ಕೋಲಾರ: ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಮದ್ಯದಂಗಡಿಗಳು ಪುನರಾರಂಭಗೊಂಡಿದ್ದು, ಮದ್ಯಪ್ರಿಯರು ಬೆಳಗಿನಿಂದ ಕಾದು ಮದ್ಯ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಿನಿಂದ ಸಾಲುಗಟ್ಟಿ ನಿಂತಿದ್ದ ಮದ್ಯ ವ್ಯಸನಿಗಳು ಅಂಗಡಿ ತೆರೆಯುವುದನ್ನು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಜಿಲ್ಲೆಯಲ್ಲಿ 74 ಮದ್ಯದಂಗಡಿಗಳಿದ್ದು, ಬಹುತೇಕ ಎಲ್ಲ ಮದ್ಯದಂಗಡಿಗಳ ಮುಂದೆ ಬೆಳಗ್ಗೆ ಆರು ಗಂಟೆಯಿಂದಲೇ ಎಣ್ಣೆ ಪ್ರಿಯರು ಸಾಲುಗಟ್ಟಿ ನಿಂತಿದ್ದರು. ಕೆಲವರು ಮದ್ಯದಂಗಡಿ ಮುಂದೆ ಗಂಧದಕಡ್ಡಿ ಹಚ್ಚಿ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.
Advertisement
Advertisement
ಇನ್ನೂ ವಿಶೇಷ ಎಂಬಂತೆ ಕೆಲವರು ವಿಡಿಯೋ ಕಾಲ್ ಮಾಡಿ ಮದ್ಯದಂಗಡಿ ತೆರೆದಿರುವ ಬಗ್ಗೆ ಸ್ನೇಹಿತರಿಗೆ ತೋರಿಸಿ ಸಂತಸ ಹಂಚಿಕೊಂಡರು. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಮದ್ಯದಂಗಡಿಗಳು ತೆರೆಯಬೇಕು, ಒಬ್ಬರಿಗೆ 750 ಎಂ.ಎಲ್. ಗಿಂತ ಹೆಚ್ಚು ಮದ್ಯ ಮಾರಾಟಮಾಡಬಾರದು, ಮಾಸ್ಕ್ ಧರಿಸದಿದ್ದವರಿಗೆ ಮದ್ಯ ಇಲ್ಲ ಎಂಬ ನಿಯಮ ಪಾಲಿಸಲಾಗುತ್ತಿದೆ. ಅಲ್ಲದೆ ಸಿಸಿ ಟಿವಿ ಅಳವಡಿಕೆ ಕಡ್ಡಾಯ, ಸಾಮಾಜಿಕ ಅಂತರ ಪಾಲಿಸಬೇಕು ಎಂಬ ಷರತ್ತುಗಳನ್ನು ಜಿಲ್ಲಾಡಳಿತ ವಿಧಿಸಿದೆ.