ಕ್ರೇಜಿ ಕ್ವೀನ್‍ಗೆ ಡಿ ಬಾಸ್ ವಿಶ್- ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ರಕ್ಷಿತಾ

Public TV
3 Min Read
rakpre

ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ರಕ್ಷಿತಾ 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಹೋಮ್ ಕ್ವಾರೆಂಟೈನ್ ಹಿನ್ನೆಲೆ ಕುಟುಂಬದೊಂದಿಗೇ ಆಚರಿಸಿಕೊಂಡಿದ್ದಾರೆ. ಆದರೆ ಇದರ ನಡುವೆಯೂ ರಕ್ಷಿತಾ ಪತಿ, ನಿರ್ದೇಶಕ ಪ್ರೇಮ್ ಹಾಗೂ ಪುತ್ರ ಸೂರ್ಯ ವಿಭಿನ್ನ ಸರ್‍ಪ್ರೈಸ್ ನೀಡುವ ಮೂಲಕ ಭಾವನಾತ್ಮಕವಾಗಿ ಆಚರಿಸಿದ್ದಾರೆ.

ಹುಟ್ಟುಹಬ್ಬದ ಸಂಭ್ರಮವನ್ನು ರಕ್ಷಿತಾ ಪ್ರೇಮ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ತಮ್ಮ ಕುಟುಂಬದವರನ್ನು ನೆನೆಸಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಇನ್ನೂ ವಿಶೇಷವೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಈ ಮೂಲಕ ಅವರ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ನನ್ನ ಆತ್ಮೀಯ ಗೆಳತಿಯರಲ್ಲೊಬ್ಬರಾದ ರಕ್ಷಿತಾ ಪ್ರೇಮ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಹ್ಯಾವ್ ಎ ಫ್ಯಾಬ್ಯುಲಸ್ ಇಯರ್ ಅಹೇಡ್ ಎಂದು ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ಪ್ರೇಮ್ ಅವರು ಈ ಸಂಭ್ರಮ ಕ್ಷಣದ ವಿಡಿಯೋವನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ರಕ್ಷಿತಾ ಪ್ರೇಮ್ ಸಹ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ವಿಶ್ ಯು ಹ್ಯಾಪಿ ಬರ್ತ್‍ಡೇ ಗಾಡ್ ಬ್ಲೆಸ್ ಯು ಎಂದು ಬರೆದು ಹ್ಯಾಶ್ ಟ್ಯಾಗ್‍ನೊಂದಿಗೆ ರಕ್ಷಿತಾ ಹಾಗೂ ಹೃದಯದ ಎಮೋಜಿಗಳನ್ನು ಪ್ರೇಮ್ ಪೋಸ್ಟ್ ಮಾಡಿದ್ದಾರೆ.

ಅಲ್ಲದೆ ಪ್ರೇಮ್ ಅವರೇ ರಕ್ಷಿತಾ ಅವರ ಹುಟ್ಟಹಬ್ಬ ಆಚರಣೆಗೆ ಸಂಪೂರ್ಣ ವ್ಯವಸ್ಥೆ ಮಾಡಿದ್ದು, ಮಗ ಸೂರ್ಯ ಕೇಕ್ ತಯಾರಿಸಿದ್ದಾನಂತೆ. ಈ ಮೂಲಕ ಅಮ್ಮನಿಗೆ ಸರ್ಪ್ರೈಸ್ ನೀಡಿದ್ದಾನೆ. ಕುಟುಂಬದವರೆಲ್ಲ ಸೇರಿ ಸಂಭ್ರಮದಿಂದಲೇ ಆಚರಿಸಿದ್ದು, ಸ್ನೇಹಿತರು ಹಾಗೂ ಕುಟುಂಬಸ್ಥರ ಗೈರು ಕಾಡುತ್ತಿದೆ. ಹೋಮ್ ಕ್ವಾರೆಂಟೈನ್ ಹಿನ್ನೆಲೆ ಬಹುತೇಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರಿದ್ದಾರೆ. ಇದಕ್ಕಾಗಿ ರಕ್ಷಿತಾ ಸಹ ಬೇಸರಗೊಂಡಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ರಕ್ಷಿತಾ ಅವರ ಹುಟ್ಟುಹಬ್ಬವನ್ನು ಮನೆಯಲ್ಲೇ ಆಚರಿಸುತ್ತಿದ್ದೇವೆ ಎಂದು ಪ್ರೇಮ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ರಕ್ಷಿತಾ ಧನ್ಯವಾದ ತಿಳಿಸಿದ್ದು, ಸೂರ್ಯ, ಮಂಜು ಬೇಕಿಂಗ್ ಎ ಕೇಕ್…. ಪ್ರೇಮ್ ಎಲ್ಲವನ್ನೂ ಆಯೋಜಿಸಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಈ ಕ್ಷಣವನ್ನು ಸುಂದರವಾಗಿಸಲು ಪ್ರಯತ್ನಿಸಿದ್ದಾರೆ. ನನ್ನ ತಾಯಿ, ಕುಟುಂಬ ಹಾಗೂ ನನ್ನ ಸ್ನೇಹಿತರು ಸೇರಿದಂತೆ ನನ್ನ ಜೀವನದಲ್ಲಿ ಹತ್ತಿರವಾದವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಕೆಲವರು ನನ್ನೊಂದಿಗೆ ಲೈವ್ ಮಾಡುವ ಮೂಲಕ ಶುಭಕೋರುತ್ತಿರುವುದು ನೋಡಿ ನಗು ಬರುತ್ತಿದೆ. ನಿಮ್ಮ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು. ಹಲವರು ಶುಭ ಕೋರಿದ್ದನ್ನು ನಾನು ನೋಡಿದ್ದೇನೆ. ನೀವೆಲ್ಲರೂ ಸುರಕ್ಷಿತವಾಗಿರಿ…..ಲೆಟ್ಸ್ ಪಾರ್ಟಿ ಹಾರ್ಡ್ ಪೀಪಲ್…..ಐ ಲವ್ ಯು ಆಲ್ ಆ್ಯಂಡ್ ಥ್ಯಾಂಕ್ ಯು ಟು ಒನ್ ಆ್ಯಂಡ್ ಆಲ್ ಅಗೇನ್ ಎಂದು ಬರೆದುಕೊಂಡಿದ್ದಾರೆ. ಹ್ಯಾಷ್ ಟ್ಯಾಗ್‍ನೊಂದಿಗೆ ಲವ್, ಬರ್ತ್‍ಡೇ ಗರ್ಲ್, ಬರ್ತ್‍ಡೇ ಡ್ಯೂರಿಂಗ್ ಲಾಕ್‍ಡೌನ್ ಎಂದು ಹಾಕಿದ್ದಾರೆ.

 

View this post on Instagram

 

I wish for all of your wishes to come true.✨ Happieeee birthday my dea raks????❤️ God bless !!✨✨@rakshitha__official ????

A post shared by Rachita Ram (@rachita_instaofficial) on

ಡಿಂಪಲ್ ಕ್ವೀನ್ ರಚಿತಾ ರಾಮ್ ಸಹ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದು, ನಿಮ್ಮೆಲ್ಲ ಹಾರೈಕೆಗಳು ಈಡೇರಲಿ ಎಂದು ಶುಭ ಕೋರುತ್ತೇನೆ. ಹ್ಯಾಪಿ ಬರ್ತ್‍ಡೇ ಮೈ ಡೀಯ್ ರಕ್ಸ್….ಗಾಡ್ ಬ್ಲೆಸ್ ಎಂದು ಬರೆದಿದ್ದಾರೆ. ಇದಕ್ಕೆ ರಕ್ಷಿತಾ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಮೈ ಲವ್ ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ರಕ್ಷಿತಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದಿದೆ.

Share This Article
Leave a Comment

Leave a Reply

Your email address will not be published. Required fields are marked *