ಬಳ್ಳಾರಿ: ಭಾರತ ಲಾಕ್‍ಡೌನ್‍ಗೆ ರಾಯಚೂರಿನ ಯುವತಿಯೊಬ್ಬಳು ಬಲಿಯಾದ ಘಟನೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಬೆಂಗಳೂರಿಳಿಂದ ರಾಯಚೂರಿನ ಸಿಂಧನೂರಿಗೆ ವಾಪಸ್ ತೆರಳುತ್ತಿದ್ದ ಗಂಗಮ್ಮ ಎಂಬವರು 3 ದಿನ ಅನ್ನಾಹಾರ ಸಿಗದೆ ಸಾವನ್ನಪ್ಪಿದ್ದಾರೆ. ಮಾರ್ಚ್ 30 ರಂದು ಬೆಂಗಳೂನಿಂದ ಸಿಂಧನೂರಿಗೆ ಗಂಗಮ್ಮ ಮತ್ತು ಕುಟುಂಬ ಟ್ರ್ಯಾಕ್ಟರ್ ಮೂಲಕ ಹೊರಟಿತ್ತು. ಆದರೆ ತುಮಕೂರು ಬಳಿ ಟೋಲ್‍ನಲ್ಲಿ ತಡೆಯಲಾಗಿತ್ತು. ನಂತರ ಕುಟುಂಬಸ್ಥರ ಜೊತೆ ನಡೆದೇ ಸಾಗಿದ್ದರು.
Advertisement
Advertisement
ಬಳ್ಳಾರಿ ಬಳಿ ತೆರಳಿದ್ದಾಗ ಎಲ್ಲರನ್ನೂ ವಶಕ್ಕೆ ಪಡೆದ ಪೊಲೀಸರು ವಲಸಿಗರ ಶಿಬಿರದಲ್ಲಿ ಇಟ್ಟಿದ್ದರು. ಅಷ್ಟೊತ್ತಿಗಾಗಲೇ ಸರಿಯಾಗಿ ಊಟ ಸಿಗದ ಕಾರಣ ರಕ್ತ ಕಡಿಮೆಯಾಗಿ, ಕಿಡ್ನಿ ಸಮಸ್ಯೆಯಿಂದ ಗಂಗಮ್ಮ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಏಪ್ರಿಲ್ 5ರಂದು ಸಾವನ್ನಪ್ಪಿದ್ದಾರೆ. ಘಟನೆಯನ್ನು ಸಿಎಂ ಯಡಿಯೂರಪ್ಪಗೆ ಸೂಚ್ಯವಾಗಿ ತಿಳಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
Advertisement
ತಾಯಿ, ಮಗಳನ್ನ ದೂರ ಮಾಡಿತು ಹೆಮ್ಮಾರಿ:
ಯಾದಗಿರಿಯ ಶಹಾಪುರದ ಕೊಂಗಡಿ ಗ್ರಾಮದಲ್ಲಿ ಬಾಲಕಿಯೊಬ್ಬರು ತೀವ್ರ ಕೆಮ್ಮು, ಜ್ವರ, ಗಂಟಲು ನೋವಿಂದ ಸಾವನ್ನಪ್ಪಿದ್ದಾರೆ. ಇದು ಕೂಡ ಕೊರೊನಾಗೇ ಬಲಿಯಾ ಎನ್ನುವ ಆತಂಕ ಹೆಚ್ಚಿಸಿದೆ. ಏಪ್ರಿಲ್ 1ರಂದು ಬಾಲಕಿ ಕುಟುಂಬ ಬೆಂಗಳೂರಿಗೆ ಬಂದಿತ್ತು. ಬಾಲಕಿ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಕಲಬುರಗಿಗೆ ರವಾನೆ ಮಾಡಲಾಗಿದೆ. ಕೊರೊನಾ ಪ್ರೋಟೋಕಾಲ್ ನಿಯಮದಂತೆ ಐದು ಜನ ಅಧಿಕಾರಿ ನೇತೃತ್ವದಲ್ಲಿ ಬಾಲಕಿ ಶವಸಂಸ್ಕಾರ ಮಾಡಲಾಗಿದೆ.