ಸುದೀರ್ಘ ಲಾಕ್‍ಡೌನ್ ಬಳಿಕ ದೇಶದಲ್ಲಿ ಸೋಂಕು ಹರಡುವಿಕೆ ಪ್ರಮಾಣ ಗಣನೀಯ ಇಳಿಕೆಯಾಗಿದೆ. ಐಸಿಎಂಆರ್ ಹತ್ತು ಲಕ್ಷ ಮಂದಿಯನ್ನು ಈವರೆಗೂ ಪರಿಕ್ಷೀಸಿದ್ದು ಈ ಪೈಕಿ ನಲವತ್ತು ಸಾವಿರ ಮಂದಿರಕ್ಕೆ ಮಂದಿಯಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಭಾರತದಲ್ಲಿ ಲಾಕ್‍ಡೌನ್ ಗೆ ವಿನಾಯತಿ ನೀಡಬಹುದು ಎಂದು ಐಸಿಎಂಆರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತ್ತು ಎನ್ನಲಾಗಿದೆ.
ಲಾಕ್‍ಡೌನ್ ವಿನಾಯತಿ ಸಂಬಂಧ ವರದಿ ನೀಡಿದ್ದ ಐಸಿಎಂಆರ್ ಇತರೆ ದೇಶಗಳ ಸೋಂಕು ಹರಡುವಿಕೆ ವರದಿ ನೀಡಿತ್ತು. ಹತ್ತು ಲಕ್ಷ ಟೆಸ್ಟ್ ನಡೆಸಿದಾಗ ವಿದೇಶಗಳಲ್ಲಿ ಪತ್ತೆಯಾದ ಸೋಂಕಿನ ಪ್ರಮಾಣ ಎಷ್ಟು ಎನ್ನುವ ಮಾಹಿತಿ ನೀಡಿತ್ತು. ವರದಿಯಗಳ ಪ್ರಕಾರ ಅಮೆರಿಕಾದಲ್ಲಿ ಹತ್ತು ಲಕ್ಷ ಟೆಸ್ಟ್ ನಡೆಸಿದಾಗ 1,64,620 ಮಂದಿಯಲ್ಲಿ ಸೋಂಕು, ಜರ್ಮನಿಯಲ್ಲಿ 73,522, ಸ್ಪೇನ್ ನಲ್ಲಿ 2,00,194, ಟರ್ಕಿಯಲ್ಲಿ 1,17,589, ಇಟಲಿಯಲ್ಲಿ 1,52, 271 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.
ಅತಿ ಹೆಚ್ಚು ಸೋಂಕು ಕಂಡ ದೇಶಗಳಿಗೆ ಹೋಲಿಸಿ ನೋಡಿದಾಗ ಭಾರತ ಬೆಸ್ಟ್ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಈ ನಡುವೆ ದೇಶದಲ್ಲಿ ಪ್ರತಿ ಹನ್ನೆರಡು ದಿನಕೊಮ್ಮೆ ಸೋಂಕು ದುಪ್ಪಟ್ಟು ಗುಣಮುಖವಾಗುವವರ ಪ್ರಮಾಣ ಶೇ.25.37, ಸಾವಿನ ಪ್ರಮಾಣ ಶೇ.3.2 ಇಳಿಕೆಯಾಗಿದೆ ಇದೇ ಕಾರಣಕ್ಕೆ ಕಂಟೈನ್ ಮೆಂಟ್, ರೆಡ್‍ಝೋನ್ ನಲ್ಲಿ ಲಾಕ್‍ಡೌನ್, ಗ್ರೀನ್ ಝೋನ್‍ನಲ್ಲಿ ಸಡಿಲಿಕೆಗೆ ಐಸಿಎಂಆರ್ ಸಮ್ಮತಿ ಸೂಚಿಸಿತ್ತು.