ಮೈಸೂರು: ಲಾಕ್‍ಡೌನ್ ಹಿನ್ನೆಲೆ ಇಡೀ ದೇಶವೇ ಸ್ತಬ್ಧವಾಗಿದ್ದು, ಅಗತ್ಯ ವಸ್ತುಗಳು ಸಹ ಸರಿಯಾಗಿ ತಲುಪುತ್ತಿಲ್ಲ. ಇದರ ಜೊತೆಗೆ ಎಣ್ಣೆ ಸಹ ಕುಡುಕರಿಗೆ ಸಿಗದಂತಾಗಿ ಭಾರೀ ಕಿರಿಕಿರಿಗೆ ಕಾರಣವಾಗಿದೆ. ಮೈಸೂರಿನ ಹೊಯ್ಸಳ ನಗರದ ನಿವಾಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆನಂದ್(45) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಕುಡಿಯಲು ಮದ್ಯ ಸಿಗದ ಕಾರಣ ನೊಂದು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರಣ್ಯಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ದೇಶದಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದ್ದು, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳು ಸ್ತಬ್ಧವಾಗಿವೆ. ಈ ಹಿನ್ನೆಲೆ ಮದ್ಯದಂಗಡಿಯನ್ನು ಸಹ ಮುಚ್ಚಲಾಗಿದೆ. ಇತ್ತೀಚೆಗೆ ಕುಡುಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಮನಗಂಡು ಕೇರಳ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ.